ಮೊಗದಿಶು: ಸೊಮಾಲಿಯಾದ ಮಧ್ಯ ಹಿರಾನ್‌ನ ಮಹಾಸ್ ನಗರದಲ್ಲಿ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ, ಉಗ್ರರು ಆತ್ಮಹತ್ಯಾ ಕಾರ್ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ 19 ಮಂದಿ ಮೃತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಅಲ್-ಶಬಾಬ್ ಉಗ್ರ ಸಂಘಟನೆಯ ವಿರುದ್ಧ ಸೇನೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಅಸುನೀಗಿದ 19 ಮಂದಿಯಲ್ಲಿ ಸೈನಿಕರು, ಪತ್ರಕರ್ತರು ಹಾಗೂ ಸ್ಥಳೀಯರು ಸೇರಿದ್ದಾರೆ.
ದಾಳಿಯಿಂದ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.