Advertisement

ನೆಕ್ಸಸ್‌ ಸೆಲೆಕ್ಟ್ ಮಾಲ್‌: ಮತ್ತೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಆಯುಷ್ಮನ್‌ ಖುರಾನಾ

02:58 PM Jun 21, 2024 | |

ಮಹಾನಗರ: ಭಾರತದ ಮೊದಲ ಪಟ್ಟಿಯಲ್ಲಿರುವ ರೀಟೇಲ್‌ ಆರ್‌ಇಐಟಿ ನೆಕ್ಸಸ್‌ ಸೆಲೆಕ್ಟ್ ಟ್ರಸ್ಟ್‌ (ಎನ್‌ಎಸ್‌ಇ: ಎನ್‌ಎಕ್ಸ್‌
ಎಸ್‌ಟಿ/ಬಿಎಸ್‌ಇ: 543913) ದೇಶದಲ್ಲಿ 17 ಮಾಲ್‌ಗ‌ಳನ್ನು ನಿರ್ವಹಿಸುತ್ತಿದ್ದೆ. ಇದೀಗ ಬಾಲಿವುಡ್‌ ನಟ ಆಯುಷ್ಮನ್‌ ಖುರಾನಾ ಅವರನ್ನು ಮತ್ತೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಘೋಷಣೆ ಮಾಡಿದೆ. ಈ ಸಹಯೋಗವು ನೆಕ್ಸಸ್‌ ಸೆಲೆಕ್ಟ್ ಮಾಲ್‌ಗ‌ಳ ಪಯಣದಲ್ಲಿ ಹೊಸ ಅಧ್ಯಾಯವಾಗಿದ್ದು, ದೇಶದ ಕೋಟ್ಯಂತರ ಮಂದಿಯ ಶಾಪಿಂಗ್‌ ಮತ್ತು ಜೀವನಾನುಭವವನ್ನು ಇದು
ಮರುವ್ಯಾಖ್ಯಾನ ಮಾಡಲಿದೆ.

Advertisement

ಆಯುಷ್ಮನ್‌ ಖುರಾನಾ ಅವರು ತಮ್ಮ ಅಮೋಘ ನಟನೆಯ ಮೂಲಕ ಈಗಾಗಲೇ ಎಲ್ಲ ವರ್ಗದ ಜನರ ಮೆಚ್ಚುಗೆಗೆ
ಪಾತ್ರವಾಗಿದ್ದಾರೆ. ನೆಕ್ಸಸ್‌ ಸೆಲೆಕ್ಟ್ ಮಾಲ್‌ನ ಜತೆ ನಿಂತು ಮತ್ತೆ ವೈವಿಧ್ಯ ಮತ್ತು ಆವಿಷ್ಕಾರವನ್ನು ಸಾಕಾರಗೊಳಿಸಲಿದ್ದಾರೆ. ಅವರ ಕ್ರಿಯಾತ್ಮಕ ವ್ಯಕ್ತಿತ್ವ ಮತ್ತು ಪ್ರವೃತ್ತಿಯ ಮೂಲಕ ಮಾಲ್‌ನ ಸಮರ್ಪಕ ಪ್ರತಿನಿಧಿಯಾಗಿ ಮೂಡಿ ಬರಲಿದ್ದಾರೆ.

ನೆಕ್ಸಸ್‌ ಸೆಲೆಕ್ಟ್ ಮಾಲ್‌ ನೊಂದಿಗೆ ಸಹಯೋಗದ ಕುರಿತು ಮಾತನಾಡಿದ ನಟ ಆಯುಷ್ಮನ್‌ ಖುರಾನಾ ಅವರು, ಇದು ಮನೆಗೆ
ಮರಳಿದ ಅನುಭವ ನೀಡುತ್ತಿದೆ. ನೆಕ್ಸಸ್‌ ಮಾಲ್‌ನೊಂದಿಗೆ ಮಾಡಿ ಕೊಂಡಿರುವ ಸಹಯೋಗ ಜನರಿಗೆ ಅವಿಸ್ಮರಣೀಯ ಅನುಭವ ನೀಡಲಿದೆ.

ಉನ್ನತ ದರ್ಜೆಯ ರೀಟೇಲ್‌ ಮತ್ತು ಎಂಟರ್‌ಟೈನ್‌ಮೆಂಟ್‌ಗೆ ಸಂಬಂಧಿಸಿದಂತೆ ನೆಕ್ಸಸ್‌ ಸೆಲೆಕ್ಟ್ ಮಾಲ್‌ ಯಾವಾಗಲೂ
ಮುಂಚೂಣಿಯಲ್ಲಿದೆ. ಮತ್ತೂಮ್ಮೆ ಈ ಪಯಣದೊಂದಿಗೆ ಜೊತೆಯಾಗಿರುವುದು ಹರ್ಷ ತಂದಿದೆ ಎಂದರು.

ನೆಕ್ಸಸ್‌ ಸೆಲೆಕ್ಟ್ ಟ್ರಸ್ಟ್‌ನ ಮುಖ್ಯ ಮಾರ್ಕೆಟಿಂಗ್‌ ಅಧಿಕಾರಿ ನಿಶಾಂಕ್‌ ಜೋಶಿ ಮಾತನಾಡಿ, ನೆಕ್ಸಸ್‌ ಸೆಲೆಕ್ಟ್ ಮಾಲ್‌ನ ಮುಖವಾಗಿ ಆಯುಷ್ಮನ್‌ ಖುರಾನಾ ಅವರನ್ನು ಸ್ವಾಗತಿಸಲು ಹರ್ಷವಾಗುತ್ತಿದೆ. ನಮ್ಮ ಪ್ರೋತ್ಸಾಹಕರಿಗೆ, ಗ್ರಾಹಕರಿಗೆ ಈ ಮೂಲಕ ವಿಶಿಷ್ಟ ಅನುಭವವನ್ನು ನೀಡಲಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next