Advertisement

10 ಶಂಕಿತ ಉಗ್ರರು ಅರೆಸ್ಟ್‌!: ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು!

02:55 PM Dec 26, 2018 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಮತ್ತು ಉತ್ತರ ಪ್ರದೇಶದ 16 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬುಧವಾರ ಮಿಂಚಿನ ನಾಳಿ ನಡೆಸಿರುವ  ರಾಷ್ಟ್ರೀಯ ತನಿಖಾ ದಳ ಮತ್ತು ಉಗ್ರ ನಿಗ್ರಹ ದಳದವರು 10 ಮಂದಿ ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಹೊಸ ಮಾದರಿಯ ಐಸಿಸ್‌  ಉಗ್ರ ಸಂಘಟನೆಯಾಗಿರುವ ಹರ್ಕತ್‌ ಉಲ್‌ ಹರ್ಬ್  ಇ ಇಸ್ಲಾಂ ನೊಂದಿಗೆ ನಂಟು ಇರುವುದು ಕಂಡು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. 

ಉತ್ತರ ಪ್ರದೇಶದ ಎಟಿಎಸ್‌ನ ಐಜಿಪಿ ಅಸೀಮ್‌ ಅರ್ಜುನ್‌ ಅವರು ದಾಳಿ ನಡೆಸಿರುವುದು ಖಚಿತ ಪಡಿಸಿದ್ದು ಐವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ. ಅನ್ರೋಲಾದ ಮದರಸಾವೊಂದರಿಂದ ಮೌಲ್ವಿಯೊಬ್ಬನನ್ನು 
ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದವರನ್ನು ಬೇರೆ ಬೇರೆ ಸ್ಥಳಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಬಂಧಿತರಿಂದ ರಾಕೆಟ್‌ ಲಾಂಚರ್‌, 100ಕ್ಕೂ ಹೆಚ್ಚು ಸಿಮ್‌ ಕಾರ್ಡ್‌ಗಳು ಕೆಲ ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. 

ಬಂಧಿತರ ಪೈಕಿ ಓರ್ವ ಇಂಜಿನಿಯರಿಂಗ್‌ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. 

Advertisement

ದೆಹಲಿಯ ಸೀಲಮ್‌ಪುರ್‌‌ನಲ್ಲಿಯೂ ದಾಳಿ ನಡೆಸಲಾಗಿದೆ. ಉಗ್ರರ ನಂಟಿನ ಜಾಡು ಬೆನ್ನಟ್ಟಿರುವ ಎನ್‌ಐಎ ಮತ್ತು ಎಟಿಎಸ್‌ ಸಿಬಂದಿಗಳು ಇನ್ನೂ ಕೆಲ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತರು ವಿದೇಶದಲ್ಲಿರುವ ಉಗ್ರನೊಬ್ಬನ ಸೂಚನೆಯ ಮೇರೆ ಸರಣಿ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next