1. ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ !
ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಿ ಭಾನುವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸಿಎಂ ಜತೆಗಿನ ಸಭೆಯ ಬಳಿಕ ಸಚಿವ ಡಾ. ಸುಧಾಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಡಿ. 28 ರಿಂದ ರಾತ್ರಿ 10 ರಿಂದ ಬೆಳಗ್ಗೆ 5 ರ ವರೆಗೆ 10 ದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದಿದ್ದಾರೆ.
2. 300 ಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ
ಡಿ. 30ರಿಂದ ಜನವರಿ 02 ರ ವರೆಗೆ ರೆಸ್ಟೊರೆಂಟ್ , ಪಬ್, ಕ್ಲಬ್ ಮತ್ತು ಹೋಟೆಲ್ ಗಳು 50 % ಮಾತ್ರ ಕಾರ್ಯ ನಿರ್ವಹಿಸಬೇಕು ರಾಜ್ಯ ಸರ್ಕಾರ ಕೋವಿಡ್ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ. ಡಿ. 28ರಿಂದ ಮದುವೆ , ಶುಭ ಸಮಾರಂಭಗಳು, ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ 300 ಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ ಎಂದಿದ್ದಾರೆ.
3. ಹಂಸಲೇಖ ಹೇಳಿಕೆಯಲ್ಲಿ ಯಾವ ಅಪರಾಧವಿದೆ ? : ಸಿದ್ದರಾಮಯ್ಯ
ಸಾಹಿತಿ ಡಾ.ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥೆ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಹಂಸಲೇಖ ಅವರನ್ನು ಸಮರ್ಥಿಸಿಕೊಂಡ ಅವರು, ಹಂಸಲೇಖ ನೀಡಿರುವ ಹೇಳಿಕೆಯಲ್ಲಿ ಯಾವ ಅಪರಾಧವಿದೆ ? ಅವರು ವಾಸ್ತವಿಕ ನೆಲೆಗಟ್ಟಿನಲ್ಲಿ ಮಾತನಾಡಿದ್ದಾರೆ ಎಂದು ಹೇಳಿದರು.
4. ಕೃಷಿ ಕಾಯಿದೆ ಮರು ಜಾರಿ ಇಲ್ಲ: ತೋಮರ್
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕ್ಋಷಿ ಕಾಯ್ದೆ ಜಾರಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ವಾಪಾಸ್ ಪಡೆದುಕೊಂಡಿರುವ ಮೂರು ಕೃಷಿ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಮತ್ತೆ ಜಾರಿಗೊಳಿಸುವ ಪ್ರಸ್ತಾಪ ಇಲ್ಲ ಎಂದಿದ್ದಾರೆ.
5. ಬೂಸ್ಟರ್ ಡೋಸ್ ನನ್ನ ಸಲಹೆ ಎಂದ ರಾಹುಲ್ ಗಾಂಧಿ..!
ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ. ಟ್ವೀಟರ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ಕೇಂದ್ರ ಸರಕಾರ ನಾನು ನೀಡಿದ ಸಲಹೆಯನ್ನು ಒಪ್ಪಿಕೊಂಡಿದೆ ಎಂದಿದ್ದಾರೆ.
6. ಮಕ್ಕಳಿಗೆ ನೀಡುವ ಕೊವ್ಯಾಕ್ಸಿನ್‌ಗೆ ಅಸ್ತು
ಮುಂದಿನ ತಿಂಗಳಿಂದ 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ. ಈ ಘೋಷಣೆ ಮಾಡುತ್ತಿದ್ದಂತೆಯೇ ಭಾರತ್ ಬಯೋಟೆಕ್‌ನ ಮಕ್ಕಳ ಲಸಿಕೆಗೆ ಅನುಮೋದನೆ ಸಿಕ್ಕಿದೆ.
7.
7. ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾವು ಕಡಿತ
ರಾಯಗಢ ಜಿಲ್ಲೆಯ ಪನ್ವೇಲ್ ಬಳಿಯ ಫಾರ್ಮ್‌ಹೌಸ್‌ನಲ್ಲಿ ನಟ ಸಲ್ಮಾನ್ ಖಾನ್ ಗೆ ವಿಷ ರಹಿತ ಹಾವು ಕಚ್ಚಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ರಾತ್ರಿ ಸಲ್ಮಾನ್ ಅವರನ್ನು ಮುಂಬೈನ ಕಾಮೋಥೆಯಲ್ಲಿರುವ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಲಾಗಿದೆ. ಬಳಿಕ ಭಾನುವಾರ ಬೆಳಿಗ್ಗೆ ಡಿಸ್ಚಾರ್ಜ್ ಮಾಡಲಾಗಿದೆ.
8. ಕೊಕೇನ್ ಸೇವಿಸಿ ನಗ್ನವಾಗಿ ಕುಣಿದ ಕ್ರಿಕೆಟರ್..!
ಕಳೆದ ಹಲವು ವರ್ಷಗಳಿಂದ ಕೆಲವು ವಿವಾದಗಳನ್ನು ಕಂಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಇದೀಗ ಮತ್ತೊಂದು ವಿವಾದವನ್ನು ಎದುರಿಸುತ್ತಿದೆ. ಕ್ರಿಕೆಟರ್ ಒಬ್ಬ ಕೊಕೇನ್ ಮಾದಕದ್ರವ್ಯ ಸೇವಿಸಿ ನಗ್ನವಾಗಿ ಕುಣಿದ ವಿಚಾರೊಂದು ಸುದ್ದಿಯಾಗಿದೆ. ಮೆಲ್ಬೋರ್ನ್‌ನ ‘ದಿ ಏಜ್’ ಪತ್ರಿಕೆಯು ತನ್ನ ವರದಿಯಲ್ಲಿ ಿದನ್ನು ಬಹಿರಂಗ ಪಡಿಸಿದೆ.