Advertisement

Fake notes;NIAಯಿಂದ ಬೆಂಗಳೂರು,ಬಳ್ಳಾರಿ ಸೇರಿ ಏಕಕಾಲದಲ್ಲಿ 4 ರಾಜ್ಯಗಳಲ್ಲಿ ದಾಳಿ

05:48 PM Dec 02, 2023 | Team Udayavani |

ಹೊಸದಿಲ್ಲಿ/ ಬಳ್ಳಾರಿ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದೇಶದ ವಿವಿಧ ಭಾಗಗಳಲ್ಲಿ ನಕಲಿ ಭಾರತೀಯ ಕರೆನ್ಸಿ ನೋಟು (FICN) ದಂಧೆಗಳನ್ನು ಭೇದಿಸಲು ಬೆಂಗಳೂರು, ಬಳ್ಳಾರಿ ಸೇರಿ ನಾಲ್ಕು ರಾಜ್ಯಗಳಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಿದ್ದು, ನಕಲಿ ನೋಟುಗಳು, ಕರೆನ್ಸಿ ಮುದ್ರಣ ಕಾಗದ, ಪ್ರಿಂಟರ್‌ಗಳು ಮತ್ತು ಡಿಜಿಟಲ್ ಗ್ಯಾಜೆಟ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Advertisement

ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಕರ್ನಾಟಕದಲ್ಲಿ ದಾಳಿ ನಡೆಸಲಾಗಿದೆ. ಈ ಪ್ರಕರಣವು ಶಂಕಿತರಿಂದ ರೂಪಿಸಲಾದ ದೊಡ್ಡ ಪಿತೂರಿಗೆ ಸಂಬಂಧಿಸಿದ್ದು, ಕೆಲವರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ನವೆಂಬರ್ 24 ರಂದು ದಾಖಲಿಸಲಾದ ಪ್ರಕರಣದಲ್ಲಿ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ…

Advertisement

Udayavani is now on Telegram. Click here to join our channel and stay updated with the latest news.

Next