ನವದೆಹಲಿ: ಘನತ್ಯಾಜ್ಯ ನಿರ್ವಹಣೆಯಲ್ಲಿ ತೀವ್ರ ವೈಫಲ್ಯ ತೋರಿದ ಕೇರಳದ ಕೊಚ್ಚಿ ನಗರಪಾಲಿಕೆಗೆ 100 ಕೋಟಿ ರೂ. ದಂಡ ಪಾವತಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸೂಚಿಸಿದೆ.
Advertisement
ಅಲ್ಲಿನ ಬ್ರಹ್ಮಪುರಂ ಎಂಬ ಪ್ರದೇಶದಲ್ಲಿ ರಾಶಿಬಿದ್ದಿದ್ದ ಕಸಕ್ಕೆ ಮಾ.2ರಂದು ಬೆಂಕಿ ಹತ್ತಿಕೊಂಡಿತ್ತು. ಅದರಿಂದ ಜನ ತೀವ್ರ ಉಸಿರಾಟದ ಸಮಸ್ಯೆಗೊಳಗಾಗಿದ್ದರು.
ಈ ಬೆಂಕಿಯನ್ನು ನಂದಿಸಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡಿದ್ದರು. ಈ ಪ್ರಕರಣದಲ್ಲಿ ನಗರಪಾಲಿಕೆ ತೀವ್ರ ನಿರ್ಲಕ್ಷ್ಯ ತೋರಿದೆ ಎಂದು ಎನ್‌ಜಿಟಿ ಹೇಳಿದೆ.