Advertisement

ಪುನೀತ್ ಅಂತಿಮ ದರ್ಶನಕ್ಕೆ ಜನಸಾಗರ : ನಾಳೆ ನಡೆಯಲಿದೆ ಅಂತ್ಯಸಂಸ್ಕಾರ

11:50 AM Oct 31, 2021 | Team Udayavani |
ಅಭಿಮಾನಿಗಳ ಒತ್ತಾಯದ ಹಿನ್ನಲೆ ನಾಳೆ ಪುನೀತ್ ಅಂತ್ಯಕ್ರಿಯೆ ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸರಳ ಮತ್ತು ಗೌರವಪೂರ್ವಕ ರಾಜ್ಯೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ ರಾಜ್ಯಾದ್ಯಂತ 500 ಜನಕ್ಕಿಂತ ಹೆಚ್ಚು ಸೇರಿಸುವಂತಿಲ್ಲ. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರಕಾರಿ ಸೂಚನೆ ಹೊರಡಿಸಲಾಗಿದೆ. ಸಾಮಾಜಿಕ ಅಂತರವಿಲ್ಲದ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಗೌರವ ಪೂರ್ವಕವಾಗಿ ಶಾಂತಿ ಸುವ್ಯವಸ್ಥೆಗೆ ಭಂಗ ತರದಂತೆ ಆಚರಿಸಬೇಕು ಎಂದು ಸೂಚಿಸಲಾಗಿದೆ. ಮೋದಿಜಿ ಕಾಂಗ್ರೆಸ್‌ನಿಂದಾಗಿ ಹೆಚ್ಚು ಶಕ್ತಿಶಾಲಿಯಾಗಿದ್ದಾರೆ ಮಮತಾ ಬ್ಯಾನರ್ಜಿ ಹೇಳಿಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಪಕ್ಷದಿಂದಾಗಿ ಹೆಚ್ಚು ಶಕ್ತಿಶಾಲಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶನಿವಾರ ಗೋವಾದಲ್ಲಿ ವಿರೋಧ ಪಕ್ಷಗಳನ್ನು ಟೀಕಿಸಿದ್ದಾರೆ. ದೀಪಾವಳಿಗೆ ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧಿಸಿದ ಉತ್ತರಪ್ರದೇಶ ಸರ್ಕಾರ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವು ಗಾಳಿಯ ಗುಣಮಟ್ಟ ಕಳಪೆ ದರ್ಜೆಯಲ್ಲಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ ಸಿಆರ್) ಮತ್ತು ಇತರ ಪ್ರದೇಶಗಳಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿರುವುದಾಗಿ ತಿಳಿಸಿದೆ. ತವಾಂಗ್‌ನಲ್ಲಿ ಚೀನಾಕ್ಕೆ ಚಿನೂಕ್‌ ಸವಾಲು ಅರುಣಾಚಲ ಪ್ರದೇಶದ ತವಾಂಗ್‌ ಮತ್ತು ಲಡಾಖ್‌ನ ಪೂರ್ವ ಭಾಗದಲ್ಲಿ ಚೀನ ಉಪಟಳ ಹೆಚ್ಚಾಗಿದೆ. ಭಾರತವು ತವಾಂಗ್‌ ವ್ಯಾಪ್ತಿಯಲ್ಲಿ ಅಮೆರಿಕದಿಂದ ಇತ್ತೀಚೆಗೆ ಖರೀದಿಸಿರುವ ಚಿನೂಕ್‌ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ. ಇದರ ಜತೆಗೆ ಅಲ್ಟ್ರಾ ಲೈಟ್‌ ಹೊವಿಟ್ಜರ್‌ಗಳು, ರೈಫ‌ಲ್‌ಗ‌ಳು ಮತ್ತು ದೇಶೀಯ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಅತ್ಯಾಧುನಿಕ ಕ್ಷಿಪಣಿಗಳನ್ನೂ ನಿಯೋಜಿಸಲು ಸರಕಾರ ಕ್ರಮ ಕೈಗೊಂಡಿದೆ. 2020ರಲ್ಲಿ ರಸ್ತೆ ಅಪಘಾತದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಸಾವು. 2020ರ ಸಾಲಿನಲ್ಲಿ ರಸ್ತೆ ಅಪಘಾತದಲ್ಲಿ 3,74,397 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ಬಹಿರಂಗಗೊಂಡಿದೆ. 2019ಕ್ಕೆ ಹೋಲಿಸಿದಲ್ಲಿ ಇದು ಕಡಿಮೆ ಪ್ರಮಾಣದ ಸಾವಿನ ಸಂಖ್ಯೆಯಾಗಿದೆ ಎಂದು ಎನ್ ಸಿಆರ್ ಬಿ ಅಂಕಿಅಂಶದಲ್ಲಿ ತಿಳಿಸಲಾಗಿದೆ. ಜೈಲಿನಿಂದ ಆರ್ಯನ್ ಖಾನ್ ಬಿಡುಗಡೆ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು ಶನಿವಾರ ಬೆಳಗ್ಗೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.ಪುತ್ರನನ್ನು ಕರೆದೊಯ್ಯಲು ಶಾರುಖ್ ಖಾನ್ ಜೈಲಿಗೆ ಆಗಮಿಸಿದ್ದರು. ಬಂಧನಕ್ಕೊಳಗಾದ ಆರ್ಯನ್ 22 ದಿನಗಳ ನಂತರ ಆರ್ಥರ್ ರೋಡ್ ಜೈಲಿನಿಂದ ಹೊರನಡೆದರು. ವೈರಲ್ ಆಗುತ್ತಿದೆ ಬೆನ್ನಿ ದಯಾಳ್ ರ ‘ಕೂ’ ಕ್ರಿಕೆಟ್ ಗೀತೆ ಟಿ20 ವಿಶ್ವಕಪ್ ಕ್ರಿಕೆಟ್ ನ ಕ್ರೇಜ್ ಈಗಾಗಲೇ ಎಲ್ಲೆಡೆ ಮನೆ ಮಾಡಿದೆ. ಇದನ್ನು ಹೆಚ್ಚಿಸಲು ಕೂ ಆ್ಯಪ್ ‘ಕೂ ಪೆ ಬೊಲೆಗಾ’ ಎಂಬ ಆಕರ್ಷಕ ಗೀತೆಯೊಂದನ್ನು ಬಿಡುಗಡೆಗೊಳಿಸಿದೆ. ಈ ಟಿ-20 ವಿಶ್ವಕಪ್ 2021 ರ ಸರಣಿಯ ಈ ಸಮಯದಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸುವ ಅಭಿಮಾನಿಗಳ ಉತ್ಸಾಹವನ್ನು ಈ ಗೀತೆ ಪ್ರತಿಧ್ವನಿಸುತ್ತಿರುವುದು ವಿಶೇಷವಾಗಿದೆ..
Advertisement

Udayavani is now on Telegram. Click here to join our channel and stay updated with the latest news.

Next