Advertisement

ಮಂಗಳೂರು : ಬೆಳ್ಳಂಬೆಳಗ್ಗೆ PFI, SDPI ಕಚೇರಿ ಮೇಲೆ NIA ದಾಳಿ, ಕಾರ್ಯಕರ್ತರಿಂದ ಪ್ರತಿಭಟನೆ

07:45 AM Sep 22, 2022 | Team Udayavani |

ಮಂಗಳೂರು : ಎನ್ ಐ ಎ ಅಧಿಕಾರಿಗಳ ತಂಡ ಮಂಗಳೂರಿನಲ್ಲಿರುವ ಎಸ್ ಡಿಪಿಐ ಹಾಗೂ ಪಿಎಫ್ ಐ ಕಚೇರಿಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.

Advertisement

ಮಂಗಳೂರು ನಗರದ ಸುತ್ತಮುತ್ತ ಇರುವ ಕಚೇರಿಗಳ ಮೇಲೆ ಏಕಕಾಲಕ್ಕೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ನಲ್ಲೆಕಾಯಿ ರಸ್ತೆ, ಬಜ್ಪೆ, ಕುಳಾಯಿ, ಕಾವೂರು ಸೇರಿದಂತೆ ಹಲವು ತಂಡಗಳಾಗಿ ದಾಳಿ ನಡೆಸಿದೆ, ಅಲ್ಲದೆ ದಾಳಿ ವೇಳೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಮುಂಜಾನೆ ಸುಮಾರು 3;30 ರ ಸುಮಾರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ದಾಳಿ ನಡೆಸಿದ ಪ್ರದೇಶದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇತ್ತ ದಾಳಿ ನಡೆಯುತ್ತಿದ್ದಂತೆ ಪಿಎಫ್ ಐ ಕಾರ್ಯಕರ್ತರು ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next