Advertisement

ಇಸ್ರೋದಿಂದ ಮೊಬೈಲ್‌ ಲಾಂಚ್‌ಪ್ಯಾಡ್‌ ನಿರ್ಮಾಣ

09:54 AM Dec 17, 2019 | Team Udayavani |

ನವದೆಹಲಿ: ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಜಾಗತಿಕ ಗಮನ ಸೆಳೆಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ), ಇದೀಗ ಮತ್ತೂಂದು ಸಾಹಸಕ್ಕೆ ಕೈ ಹಾಕಿದೆ. ಸಣ್ಣ ಸಣ್ಣ ಉಪಗ್ರಹಗಳ ಉಡಾವಣೆಗೆ ಮೊಬೈಲ್‌ ಲಾಂಚ್‌ಪ್ಯಾಡ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ.

Advertisement

ಇತ್ತೀಚೆಗೆ ಚೀನಾ, ಮೊಬೈಲ್‌ ಉಡಾವಣೆ ವಾಹನಗಳನ್ನು ನಿರ್ಮಿಸಿತ್ತು. ಇದನ್ನು ಮಿಲಿಟರಿ ಉದ್ದೇಶಕ್ಕೆ ಬಳಸಲಾಗುತ್ತಿದೆ. ಆದರೆ, ಇಸ್ರೋ, ಮೊಬೈಲ್‌ ಲಾಂಚ್‌ಪ್ಯಾಡ್ಸ್‌ಗಳನ್ನು ಸೇನಾ ಚಟುವಟಿಕೆಗಳಿಗೆ ಬಳಸುವುದಿಲ್ಲ. ಚಿಕ್ಕ ಪ್ರಮಾಣದ ಉಪಗ್ರಹಗಳನ್ನು ನಭಕ್ಕೆ ಸೇರಿಸಲು ಲಘು ತೂಕದ ವಾಹನಗಳನ್ನು ನಿರ್ಮಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಕೆ.ಶಿವನ್‌ ತಿಳಿಸಿದ್ದಾರೆ.

ಆದಾಯ: ವಾಣಿಜ್ಯ ಉದ್ದೇಶಕ್ಕೆ ವಿವಿಧ ದೇಶಗಳ‌ ಉಪಗ್ರಹಗಳನ್ನು ಉಡಾಯಿಸಲು ಒಪ್ಪಂದ ಮಾಡಿಕೊಂಡಿರುವ ಇಸ್ರೋ, ಕಳೆದ ಐದು ವರ್ಷಗಳ ಅವಧಿಯಲ್ಲಿ 1,245 ಕೋಟಿ ರೂ. ಆದಾಯಗಳಿಸಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸ್ರೋ ಮುಂದೆ, ಸೂರ್ಯಯಾನ, ಚಂದ್ರಯಾನ-3, ಗಂಗಯಾನ ಯೋಜನೆಗಳು ಇವೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸದೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ.

ನಾವು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜೊತೆ ನಾವು ಕೆಲಸ ಮಾಡುವುದಿಲ್ಲ. ತಮಿಳುನಾಡಿನಲ್ಲಿ 2ನೇ ಉಪಗ್ರಹ ಉಡಾವಣೆ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 2 ಸಾವಿರಕ್ಕೂ ಅಧಿಕ ಎಕರೆ ಜಮೀನು ಬೇಕಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next