Advertisement

ಪಿಪಿಐಎಂಗೆ ನ್ಯಾಕ್‌ ‘ಎ+ ಗ್ರೇಡ್‌’ಮಾನ್ಯತೆ

02:21 AM May 04, 2019 | Sriram |

ಉಡುಪಿ: ನ್ಯಾಶನಲ್ ಅಸೆಸ್ಮೆಂಟ್ ಆ್ಯಂಡ್‌ ಅಕ್ರೆಡಿಟೇಷನ್‌ ಕೌನ್ಸಿಲ್ (ನ್ಯಾಕ್‌) ಉನ್ನತ ವರ್ಗದ ತಂಡವು ಉಡುಪಿಯ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗೆ ಭೇಟಿ ನೀಡಿ ಸಂಸ್ಥೆಯ ಶೈಕ್ಷಣಿಕ, ಸಂಶೋಧನ ಅಭಿವೃದ್ಧಿ, ಮೂಲ ಸೌಕರ್ಯ ಮುಂತಾದವುಗಳನ್ನು ಪರಿಶೀಲಿಸಿ ಸಂಸ್ಥೆಗೆ ‘ಎ+ ಗ್ರೇಡ್‌’ ಅನ್ನು ನೀಡಿದೆ.

Advertisement

ಸಮಿತಿಯ ಅಧ್ಯಕ್ಷ, ಹರಿಯಾಣದ ಮಹರ್ಷಿ ದಯಾನಂದ ವಿವಿಯ ಮಾಜಿ ಉಪಕುಲಪತಿ ಡಾ| ಬಿಜೆಂದರ್‌ ಕುಮಾರ್‌ ಪುನಿಯ, ಸದಸ್ಯ ಸಂಯೋಜಕ, ಗುಜರಾತ್‌ನ ಸರ್ದಾರ್‌ ಪಟೇಲ್ ವಿವಿಯ ಪ್ರೊ| ಪ್ರಿಯನ್‌ ಪಿ.ಕೆ., ಸದಸ್ಯೆ, ಅಸ್ಸಾಂನ ಸರಕಾರಿ ಸ್ನಾತಕೋತರ ಕೇಂದ್ರದ ಪ್ರಾಂಶುಪಾಲೆ ಡಾ| ಸೊವರಾಣಿ ಶರ್ಮ ಭೇಟಿ ನೀಡಿದ್ದರು. ಸಮಿತಿ ಸದಸ್ಯರು ಸಂಸ್ಥ್ಧೆಯ ಮೂಲ ಸೌಕರ್ಯ, ಅಧ್ಯಾಪಕ, ಅಧ್ಯಾಪಕೇತರ ಸಿಬಂದಿ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

ನ್ಯಾಕ್‌ ಸಮಿತಿ ಭೇಟಿ ಸಂದರ್ಭ ಉಪಸ್ಥಿತರಿದ್ದ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕಾರ್ಯದರ್ಶಿ ಡಾ| ಜಿ.ಎಸ್‌. ಚಂದ್ರಶೇಖರ್‌, ಖಜಾಂಚಿ ಪ್ರದೀಪ್‌ ಕುಮಾರ್‌, ಜತೆಕಾರ್ಯದರ್ಶಿ ಡಾ| ಎಂ.ಆರ್‌. ಹೆಗ್ಡೆ ನ್ಯಾಕ್‌ ಸದಸ್ಯರೊಂದಿಗೆ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next