ತೀರ್ಥಹಳ್ಳಿ: ಇಬ್ಬರು ಯುವಕರು ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ, ಎನ್ ಐಎ ಅಧಿಕಾರಿಗಳ ತಂಡ ತಲೆಮರೆಸಿಕೊಂಡಿರುವ ಇಬ್ಬರು ಯುವಕರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ಸ್ಯಾಟಲೈಟ್ ಫೋನ್ ಬಳಕೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ ನಲ್ಲಿ ತೀರ್ಥಹಳ್ಳಿ ತಾಲೂಕಿನಾದ್ಯಂತ ಎನ್ ಐಎ ಅಧಿಕಾರಿಗಳು ಕೂಬಿಂಗ್ ನಡೆಸಿದ್ದರು. ಈ ವೇಳೆ ತೀರ್ಥಹಳ್ಳಿಯ ಇಬ್ಬರು ಯುವಕರು ಉಗ್ರರೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿತ್ತು. ಆದರೆ ಅಷ್ಟರಲ್ಲಾಗಲೇ ಯುವಕರು ನಾಪತ್ತೆಯಾಗಿದ್ದರು.
ನಂತರ ಕಳೆದ ವರ್ಷ ಮಾರ್ಚ್ 19 ರಂದು ಎನ್ ಐ ಎ ಅಧಿಕಾರಿಗಳು ತೀರ್ಥಹಳ್ಳಿಯ ಯುವಕರ ಮನೆಗೆ ಬಂದು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ:ತೈಲ ಬೆಲೆ ಇಳಿಕೆಗೆ ಬ್ರೆಂಟ್ ಕಚ್ಚಾ ತೈಲ ಬೆಲೆ ಏರಿಕೆ ಅಡ್ಡಿಯಾಗುತ್ತಿದೆಯೆ..!?
ಇದೀಗ ಹೆಚ್ಚಿನ ತನಿಖೆಗಾಗಿ ಮತ್ತೆ ಯುವಕರ ಮನೆಗೆ ಭೇಟಿ ನೀಡಿರುವ ಎನ್ ಐ ಎ ಅಧಿಕಾರಿಗಳು ತಲೆಮರೆಸಿಕೊಂಡಿರುವ ಯುವಕರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದಾರೆಯೇ ಎಂದು ತನಿಖೆಗೆ ನಡೆಸಿದ್ದಾರೆ.
ನಾಲ್ವರು ಎನ್ ಐಎ ಅಧಿಕಾರಿಗಳ ತಂಡದಿಂದ ತಲೆಮರಿಸಿಕೊಂಡ ಯುವಕರ ಕುಟುಂಬದವರ ತನಿಖೆ ನಡೆದಿದ್ದು, ಸ್ಥಳೀಯ ಪೊಲೀಸರ ಸಹಕಾರ ಪಡೆದುಕೊಂಡಿದ್ದಾರೆ.