Advertisement

ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಸುಳ್ಳು ಸುದ್ದಿ: ಆಕ್ರೋಶ

01:48 AM Mar 11, 2023 | Team Udayavani |

ಹೊಸದಿಲ್ಲಿ: ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯು ಭಾರತದ ಕುರಿತು ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ದೂರಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯ ದಮನವಾಗುತ್ತಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟವಾದ ಬರೆಹವು ದುರುದ್ದೇಶಪೂರಿತ ಮತ್ತು ಕಾಲ್ಪನಿಕ ವಾಗಿದೆ ಎಂದರು. ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯವೂ ಪ್ರಶ್ನಾತೀತ ವಾಗಿದೆ. ನಿರ್ದಿಷ್ಟ ಕಾರ್ಯ ಸೂಚಿ ಹೊಂದಿರುವ ಇಂಥ ಮಾಧ್ಯಮಗಳಿಂದ ಪ್ರಜಾ ಪ್ರಭುತ್ವದ ಪಾಠ ಕಲಿಯುವ ಅಗತ್ಯ ನಮಗಿಲ್ಲ ಎಂದು ಕಿಡಿಕಾರಿದರು.

ಇದೇ ರೀತಿಯ ಮನಃಸ್ಥಿತಿ ಹೊಂದಿರುವ ಇತರ ವಿದೇಶಿ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ಇದೂ ಅದರ ಮುಂದುವರಿದ ಭಾಗ. ಆದರೆ ಇಂಥ ಸುಳ್ಳುಗಳ ಆಯುಷ್ಯ ಅಲ್ಪಕಾಲ ಮಾತ್ರ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next