ಸ್ಯಾನ್ ಸಾಲ್ವಡಾರ್: 2023 ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನಿಕರಾಗುವಾದ ಸುಂದರಿ ಶೆನ್ನಿಸ್ ಪಲಾಸಿಯೊಸ್ ಅವರು ಮೊದಲ ಸ್ಥಾನ ಪಡೆದು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 72ನೇ ವಿಶ್ವ ಸುಂದರಿ ಕಾರ್ಯಕ್ರಮವು ಎಲ್ ಸಾಲ್ವಡಾರ್ ನ ಸ್ಯಾನ್ ಸಾಲ್ವಡಾರ್ ನಲ್ಲಿರುವ ಜೋಸ್ ಅಡಾಲ್ಫೊ ಪಿನೆಡಾ ಅರೆನಾದಲ್ಲಿ ನಡೆಯಿತು.
ನವೆಂಬರ್ 19 ರಂದು ಜೋಸ್ ಅಡಾಲ್ಫ್ ಪಿನೆಡಾ ಅರೆನಾದಲ್ಲಿ ನಡೆದ ಭವ್ಯ ಈವೆಂಟ್‌ನಲ್ಲಿ ಭಾರತದ ಶ್ವೇತಾ ಶಾರದಾ ಅವರನ್ನು ಸೋಲಿಸುವ ಮೂಲಕ ಶೆನ್ನಿಸ್ ಪಲಾಸಿಯೋಸ್ 2023 ರ ವಿಶ್ವ ಸುಂದರಿ ಪ್ರಶಸ್ತಿ ಪಡೆದರು.
2022ರ ವಿಶ್ವ ಸುಂದರಿ ಯುಎಸ್ಎ ನ ಗ್ಯಾಬ್ರಿಯೆಲ್ ಅವರು ವೇದಿಕೆಯಲ್ಲಿ ಶೆನ್ನಿಸ್ ಪಲಾಸಿಯೊಸ್ ಅವರಿಗೆ ಕಿರೀಟ ತೊಡಿಸಿ ಅಲಂಕರಿಸಿದರು. ಶೆನ್ನಿಸ್ ಪಲಾಸಿಯೊಸ್ ಈ ವರ್ಷ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೊದಲ ನಿಕರಾಗುವಾ ಮಹಿಳೆ.
ಅಂತಿಮ ಸುತ್ತಿನಲ್ಲಿ, ಶೆನ್ನಿಸ್ ಅವರಿಗೆ ನೀವು ಜೀವನದಲ್ಲಿ ಒಂದು ದಿನವನ್ನು ಕಳೆಯಲು ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು 18 ನೇ ಶತಮಾನದ ಬ್ರಿಟಿಷ್ ತತ್ವಜ್ಞಾನಿ ಮತ್ತು ಸ್ತ್ರೀವಾದಿ ಮೇರಿ ವೋಲ್ಸ್ಟೋನ್ಕ್ರಾಫ್ಟ್ ಅವರನ್ನು ಆಯ್ಕೆ ಮಾಡಿದರು. “ತನ್ನ ಮಿತಿಯನ್ನು ಮೀರಿದ್ದ ಅವರು ಅನೇಕ ಮಹಿಳೆಯರಿಗೆ ಅವಕಾಶವನ್ನು ನೀಡಿದ್ದರು. ಇಂದು ಮಹಿಳೆಯರಿಗೆ ಯಾವುದೇ ಮಿತಿಗಳಿಲ್ಲ” ಎಂದು ಹೇಳಿದರು.