Advertisement

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:17 AM Jun 22, 2022 | Team Udayavani |

ಮೇಷ:

Advertisement

ದೈಹಿಕ ಸುಖ ಮಾನಸಿಕ ಸುಖಕ್ಕೆ ಹೆಚ್ಚಿದ ಪರಿಶ್ರಮ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಉತ್ತಮದಾಯಕ ಧನಾರ್ಜನೆ. ವಾಕ್‌ಚತುರತೆಯಿಂದ ಜನಮನ್ನಣೆ. ದಾಂಪತ್ಯ ಸುಖದಲ್ಲಿ ಪರಸ್ಪರ ಸಹಕಾರ.

ವೃಷಭ:

ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಸ್ಥಾನಮಾನ ಗೌರವ. ಅಧಿಕ ಧನಾರ್ಜನೆ. ಗೃಹದಲ್ಲಿ ಸಣ್ಣ ಬದಲಾವಣೆಗಳು ತೋರಿಬಂದಾವು. ಸಹೋದರ ವರ್ಗದವರಿಂದ ನೆಮ್ಮದಿ ಸಂತೋಷ. ಗುರು ಹಿರಿಯರ ಉತ್ತಮ ಮಾರ್ಗದರ್ಶನ.

ಮಿಥುನ:

Advertisement

ಸುದೃಢ ಆರೋಗ್ಯ. ಮಾನಸಿಕ ನೆಮ್ಮದಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಧಿಕಾರ ಗೌರವಾದಿ ಪ್ರಾಪ್ತಿ. ದೂರದ ಮಿತ್ರರ ಸಮಾಗಮ. ಪಾಲುದಾರಿಕಾ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿದಾ ಯಕ ಬದಲಾವಣೆ. ಗೃಹದಲ್ಲಿ ಸಂತಸದ ವಾತಾವರಣ.

ಕರ್ಕ:

ಗೃಹೋಪಕರಣ ವಸ್ತುಗಳಿಗಾಗಿ ಧನವ್ಯಯ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ. ಗುರು ಹಿರಿಯರೊಂದಿಗೆ ಸಂಭ್ರಮದ ಕಾಲ ಕಳೆಯುವಿಕೆ.

ಸಿಂಹ:

ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ ದಿಂದ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ತಾಳ್ಮೆಯ ನಡೆಯಿಂದ ಸಫ‌ಲತೆ. ಗುರುಹಿರಿಯರ ಆರೋಗ್ಯ ಗಮನಿಸಿ.

ಕನ್ಯಾ:

ಸಂತಸದಿಂದ ಕೂಡಿದ ದಿನ. ಎಲಾಲ ವಿಚಾರಗಳಲ್ಲಿ ಅಭಿವೃದ್ಧಿ ಸಂಭವ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಸೌಕರ್ಯ ವೃದ್ಧಿ. ಅನಿರೀಕ್ಷಿತ ಧನಾಗಮ.

ತುಲಾ:

ಗುರು ಹಿರಿಯರ ಆಶೀರ್ವಾದದಿಂದ ಹೆಚ್ಚಿನ ಸ್ಥಾನ ವೃದ್ಧಿ. ಸಹೋದ್ಯೋಗಿಗಳ ಸಹಕಾರದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಹಾಗೂ ಹೆಚ್ಚಿನ ಸಂಪಾದನೆ ಪ್ರಾಪ್ತಿ. ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಚರ್ಚೆ ಸಂಭವ. ದಾಂಪತ್ಯ ಸುಖ ವೃದ್ಧಿ.

ವೃಶ್ಚಿಕ:

ಉದ್ಯೋಗ ವಿಚಾರದಲ್ಲಿ ಹೆಚ್ಚಿನ ಜವಾ ಬ್ದಾರಿ. ನಿರೀಕ್ಷೆಗೆ ಸರಿಯಾಗಿ ಧನಾಗಮನ. ಭೂಮ್ಯಾದಿ ವ್ಯವಹಾರಗಳಲ್ಲಿ ಅಡಚಣೆ ವಿಳಂಬ ಸಾಧ್ಯ. ಮಾನಸಿಕ ಒತ್ತಡ. ದಂಪತಿಗಳಲ್ಲಿ ಪರಸ್ಪರ ಸಹಕಾರ ವೃದ್ಧಿ. ಮಕ್ಕಳಿಂದ ಸಂತೋಷ.

ಧನು:

ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಅವಿವಾಹಿತರಿಗೆ ವಿವಾಹ ಭಾಗ್ಯ. ನೂತನ ಮಿತ್ರರ ಸಮಾಗಮ. ಆಸ್ತಿ ವಿಚಾರದಲ್ಲಿ ಮುನ್ನಡೆ. ಗೃಹದಲ್ಲಿ ಸಂತಸದ ವಾತಾವರಣ. ಅತಿಯಾದ ಪರಿಶ್ರಮದಿಂದ ಧನವೃದ್ಧಿ.

ಮಕರ:

ಪರದೇಶದ ಕಾರ್ಯಗಳಲ್ಲಿ ನಿರೀಕ್ಷಿತ ಗೌರವಾದಿ ಪ್ರಾಪ್ತಿ. ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ಮಿತ್ರರಲ್ಲಿ ಮಕ್ಕಳಲ್ಲಿ ತಾಳ್ಮೆಯಿಂದ ವರ್ತಿಸಿ. ನಾರಿನ ಉತ್ಮನ್ನ ವಸ್ತುಗಳಿಂದ, ಆಹಾರೋದ್ಯಮ, ಆಭರಣ, ವಸ್ತ್ರ ವ್ಯವಹಾರಸ್ಥರಿಗೆ ನಿರೀಕ್ಷಿತ ಲಾಭ.

ಕುಂಭ:

ಅನ್ಯರ ಸಹಾಯ ನಿರೀಕ್ಷಿಸದೆ ತಾಳ್ಮೆ ಯಿಂದ ಕಾರ್ಯ ನಿರ್ವಹಿಸಿ ಗುರಿ ಸಾಧಿಸಿರಿ. ಧನಾರ್ಜನೆಗೆ ಅನುಕೂಲಕರ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಯಶಸ್ಸು. ದಾಂಪತ್ಯ ಸುಖ ತೃಪ್ತಿದಾಯಕ. ಗಣಿ, ಭೂವ್ಯವಹಾರ, ಆಹಾರೋಧ್ಯಮದವರಿಗೆ ಅನುಕೂಲಕರ ಪರಿಸ್ಥಿತಿ.

ಮೀನ:

ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ದೇಶ ವಿದೇಶದ ವಿದ್ಯಾಲಯದಲ್ಲಿ ಅವಕಾಶ. ದೀರ್ಘ‌ ಪ್ರಯಾಣದಿಂದ ಲಾಭ. ರಾಜಕೀಯ ಕ್ಷೇತ್ರದಲ್ಲಿ ರಹಸ್ಯ ವ್ಯವಹಾರದಲ್ಲಿ ಸಾಧನೆ. ಧನಾರ್ಜನೆ ಉತ್ತಮ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next