ಹೊಸದಿಲ್ಲಿ: ಪ್ರಮುಖ ಬೆಳವಣಿಗೆಯಲ್ಲಿ ಪಂಜಾಬ್ ಪೊಲೀಸ್ ಮತ್ತು ಎನ್ಐಎ ವಿಶೇಷ ಕಾರ್ಯಪಡೆ ಲುಧಿಯಾನ ಕೋರ್ಟ್ ಬಾಂಬ್ ಸ್ಫೋಟ ಪ್ರಕರಣವನ್ನು ಭೇದಿಸಿದೆ. ಶನಿವಾರದಂದು ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಆತನ ಗುರುತನ್ನು ರಹಸ್ಯವಾಗಿಡಲಾಗಿದೆ.
“ಪಂಜಾಬ್ ಪೊಲೀಸರು ಲೂಧಿಯಾನ ಕೋರ್ಟ್ ಸ್ಫೋಟ ಪ್ರಕರಣವನ್ನು ಭೇದಿಸಿದ್ದಾರೆ, ಪ್ರಮುಖ ಆರೋಪಿಯನ್ನು ಗಡಿ ರೇಂಜ್ ನ ಎಸ್‌ಟಿಎಫ್ ತಂಡವು ಬಂಧಿಸಿದೆ” ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ವಿಕೆ ಭಾವ್ರಾ ಹೇಳಿದರು.
“ಸ್ಫೋಟಕ್ಕೆ ಬಳಸಲಾದ ಐಇಡಿಯನ್ನು ಐಎಸ್‌ಐ ಬೆಂಬಲಿತ ಡ್ರೋನ್ ಮೂಲಕ ಸಾಗಿಸಲಾಗಿದೆ” ಎಂದರು.
ಇದನ್ನೂ ಓದಿ:ಬ್ಯಾಸಗ್ಯಾಗ ಪ್ರವಾಹ ಬಂದೈತಂದ್ರ, ಪೊಲಿಟಿಕ್ಸ್ ನ್ಯಾಗೂ ಸೈಕ್ಲೋನ್ ಬರತೈತಿ!
Related Articles
ಕೇಂದ್ರೀಯ ಸಂಸ್ಥೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಮನ್ವಯದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಮೇ 20 ರಂದು ಲುಧಿಯಾನ ಕೋರ್ಟ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಲಾಪರಾಧಿ ಸೇರಿದಂತೆ ಐವರನ್ನು ಎಸ್‌ಟಿಎಫ್ ಬಂಧಿಸಿತ್ತು. ಬಂಧಿತ ಅಪರಾಧಿಗಳು ಪಾಕಿಸ್ತಾನದಿಂದ ಸುಧಾರಿತ ಸ್ಫೋಟಕ ಸಾಧನಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ.