Advertisement

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

05:10 PM Oct 24, 2021 | Team Udayavani |
ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು ರಾಮದ್ರೋಹಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದದ್ದು ಮಾತ್ರವಲ್ಲದೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸಿ ಉತ್ತರಪ್ರದೇಶದ ಅಭಿವೃದ್ಧಿಗೆ ಅಡ್ಡಿಪಡಿಸಿ ರಾಜ್ಯವನ್ನು “ಗಲಭೆಗಳ ಬೆಂಕಿಯಲ್ಲಿ ಎಸೆದಿದ್ದಾರೆ” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿ ಕಾರಿದ್ದಾರೆ.   ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯ ತೋರಿಸಿದೆ 100 ಕೋಟಿ ಲಸಿಕೆ ಪೂರೈಸಿರುವುದು ಭಾರತದ ಸಾಮರ್ಥ್ಯ ತೋರಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ. ಈ ಸಮಯದಲ್ಲಿ ಭಾರತದ ಲಸಿಕೆ ಶತಕಕ್ಕೆ ಕಾರಣವಾದ ಲಸಿಕೆ ತಯಾರಕರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.   ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಲಿದೆ ! ”ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಿ ಬದಲಾಗಿದೆ” ಎಂದು ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಹೇಳಿಕೆ ನೀಡಿದ್ದಾರೆ.   ಪಾಕ್‌ ಚಾನೆಲ್‌ಗಳಲ್ಲಿ “ಆಲಿಂಗನ ಕಟ್‌! ಇನ್ನು ಮುಂದೆ ಪಾಕಿಸ್ತಾನದ ವಾಹಿನಿಗಳಲ್ಲಿ ಅಪ್ಪಿಕೊಳ್ಳುವುದು, ಮುದ್ದಾಡುವುದು, ಬೋಲ್ಡ್‌ ಬಟ್ಟೆ ಧರಿಸಿರುವಂತಹ ವಿಡಿಯೋಗಳನ್ನು ಪ್ರಸಾರ ಮಾಡದಿರುವಂತೆ ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.   3 ಹೆಣ್ಣು ಹೆತ್ತಿದ್ದಕ್ಕೆ ಕಿರುಕುಳ ಮೂರು ಬಾರಿಯೂ ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ಗಂಡನ ಮನೆಯವರು ನೀಡುತ್ತಿದ್ದ ಕಿರುಕುಳ ತಾಳಲಾರದೆ ಮಹಿಳೆಯೊಬ್ಬಳು ಮೂರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಲಬುರಗಿಯ ಆಳಂದ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಒಂದು ಮಗುವನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು ಕುರಿಯಿಂದ ಉಣ್ಣೆ ತೆಗೆದು, ನೇಯ್ದು ಕಂಬಳಿ ಮಾಡಲಾಗುತ್ತದೆ. ಈ ಪರಿಶ್ರಮದ ಹಿಂದೆ ಹಿಂದೆ ಹಾಲುಮತ ಸಮುದಾಯದ ಶ್ರಮ ಗೌರವ ಅಡಗಿದೆ. ಹೀಗಾಗಿ ಕಂಬಳಿ ಹೊದ್ದುಕೊಳ್ಳಲೂ ಯೋಗ್ಯತೆ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.   ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ ಇತ್ತೀಚಿನ ದಿನಗಳಲ್ಲಿ ಕಿರುತೆರೆಯಿಂದ ಹಿರಿತೆರೆಗೆ ಅಡಿಯಿಟ್ಟು ಬೇಡಿಕೆ ಪಡೆದುಕೊಳ್ಳುತ್ತಿರುವ ನಟಿಯರಲ್ಲಿ “ಜೊತೆ ಜೊತೆಯಲಿ…ಖ್ಯಾತಿಯ ಮೇಘಾ ಶೆಟ್ಟಿ ಕೂಡ ಒಬ್ಬರು.  ಕಿರುತೆರೆಯಲ್ಲಿ’ ಸದ್ಯ “ತ್ರಿಬಲ್‌ ರೈಡಿಂಗ್‌’ ಬಳಿಕ ಇದೀಗ ಮತ್ತೂಂದು ಹೊಸ ಚಿತ್ರಕ್ಕೆ ಮೇಘಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.   ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ ಟಿ20 ವಿಶ್ವಕಪ್‌ ಕೂಟದ 2ನೇ ವಿಭಾಗದ ಪಂದ್ಯದಲ್ಲಿ ಇಂದು ರಾತ್ರಿ ಭಾರತ- ಪಾಕಿಸ್ತಾನ ಮುಖಾಮುಖೀಯಾಗಲಿವೆ. ಉಳಿದೆಲ್ಲ ಪಂದ್ಯಗಳಿಗಿಂತ ಈ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ಉತ್ಸಾಹ ದೊಡ್ಡಮಟ್ಟದಲ್ಲೇ ಇದ್ದು. ಕ್ರಿಕೇಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next