Advertisement

ಕೇಕ್ ಕತ್ತರಿಸುತ್ತಿದ್ದ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ |ವಿಡಿಯೋ  

02:22 PM Sep 23, 2021 | Team Udayavani |

ನವದೆಹಲಿ: ಹಾಲಿವುಡ್ ನಟಿ ನಿಕೋಲ್ ರಿಚಿ ಇತ್ತೀಚಿಗೆ 40ನೇ ವರ್ಷಕ್ಕೆ ಕಾಲಿಟ್ಟರು. ಈ ಸುದಿನದಂದು ಕೆಕ್ ಕತ್ತರಿಸಿದ ಸಂಭ್ರಮಿಸುತ್ತಿದ್ದ ವೇಳೆ ಅವಘಡವೊಂದು ಜರುಗಿತು.

Advertisement

ಅಮೆರಿಕಾದ ನಟಿ, ರೂಪದರ್ಶಿ ಹಾಗೂ ಫ್ಯಾಶನ್ ಡಿಸೈನರ್ ಆಗಿರುವ ನಿಕೋಲ್ ರಿಚಿ ಅವರು ಸೆಪ್ಟೆಂಬರ್ 21ಕ್ಕೆ 40 ನೇ ವಸಂತಕ್ಕೆ ಕಾಲಿಟ್ಟರು. ಸ್ನೇಹಿತರು, ಕುಟುಂಬಸ್ಥರು ಹಾಗೂ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಅದರಂತೆ ಸುಂದರವಾದ ಕೇಕ್ ಕಟ್ ಮಾಡಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೇ ಪ್ರಮಾದವೊಂದು ನಡೆದು ಬಿಟ್ಟಿತು.

ನಿಕೋಲ್ ಅವರು ನಗುಮೊಗದಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ತಮ್ಮ ಬಾಲ್ಯದ ಫೋಟೊ ಹೊಂದಿದ್ದ ಕೇಕ್ ಮೇಲೆ ಉರಿಯುತ್ತಿದ್ದ ಮೇಣದಬತ್ತಿಗಳನ್ನು ಆರಿಸಲು ಮುಂದೆ ಬಾಗಿದರು. ಈ ವೇಳೆ ಕ್ಯಾಂಡಲ್‍ ಅವರ ತಲೆಯ ಕೂದಲುಗಳಿಗೆ ತಾಗಿತು. ನೋಡು ನೋಡುತ್ತಿದ್ದಂತೆ ಅವರ ಕೂದಲು ಹಾಗೂ ಕೊರಳಿಗೆ ಬೆಂಕಿ ಹತ್ತಿಕೊಂಡಿತು. ತಕ್ಷಣವೇ ಸ್ಥಳದಲ್ಲಿದ್ದವರು ಸಹಾಯಕ್ಕೆ ಬಂದು ಬೆಂಕಿ ನಂದಿಸಿದರು.

ಇನ್ನು ನಿಕೋಲ್ ಅವರು ಈ ಘಟನೆಯ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಾಕಷ್ಟು ಅಭಿಮಾನಿಗಳು, ಸ್ನೇಹಿತರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಸುರಕ್ಷಿತವಾಗಿರಿ ಎಂದು ಕಾಮೆಂಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next