Advertisement

ವಿಶ್ವಕಪ್‌ ಫುಟ್ ಬಾಲ್‌ ಕ್ಷಣಗಣನೆ: ಬ್ರಝಿಲ್‌ ತಂಡ ಸೇರಿಕೊಂಡ ನೇಯ್ಮರ್‌

11:17 PM Nov 16, 2022 | Team Udayavani |

ಟುರಿನ್‌ (ಇಟಲಿ): ಕತಾರ್‌ ಆತಿಥ್ಯದಲ್ಲಿ ಸಾಗಲಿರುವ ಫಿಫಾ ವಿಶ್ವಕಪ್‌ ಫುಟ್ ಬಾಲ್‌ ಪಂದ್ಯಾವಳಿಗೆ ಇನ್ನು ಮೂರೇ ದಿನಗಳು ಬಾಕಿ. ಕಾಲ್ಚೆಂಡಿನ ಕಾದಾಟಕ್ಕೆ 32 ತಂಡಗಳು ಭರದ ಸಿದ್ಧತೆಯಲ್ಲಿ ತೊಡಗಿವೆ. ಈ ಹಂತದಲ್ಲಿ ನೆಚ್ಚಿನ ಬ್ರಝಿಲ್‌ ತಂಡದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಸ್ಟಾರ್‌ ಆಟಗಾರ ನೇಯ್ಮರ್‌ ಬುಧವಾರ ತಂಡವನ್ನು ಕೂಡಿಕೊಂಡರು.

Advertisement

ಪ್ಯಾರಿಸ್‌ ಸೇಂಟ್‌ ಜರ್ಮನ್‌ ಪರ ಆಡುತ್ತಿದ್ದ ನೇಯ್ಮರ್‌ ವಿಮಾನ ಸಮಸ್ಯೆ ಯಿಂದಾಗಿ ಫ್ರಾನ್ಸ್‌ನಲ್ಲೇ ಉಳಿದು ಕೊಂಡಿದ್ದರು. ಇದೀಗ ಇಟಲಿಗೆ ಆಗಮಿಸಿ ಟುರಿನ್‌ನಲ್ಲಿರುವ ತಂಡ ವನ್ನು ಕೂಡಿಕೊಂಡಿದ್ದಾರೆ.

ಶನಿವಾರದ ತನಕ ಬ್ರಝಿಲ್‌ ತಂಡ ಇಲ್ಲೇ ಉಳಿಯಲಿದೆ. ಬಳಿಕ ಕತಾರ್‌ ತಲುಪಲಿದೆ. 5 ಬಾರಿಯ ಚಾಂಪಿ ಯನ್‌ ತಂಡ ವಾಗಿ ರುವ ಬ್ರಝಿಲ್‌ ಕಳೆ ದೆರಡು ದಶಕಗಳಿಂದ ಪ್ರಶಸ್ತಿಯ ಬರಗಾಲದಲ್ಲಿದೆ. 2002ರ ಬಳಿಕ ಕಪ್‌ ಎತ್ತಲು ವಿಫ‌ಲ ವಾಗುತ್ತಲೇ ಬಂದಿದೆ. ನ. 24ರಂದು ಸರ್ಬಿಯಾವನ್ನು ಎದುರಿ ಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಕೂಟದ ಉದ್ಘಾಟನ ಪಂದ್ಯದಲ್ಲಿ ಎದುರಾಗುವ ತಂಡಗಳೆಂದರೆ ಆತಿ ಥೇಯ ಕತಾರ್‌ ಮತ್ತು ಈಕ್ವಡೋರ್‌. ಈ ಪಂದ್ಯ ರವಿವಾರ ನಡೆಯಲಿದೆ. ಅಂದೇ ನೆದರ್ಲೆಂಡ್ಸ್‌-ಸೆನೆಗಲ್‌ ಮುಖಾಮುಖಿ ಆಗಲಿವೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next