ಮುಧೋಳ: ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದ್ದು ಮುಂದಿನ ಬಾರಿಯೂ ನಾನೇ ಮುಖ್ಯಮಂತ್ರಿಯಾಗುತ್ತೇನೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
Advertisement
ತಾಲೂಕು ಆಡಳಿತದ ನೂತನ ಕಟ್ಟಡ, ಮಂಟೂರು ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಸೇರಿ 13 ಕಾಮಗಾರಿಗಳ ಉದ್ಘಾಟನೆ ಹಾಗೂ 50 ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ನಾನು ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದ್ದೇನೆ.
ಮುರುಗೇಶ ನಿರಾಣಿ ಮಾತ್ರ ಅವನ ಕ್ಷೇತ್ರಕ್ಕೆ ಕರೆದಿಲ್ಲ. ಇರಲಿ, ಮುಂದಿನ ಬಾರಿ ಮತ್ತೆ ನಾನೇ ಮುಖ್ಯಮಂತ್ರಿಯಾಗಿ ನಿನ್ನ ಕ್ಷೇತ್ರಕ್ಕೆ ಭೇಟಿ ಕೊಡುತ್ತೇನೆಂದು “ಮತ್ತೊಮ್ಮೆ ನಾನೇ ಸಿಎಂ’ ಆಸೆಯನ್ನು ವೇದಿಕೆ ಮೇಲೆ ಬಿಚ್ಚಿಟ್ಟರು.