Advertisement

ಬಿಎಸ್‌ವೈಗೆ ಚೆನ್ನಬಸವಶ್ರೀ ಪ್ರಶಸ್ತಿ ಪ್ರದಾನ

03:45 AM Jan 16, 2017 | Team Udayavani |

ಕಾರವಾರ/ಜೋಯಿಡಾ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಭಾನುವಾರ ಉತ್ತರ ಕನ್ನಡ ಜಿಲ್ಲೆ ಉಳವಿಯ ಚೆನ್ನಬಸವೇಶ್ವರ ದೇವಸ್ಥಾನದಿಂದ ಚೆನ್ನಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ, ವಚನಕಾರರು ಕನ್ನಡ ನಾಡಿನಲ್ಲಿ ಮಾಡಿದ ವೈಚಾರಿಕ ಕ್ರಾಂತಿಯನ್ನು ಸ್ಮರಿಸಿದರು. ಶರಣರು ನಾಡಿನ ಮೂಢನಂಬಿಕೆಗಳನ್ನು ಕಳೆಯಲು ಹಾಗೂ ಸರ್ವ ಸಮಾಜಗಳ ಸಮಾನತೆಯನ್ನು ಸಾರಲು ಮಾಡಿದ ಪ್ರಯತ್ನವನ್ನು ಇವತ್ತಿನ ಸಮಾಜ ಅರ್ಥಮಾಡಿಕೊಳ್ಳಬೇಕು ಎಂದರು.

ನಾಲ್ಕು ವರ್ಷಗಳ ಹಿಂದೆಯೇ ಘೋಷಣೆಯಾಗಿದ್ದ ಈ ಪ್ರಶಸ್ತಿಯನ್ನು ಉಳವಿಯಲ್ಲಿ ಶರಣ ಚೆನ್ನಬಸವೇಶ್ವರರ ಸನ್ನಿಧಿಗೆ ಬಂದು, ಚೆನ್ನಬವಸಣ್ಣನವರ ಗದ್ದುಗೆ ದರ್ಶನ ಪಡೆದ ನಂತರವೇ ಯಡಿಯೂರಪ್ಪ ಸ್ವೀಕರಿಸಿದ್ದು ವಿಶೇಷವಾಗಿತ್ತು. ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಧಿಯಲ್ಲಿ ಉಳವಿ ಕ್ಷೇತ್ರ ಅಭಿವೃದ್ಧಿಗೆ 2 ಕೋಟಿ ರೂ. ಮಂಜೂರು ಮಾಡಿದ್ದರು. 

ಮುಂಡರಗಿ ಮಹಾಸಂಸ್ಥಾನದ ಡಾ| ನಾಡೋಜ ಅನ್ನದಾನೇಶ್ವರ ಮಹಾ ಶಿವಯೋಗಿಗಳಿಗೂ ಚೆನ್ನಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೃಹನ್ಮಠ ನಂದಿಗುಡಿಯ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಗವಿಮಠದ ಚಂದ್ರಶೇಖರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮಾಜಿ ಸಚಿವ ಸಿ.ಎಂ. ಉದಾಸಿ, ವೀರಣ್ಣ ಮತ್ತಿಕಟ್ಟಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next