Advertisement

ಶನಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:06 AM Oct 01, 2022 | Team Udayavani |

ಮೇಷ: ನೂತನ ಮಿತ್ರರ ಸಮಾಗಮ. ವೈವಾಹಿಕ ವಿಚಾರದಲ್ಲಿ ಪ್ರಗತಿ. ಧಾತು, ಆಹಾರ ಉದ್ಯಮದವರಿಗೆ ಅಭಿವೃದ್ಧಿ ಅವಕಾಶ. ಹಿರಿಯರ ಗುರುಗಳ ಮೇಲಧಿಕಾರಿಗಳ ಸಹಾಯ ಒದಗಿ ಬರುವುದು. ಆರೋಗ್ಯ ಉತ್ತಮ. ಉತ್ತಮ ಧನಾರ್ಜನೆ.

Advertisement

ವೃಷಭ: ವಸ್ತ್ರ, ಆಭರಣ, ಆಹಾರ ಹೈನುಗಾರಿಕೆ ವ್ಯವಹಾರಸ್ಥರಿಗೆ ಅನುಕೂಲಕರ ಪರಿಸ್ಥಿತಿ. ವೈವಾಹಿಕ ವಿಚಾರದಲ್ಲಿ ಪ್ರಗತಿ. ಸಹೋದರಾದಿ ವರ್ಗದವರಿಗೆ ಅಭಿವೃದ್ಧಿ. ಆರೋಗ್ಯದಲ್ಲಿ ಚೇತರಿಕೆ. ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ ಸಮಾದಾನ.

ಮಿಥುನ: ಉತ್ತಮ ಧನಾರ್ಜನೆ. ನೀರಿನಿಂದ ಉತ್ಪತ್ತಿ ಪದಾರ್ಥಗಳಿಂದ ಹೆಚ್ಚಿನ ಲಾಭ. ಉತ್ತಮ ವಾಕ್‌ಚತುರತೆ. ಕುಟುಂಬಿಕರ ಪ್ರೋತ್ಸಾಹ. ಆರೋಗ್ಯ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಸಾಮರಸ್ಯ
ಕಾಪಾಡುವುದರಿಂದ ಅಭಿವೃದ್ಧಿ.

ಕರ್ಕ: ದೀರ್ಘ‌ ಪ್ರಯಾಣ. ದೇವತಾ ಸ್ಥಳ ಸಂದರ್ಶನ. ನಿಮ್ಮ ಶ್ರೇಯಸ್ಸಿಗಾಗಿ ಗುರುಹಿರಿಯರಿಂದ ಶ್ರಮದ ಕಾರ್ಯಗಳು. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸುಖ. ದಾಂಪತ್ಯ ಸುಖ ವೃದ್ಧಿ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಪ್ರಗತಿ.

ಸಿಂಹ: ವಿದ್ಯಾರ್ಥಿಗಳಿಗೆ ಗೌರವ ಆದರಾದಿಗಳು ಒದಗುವ ಕಾಲ. ಮಿತ್ರರಲ್ಲಿ ಪಾಲುದಾರರಲ್ಲಿ ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿ. ಉದ್ಯೋಗದಲ್ಲಿ ಅಧಿಕ ಶ್ರಮ. ಅತಿಯಾಗಿ ಮತ್ತೂಬ್ಬರ ವಿಚಾರ ಬೇಡ. ದಂಪತಿಗಳು ಪರಸ್ಪರ ಪ್ರೋತ್ಸಾಹಿಸಿ ಚರ್ಚೆ ಬೇಡ.

Advertisement

ಕನ್ಯಾ: ಸ್ತ್ರೀಯರಿಂದ ಅನಿರೀಕ್ಷಿತ ಲಾಭ. ಆರೋಗ್ಯ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಪರದೇಶದ ವ್ಯವಹಾರದಲ್ಲಿ ಪ್ರಗತಿ. ವಿದ್ಯಾರ್ಥಿಗಳು ಅಧಿಕ ಶ್ರಮ ವಹಿಸಿ ಕಾರ್ಯ ಸಾಧಿಸಿ.

ತುಲಾ: ಅನಿರೀಕ್ಷಿತ ಧನಾಗಮನ. ಉತ್ತಮ ವಾಕ್‌ ಚತುರತೆ. ಕೌಟುಂಬಿಕ ಸುಖ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಕಾರ್ಯ ಕ್ಷೇತ್ರಗಳ ಅತ್ಯುತ್ತಮ ಪ್ರಗತಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ವರ್ತಕರಿಗೆ ಅವಕಾಶ. ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ. ವಿವಾಹ ಯೋಗ.

ವೃಶ್ಚಿಕ: ಅನಿರೀಕ್ಷಿತ ಅಧಿಕಾರ ಪ್ರಾಪ್ತಿ. ಗುರು ಹಿರಿಯರ ಮೇಲಧಿಕಾರಿಗಳ ಪ್ರೀತಿ ವಿಶ್ವಾಸ ಗಳಿಕೆ. ಉತ್ತಮ ಧನಾರ್ಜನೆ. ಅಧ್ಯಯನಶೀಲರಿಗೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದಾಂಪತ್ಯ ಸುಖ ಅಭಿವೃದ್ಧಿ. ಉದಾರತೆ, ದೈರ್ಯ, ನಿಷ್ಠೆ, ಚತುರತೆಗೆ ಜಯ.

ಧನು: ಮಾತೃ ಸಮಾನರ ಆರೋಗ್ಯದ ಬಗ್ಗೆ ಗಮನಹರಿಸಿದ ಸಮಾದಾನ. ಗೃಹೋಪಕರಣ ವಸ್ತುಗಳ ಸಂಗ್ರಹ. ಉತ್ತಮ ಧನಾರ್ಜನೆ. ಸಣ್ಣ ಪ್ರಯಾಣ. ಪಾಲುಗಾರಿಕಾ ವ್ಯವಹಾರದಲ್ಲಿ ಸಾಮರಸ್ಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಅನುಕೂಲಕರ.

ಮಕರ: ಪರದೇಶ ಮೂಲದಿಂದ ಧನಾಗಮ. ಪಾಲುದಾರರಿಂದ ಸಹಾಯ. ಜಲೋತ್ಪನ್ನ ವಸ್ತು ಕ್ರಯವಿಕ್ರಯದಲ್ಲಿ ಪ್ರಗತಿ. ಸಂಶೋಧಕರಿಗೆ ಸಂದರ್ಭಕ್ಕೆ ಸರಿಯಾಗಿ ಸಹಾಯ ಪ್ರಾಪ್ತಿ. ಸಾಂಸಾರಿಕ ಸುಖ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಪ್ರಯಾಣ ಸುಖ.

ಕುಂಭ: ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ಮಾತಿನಲ್ಲಿ ಕಠೊರತೆ ಬೇಡ. ದಂಪತಿಗಳು, ಪಾಲುದಾರಿಕಾ ವ್ಯವಹಾರಸ್ಥರು ತಾಳ್ಮೆಯಿಂದ ಕಾರ್ಯ ಸಾಧಿಸಿ. ಪರದೇಶ ಸ್ಥಿತ ಮಿತ್ರರಿಂದ ಸಹಾಯ ಒದಗಿ ಬರುವುದು. ಪ್ರಯಾಣದಿಂದ ಅನುಕೂಲ.

ಮೀನ: ಮಾನಸಿಕ ಆರೋಗ್ಯ ಉತ್ತಮ. ದೈಹಿಕ ಆರೋಗ್ಯ ಗಮನಹರಿಸಿ. ದೇವತಾ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ. ಸಾಹಸದಿಂದ ಧನಾರ್ಜನೆ ವೃದ್ಧಿ. ದೂರ ಪ್ರಯಾಣದಿಂದ ಕಾರ್ಯ ಸಫ‌ಲತೆ. ಕಾರ್ಮಿಕರು ಸಹೋದರರಲ್ಲಿ ತಾಳ್ಮೆಯಿಂದ ಪ್ರೀತಿಯಿಂದಲೂ ಕಾರ್ಯ ನಿರ್ವಹಿಸಿ ಪ್ರಗತಿ ಗಳಿಸಿ. ಗೃಹದಲ್ಲಿ ಸಂತಸದ ವಾತಾವರಣ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next