Advertisement

ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ 100 ಕೋಟಿ ನೀಡದ್ದಕ್ಕೆ ಆಕ್ರೋಶ

12:14 PM Mar 27, 2017 | |

ಕೆಂಗೇರಿ: ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಲು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ದೂರಧಿದೃಷ್ಟಿಯೇ ಕಾರಣ. ಅವರಿಗೆ ಗೌರವ ಸಲ್ಲಿಸಲು ಬಿಬಿಎಂಪಿ ಮುಂದಾಗದಿರುವುದು ನೋವಿನ ಸಂಗತಿ ಎಂದು ಸಂಸದ ಡಿ.ಕೆ.ಸುರೇಶ್‌ ವಿಷಾದಿಸಿದರು.

Advertisement

ಕೊಟ್ಟಿಗೆಪಾಳ್ಯ ವಾರ್ಡ್‌ನ ಹಲವೆಡೆ ಶುದ್ಧಕುಡಿಯುವ ನೀರಿನ ಘಟಕಗಳ ಉದ್ಗಾಟನೆ ಹಾಗೂ ಸುಂಕದಕಟ್ಟೆಯ ಪೈಪ್‌ಲೈನ್‌ ರಸ್ತೆಯಲ್ಲಿ “ನಮ್ಮ ಇಂದಿರಾ’ ಉದ್ಯಾನವನ ಹಾಗೂ ಬಯಲು ಜಿಮ್‌ನ್ನು ಲೋಕಾರ್ಪಣೆ ಮಾಡಿ ಮಾತಧಿನಾಡಿದರು.

“ಕೆಂಪೇಗೌಡರ ವಿಚಾರಧಿಧಾರೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಲುವಾಗಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ನೂರು ಕೋಟಿ ರೂ. ಅನುಧಾನ ನೀಡಲು ಬಿಬಿಎಂಪಿಗೆ ಕೋರಿಕೆ ಸಲ್ಲಿಸಲಾಗಿತ್ತು. ಆದರೆ ಬಜೆಟ್‌ನಲ್ಲಿ ಕೇವಲ 7 ಕೋಟಿ ರೂ.ಗಳ ಅನುಧಾನ ನೀಡುವ ಭರವಸೆ ನೀಡಿರುವುದು ಜನತೆಗೆ ಮಾಡಿದ ಮೋಸ ಹಾಗೂ ಕೆಂಪೇಗೌಡರಿಗೆ ಮಾಡಿದ ಅಪಮಾನ,” ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಸೋಮವಾರ ನಡೆಯಲಿರುವ ಬಿಬಿಎಂಪಿ ಬಜೆಟ್‌ ಪೂರಕ ಚರ್ಚೆಯಲ್ಲಿ ಪಾಲ್ಗೊಂಡು ಈ ವಿಷಯ ಪ್ರಸ್ಥಾಪಿಸುತ್ತೇನೆ. ಅನುದಾನ ಹೆಚ್ಚಿಸದಿದ್ದರೆ ಪಾಲಿಕೆ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next