Advertisement

ISIS ಜತೆ ನಂಟು: 17 ಜನರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

12:14 AM Jun 04, 2024 | Team Udayavani |

ಹೊಸದಿಲ್ಲಿ: ಐಸಿಸ್‌ ಉಗ್ರ ಸಂಘಟನೆ ಜತೆ ನಂಟು ಹೊಂದಿದ್ದ ಆರೋಪದಲ್ಲಿ 17 ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಆರೋಪ ಪಟ್ಟಿ ಸಲ್ಲಿಸಿದೆ. ಯುವಕರನ್ನು ಭಯೋತ್ಪಾದನೆಗೆ ಸೆಳೆಯುವುದು, ಸುಧಾರಿತ ಸ್ಫೋಟಕ ಸಾಧನಗಳ ತಯಾರಿಕೆ ಆರೋಪದ ಮೇರೆಗೆ ಮಹಾರಾಷ್ಟ್ರದ 15, ಉತ್ತರಾಖಂಡ ಹಾಗೂ ಹರಿಯಾಣದ ತಲಾ ಒಬ್ಬ ಆರೋಪಿಗಳ ಹೆಸರನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ.

Advertisement

ಕಳೆದ ವರ್ಷ ಮಾರ್ಚ್‌ನಲ್ಲಿ ಮೂರು ಜನರ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಅದಕ್ಕೆ ಪೂರಕವಾಗಿ ಈಗ 17 ಜನ ಸೇರಿ ಒಟ್ಟು 20 ಜನರ ಮೇಲೆ ಪಟಿಯಾಲಾ ಹೌಸ್‌ನ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next