Advertisement

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

10:55 PM Dec 03, 2022 | Team Udayavani |

ಈ ವಿಶ್ವಕಪ್‌ನಲ್ಲಿ ಬ್ರಝಿಲ್‌ ಆಡಿದ ಮೊದಲ ಪಂದ್ಯದಲ್ಲೇ ತಾರೆ ನೇಮರ್‌ ಗಾಯಗೊಂಡಿದ್ದರು. ಆಗಲೇ ಈ ವಿಶ್ವಕಪ್‌ನಲ್ಲಿ ಅವರ ಆಟ ಮುಗಿಯಿತು ಎಂದು ಭಾವಿಸಲಾಗಿತ್ತು. ಆದರೆ ಇನ್ನೆರಡು ಪಂದ್ಯಗಳ ಬಳಿಕ ನಿರ್ಧರಿಸೋಣ ಎಂದು ತಂಡದ ಆಡಳಿತ ಮಂಡಳಿ ತೀರ್ಮಾನಿಸಿತ್ತು.

Advertisement

ಈಗಲೂ ನೇಮರ್‌ ಮತ್ತೆ ಆಡುವರೇ, ಇಲ್ಲವೇ ಎನ್ನುವ ಬಗ್ಗೆ ಖಚಿತ ಮಾಹಿತಿಯಿಲ್ಲ. ಈಗಿನ ಲೆಕ್ಕಾಚಾರದ ಪ್ರಕಾರ ಅವರ ಬಲಗಾಲು ಹಿಮ್ಮಡಿಯ ಮೂಳೆಗೆ ಆಗಿರುವ ಏಟು ನಿರೀಕ್ಷೆಗಿಂತ ತೀವ್ರವಾಗಿದೆ.

ಹಾಗಾಗಿ ಈ ವಿಶ್ವಕಪ್‌ನಿಂದ ಅವರು ಪೂರ್ಣವಾಗಿ ಹೊರಬೀಳುತ್ತಾರೆ. ಈಗಾಗಲೇ ಅವರು 3 ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಹೇಳಲಾಗಿದೆ.

ಹೀಗಿರುವಾಗ ಅವರು ಮತ್ತೆ ಆಡುವುದಾದರೂ ಹೇಗೆ ಎಂದು “ಮಿರರ್‌’ ವರದಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next