Advertisement

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

06:18 PM Jan 26, 2022 | Team Udayavani |
1. ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜಕುಮಾರ್ ಅವರ ಹೆಸರನ್ನು ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಪ್ರಶಸ್ತಿ ಪಟ್ಟಿಯಲ್ಲಿ ಅವರ ಹೆಸರಿಲ್ಲದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಸಿಎಂ‌ ಬೊಮ್ಮಾಯಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ. 2. ಸಿದ್ದು, ಡಿಕೆಶಿ ಜತೆ ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತೇವೆ: ಸಚಿವ ಅಶೋಕ್ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಅವರು ಎಲ್ಲಿಯವರೆಗೂ ಗುಂಡು ಹೊಡೀತ್ತಾರೋ ಅಲ್ಲಿಯವರೆಗೂ ನಾವೂ ಗಾಳಿಯಲ್ಲೇ ಗುಂಡು ಹೊಡೆಯುತ್ತೇವೆ ಎಂದು‌ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. 3. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು ಕಾರವಾರ : ಗಣರಾಜ್ಯೋತ್ಸವ ದಿನದಂದು ಕರ್ತವ್ಯದಲ್ಲಿದ್ದಾಗಲೇ ಕಾರವಾರದ ಸಂಚಾರಿ ಪೊಲೀಸ್ ಠಾಣೆಯ ಎಎಸ್ ಐ ಅಬ್ದುಲ್ ಖಾದರ್ ಮಹ್ಮದ್ ಶೇಖ್ ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. 4. ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ ಹಲವು ವಾಹನಗಳ ಬಿಡಿಭಾಗಗಳನ್ನು ಉಪಯೋಗಿಸಿ ಹೊಸ ಮಾದರಿಯ ಕಿಕ್ ಸ್ಟಾರ್ಟ್ ಮಾಡುವ ಜೀಪ್ ತಯಾರಿಸಿದ್ದ ವ್ಯಕ್ತಿಗೆ ಮಹೀಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಬೊಲೆರೋ ಕಾರು ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ನೂತನ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ. 5. 11,000 ಅಡಿ ಎತ್ತರ, ಮೈನಸ್ 20 ಡಿಗ್ರಿ ಸೆಲ್ಸಿಯಸ್ ನಲ್ಲಿ ಯೋಧರ ಗಣರಾಜ್ಯ ಸಂಭ್ರಮ: ವಿಡಿಯೋ ಭಾರತವು ಇಂದು 73 ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಇದೇ ವೇಳೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸರು ಉತ್ತರಾಖಂಡದ ಔಲಿಯಲ್ಲಿ ಹಿಮಾಲಯದ ಇಳಿಜಾರುಗಳಲ್ಲಿ ವಿಶಿಷ್ಟವಾದ ಮೆರವಣಿಗೆಯೊಂದಿಗೆ ಈ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಮೈನಸ್ 20 ಡಿಗ್ರಿ ಸೆಲ್ಸಿಯಸ್‌ನಲ್ಲಿ 11,000 ಅಡಿ ಎತ್ತರದಲ್ಲಿ ಇಳಿಜಾರುಗಳಲ್ಲಿ ಸ್ಕೀಯಿಂಗ್ ಮಾಡಿದ್ದಾರೆ. 6. ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಸಿಪಿಐ ನಾಯಕ ಬುದ್ಧದೇವ್ ಭಟ್ಟಾಚಾರ್ಯ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ. ನನಗೆ ಈ ಪ್ರಶಸ್ತಿಯ ಬಗ್ಗೆ ಏನೂ ತಿಳಿದಿಲ್ಲ, ಯಾರೂ ನನಗೆ ಈ ಬಗ್ಗೆ ಏನನ್ನೂ ಹೇಳಿಲ್ಲ, ಅವರು ನನಗೆ ಪದ್ಮಭೂಷಣ ನೀಡಲು ನಿರ್ಧರಿಸಿದ್ದರೆ, ನಾನು ಅದನ್ನು ಸ್ವೀಕರಿಸಲು ನಿರಾಕರಿಸುತ್ತೇನೆ ಎಂದು ಹೇಳಿದ್ದಾರೆ. 7. ಜೊತೆ ಶ್ರೀಲೀಲಾ ಡ್ಯುಯೆಟ್‌!: ಧಮಾಕಾ ಸಿನಿಮಾಕ್ಕೆ ಕಿಸ್‌ ನಾಯಕಿ ಕಿಸ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಶ್ರೀಲೀಲಾ ಈಗ ತೆಲುಗಿನ ಮತ್ತೊಂದು ಬಿಗ್‌ಬಜೆಟ್‌ ಸ್ಟಾರ್‌ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತೆಲುಗು ಚಿತ್ರರಂಗದ ಮೂಲಗಳ ಪ್ರಕಾರ, ಶ್ರೀಲೀಲಾ ಟಾಲಿವುಡ್‌ ನಟ ರವಿತೇಜ ಅಭಿನಯದ ಹೊಸ ಸಿನಿಮಾ “ಧಮಾಕಾ’ದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್‌ ಶುರುವಾಗಿದ್ದು, ಶೀಘ್ರದಲ್ಲಿಯೇ ಶ್ರೀಲೀಲಾ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. 8. ಮಗುವಿನ ಸಂತಸದಲ್ಲಿ ಯುವರಾಜ್ ಸಿಂಗ್-ಹೇಜಲ್ ಕೀಚ್ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಪತ್ನಿ ಹೇಜಲ್ ಕೀಚ್ ಮೊದಲ ಮಗುವಿನ ಸಂತಸದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯುವರಾಜ್ ಸಿಂಗ್ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next