Advertisement

ನೈಸ್‌ ವಿರುದ್ಧ ಸುಮ್ಮನೆ ಕುಳಿತಿಲ್ಲ 

06:15 AM Nov 30, 2018 | Team Udayavani |

ಬೆಂಗಳೂರು: “ನೈಸ್‌ ಸಂಸ್ಥೆಯ ವಿರುದ್ಧ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿಲ್ಲ. ನೈಸ್‌ ಸಂಸ್ಥೆಯ ಮಾಲೀಕರು ಜಾಣರಿದ್ದು, ಅವರು ಎಲ್ಲವನ್ನೂ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಸರ್ಕಾರ ಅವರ ವಿರುದ್ಧ ಕ್ರಮಕ್ಕೆ ಸೂಕ್ಷ್ಮವಾಗಿ ಹೆಜ್ಜೆ ಇಡುತ್ತಿದೆ’ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟ ಉಪ ಸಮಿತಿಯ ವರದಿಯಲ್ಲಿ ಏನಿದೆ ಎನ್ನುವ ಮಾಹಿತಿಯಿದೆ. ನೈಸ್‌ ಸಂಸ್ಥೆ ಮೂಲ ಒಪ್ಪಂದದಲ್ಲಿರುವ ಮಾಹಿತಿ ಹಾಗೂ ನಂತರ ಆಗಿರುವ ಬದಲಾವಣೆಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಂಡು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸುಮ್ಮನೆ ಕುಳಿತಿಲ್ಲ.ರಾಜ್ಯದ ಆಸ್ತಿ ಯಾರದೋ ಪಾಲು ಆಗಲು ಬಿಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next