Advertisement
ಕ್ಷಮಿಸಿ ಬಿಡು ಹುಡುಗೀ,ನಾನು ನಿನ್ನ ನೋವನ್ನು ಸಂಭ್ರಮಿಸಬಾರದಿತ್ತು,
ಉಳಿದವರು ವರ್ತಿಸಿದಂತೆ ನಾನೂ ನಡೆದುಕೊಂಡು ಅನರ್ಥ ಮಾಡಿಕೊಂಡೆ..
ನಡೆವವ ಎಡವುದು ಎಷ್ಟು ಸಹಜವೋ, ಅಷ್ಟೇ ಸಹಜ, ಓಡುವವ ಬೀಳುವುದು.
ನಿನ್ನನ್ನು ತಲೆ ಎತ್ತಿ ನೋಡುವ ಧೈರ್ಯ ಇಲ್ಲ,ಗೊತ್ತು ನನಗೆ, ಅಷ್ಟು ಅವಮಾನವಾಗಿದೆ ನಮ್ಮ ಸ್ನೇಹಕ್ಕೆ, ನನ್ನ ಅಲ್ಪಬುದ್ಧಿಯಿಂದ…
ಜೀವ ನೋವ ತಾಳದಲ್ಲ, ಸುಖಶಾಂತಿ ಇನ್ನಿಲ್ಲ ಅಂತ ರಾಗ ಎಳೆದರೆ ಏನೂ ಪ್ರಯೋಜನ ಇಲ್ಲ, ಅನ್ನೋದೂ ಗೊತ್ತು, ಅದಕ್ಕೇ, ನನಗೆ ನಾನೇ ಹಾಕಿಕೊಂಡ ಶಿಕ್ಷೆ, ಮುಂದಿನ ತಿಂಗಳ ಚಾರಣದಲ್ಲಿ ನಾವಿಬ್ಬರೂ ಜೋಡಿಯಾಗಿ ಬೆಟ್ಟ ಹತ್ತುವ, ಪ್ರಾಮಿಸ್,
ನಾಳೆ ಜಾಗಿಂಗ್ ಗೆ ಬರುವೆಯಾ? ನೇರವಾಗಿ ‘ಸಾರಿ’ ಕೇಳ್ತೀನಿ, ಪ್ಲೀಸ್’ ಹೀಗೊಂದು ಸಂದೇಶ ಕಳಿಸಿ ಸಪ್ಪಗೆ ಕುಳಿತ.
Related Articles
Advertisement
‘ಹಾಗಾದರೆ, ಕಾಲೇಜ್ ಮುಗಿಯುತ್ತಲೇ, ಚಾಟ್ ಸೆಂಟರ್‌ನಲ್ಲಿ ಒಂದಷ್ಟು ಹೊಟ್ಟೆಗೆ ಹಾಕ್ಕೊಂಡು, ಆಮೇಲೆ ಮಾಲ್‌ಗೆ ಹೋಗಿ ಇಬ್ಬರಿಗೂ ಒಂದೇ ಬಣ್ಣದ ಟ್ರಾಕ್ ಸೂಟ್ ತೊಗೊಳ್ಳೋಣ. ಆಯ್ಕೆ ನನ್ನದು, ಬಿಲ್ ಚುಕ್ತಾ ನಿನ್ನದು, ಓಕೆ ನಾ ?’
ತುಂಟ ಇಮೋಜಿಯೊಂದಿಗೆ ಬಂದ ಅವಳ ಸಂದೇಶ ಓದುತ್ತಲೇ, ಹೊಸ ಹುರುಪಿಂದ ತುಟಿಯರಳಿಸಿದ.
- ರಾಜಿ, ಬೆಂಗಳೂರು