Advertisement

ಮುಂದಿನ ದಿನಗಳಲ್ಲಿ ಪಪ್ಪು ಯಾರೆಂಬುದು ಗೊತ್ತಾಗಲಿದೆ : ಶಿವರಾಜ್ ತಂಗಡಗಿ

05:49 PM Oct 02, 2022 | Team Udayavani |

ಕುಷ್ಟಗಿ: ರಾಹುಲ್ ಗಾಂಧಿ ಅವರನ್ನು ಬಿಜೆಪಿಯವರು ಪಪ್ಪು ಅಂತಾರೆ.ಮುಂದಿನ ದಿನಗಳಲ್ಲಿ ಪಪ್ಪು ಯಾರೆಂಬುದು ಗೊತ್ತಾಗಲಿದೆ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದರು.

Advertisement

ಕುಷ್ಟಗಿ ಪಿಸಿಎಚ್ ಪ್ಯಾಲೇಸ್ ನಲ್ಲಿ ಭಾರತ ಜೋಡೋ ಪಾದಯಾತ್ರೆ ಅ.15 ಕ್ಕೆ ಬಳ್ಳಾರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರವನ್ನು 40 ಪರ್ಸಂಟೇಜ್ ಸರ್ಕಾರ ಅಂತ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ನಾನಾಗಲಿ ಹೇಳಿಲ್ಲ. ಬಿಜೆಪಿ ಪಕ್ಷದವರಿಗೆ 40 ಪರ್ಸಂಟೇಜ್ ಕೊಟ್ಟ ಗುತ್ತಿಗೆದಾರರೇ ಹೇಳಿದ್ದಾರೆ ಎಂದರು.

ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗೆ ಯುವ ನಾಯಕ ರಾಹುಲ್ ಗಾಂಧೀ ನೇತೃತ್ವದಲ್ಲಿ ಪಾದಯಾತ್ರೆ ಐತಿಹಾಸಿಕ ದಾಖಲಾರ್ಹ ಪಾದಯಾತ್ರೆಯಾಗಿದೆ. ಬಳ್ಳಾರಿಗೆ ಬಂದಿರುವ ಪಾದಯಾತ್ರೆಯಿಂದಲೇ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ.ಅ.15 ಕ್ಕೆ ರಾಹುಲ್ ಗಾಂಧಿ ಪಾದಯಾತ್ರೆ ಬಳ್ಳಾರಿ ಮೂಲಕ ಸಾಗುವ ಹಿನ್ನೆಲೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ನಿಶ್ಚಿತ ಎಂದರು.

ಈ ಪಾದಯಾತ್ರೆಯಿಂದ ಕೊಪ್ಪಳ ಜಿಲ್ಲೆ 5 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರವೂ ಕಾಂಗ್ರೆಸ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಲಿದೆ ಎಂದರು. ಅ.15 ಕ್ಕೆ ಬರುವ ಭಾರತ ಜೋಡೋ ಪಾದಯಾತ್ರೆ ಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ 5 ಸಾವಿರ‌ ಸಂಖ್ಯೆ ಯಲ್ಲಿ‌ ಬಳ್ಳಾರಿಗೆ ಕರೆದೊಯ್ಯಲಿದ್ದೇವೆ. ಕೊಪ್ಪಳ ಜಿಲ್ಲೆಯಿಂದ 25 ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಿದ್ದೇವೆ ಎಂದರು.ಅ.15 ರ ಬಳ್ಳಾರಿಯಲ್ಲಿ ಬೃಹತ್ ಬಹಿರಂಗ ಸಭೆಗೆ 7ರಿಂದ 8 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಆಗಿನ ಸಿದ್ದರಾಮಯ್ಯ ಸರ್ಕಾರವನ್ನು ದಸ್ ಪರ್ಸಂಟೇಜ್ ಸರ್ಕಾರ್ ಎಂದಿದ್ದರು. ಕಳೆದ 6 ವರ್ಷಗಳಲ್ಲಿ 40 ಪರ್ಸೇಂಟೇಜ್ ಸರ್ಕಾರ ನಿಮ್ಮದೇ ಆಗಿದ್ದು ನೀವೇನು ಹೇಳುತ್ತೀರೆಂದು ಪ್ರಶ್ನಿಸಿದರು. ಕೆಪಿಸಿಸಿ ಉಪಾಧ್ಯಕ್ಷ , ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಸೇರಿದಂತೆ ಪಕ್ಷದ ಮುಖಂಡರು ಹಾಜರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next