- ಬಿಜೆಪಿ ಆಡಳಿತದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಸುಳ್ಳು ಆಶ್ವಾಸನೆಗಳು ಹಾಗೂ ಜನ ವಿರೋಧಿ ನೀತಿಗಳಿಂದ ಜನತೆ ಬೇಸತ್ತು ಹೋಗಿದ್ದು, ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
- ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಪ್ರರಕಣಗಳ ಸಂಖ್ಯೆ ಗಣನೀಯ ಏರಿಕೆ
ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಈವರೆಗೆ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,53,708ಕ್ಕೆ ತಲುಪಿದೆ. ಕಳೆದ 24ಗಂಟೆಗಳಲ್ಲಿ 16,326 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ತಿಳಿಸಿದೆ.
- ಗ್ರಾಹಕ ಆಯೋಗಕ್ಕೆ ನೇಮಕಾತಿ ಮಾಡದ ಕೇಂದ್ರ: ಸುಪ್ರೀಂ ಬೇಸರ
ಜಿಲ್ಲಾ ಮತ್ತು ರಾಜ್ಯ ಗ್ರಾಹಕ ವಿವಾದಗಳ ಇತ್ಯರ್ಥ ಆಯೋಗಕ್ಕೆ ನೇಮಕಾತಿಗಳನ್ನು ಮಾಡದಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸರ್ವೋಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಸ್ವಪ್ರೇರಣೆಯಿಂದ ತಾನೇ ಪ್ರಕರಣ ದಾಖಲಿಸಿಕೊಂಡಿರುವ ಸರ್ವೋಚ್ಚ ಪೀಠ, ಒಂದು ವೇಳೆ ಕೇಂದ್ರಕ್ಕೆ ನ್ಯಾಯಾಧಿಕರಣಗಳು ಬೇಕಿಲ್ಲವೆನ್ನಿಸಿದರೆ ಆ ಕಾಯ್ದೆಯನ್ನೇ ರದ್ದು ಮಾಡಲಿ ಎಂದು ಕಿಡಿಕಾರಿದೆ.
11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ
ಉತ್ತರಾಖಂಡದ ಲಂಖಗಾ ಪಾಸ್‌ನಲ್ಲಿ 17,000 ಅಡಿ ಎತ್ತರದಲ್ಲಿ ಭಾರತೀಯ ವಾಯುಪಡೆಯು ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಅ.18ರಂದು ಭಾರೀ ಹಿಮಪಾತ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಪ್ರವಾಸಿಗರು, ಚಾರಣಿಗರು ಮತ್ತು ಗೈಡ್ ಗಳು ಸೇರಿದಂತೆ 17 ಮಂದಿ ಕಣ್ಮರೆಯಾಗಿದ್ದರು. ಲಂಖಗಾ ಪಾಸ್ ಗೆ ಹೋಗುವ ಪ್ರದೇಶದಿಂದ ಇಲ್ಲಿಯವರೆಗೆ 11 ಶವಗಳನ್ನು ಹೊರತೆಗೆಯಲಾಗಿದೆ.
- ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್ ಭರವಸೆ
ರಾಜ್ಯದ ಸರ್ಕಾರಿ ಶಾಲೆಯ ಶಿಕ್ಷಕರ ಕೊರತೆ ಹೊಗಲಾಡಿಸಲು ಶೀಘ್ರವೇ ಐದು ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಸರ್ಕಾರಿ ಶಾಲೆಯಲ್ಲಿ 15ರಿಂದ 20 ಸಾವಿರ ಶಿಕ್ಷಕರ ಕೊರತೆಯಿದ್ದು, ಈ ಹಿಂದೆಯೇ 10 ಸಾವಿರ ಶಿಕ್ಷಕರ ನೇಮಕಕ್ಕೆ ಮುಂದಾಗಿದ್ದರೂ, ಭರ್ತಿಯಾಗಿದ್ದು 3 ಸಾವಿರ ಶಿಕ್ಷಕರು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಜ್ಯಾತ್ಯಾತೀತವಾದರೆ ಮುಸ್ಲಿಮರು ಬಿಜೆಪಿ ಜೊತೆ ಇರುತ್ತಾರೆ: ರೆಹಮಾನ್ ಖಾನ್
ನಮ್ಮದು ಜ್ಯಾತ್ಯಾತೀತ ದೇಶ. ಕಾಂಗ್ರೆಸ್ ಕೂಡ ಜ್ಯಾತ್ಯಾತೀತ ಪಕ್ಷ. ಹೀಗಾಗಿ ಮುಸ್ಲಿಮರು ಕಾಂಗ್ರೆಸ್ ಜೊತೆಯಿದ್ದಾರೆ. ನಾಳೆ ಬಿಜೆಪಿ ಜ್ಯಾತ್ಯಾತೀತ ಪಕ್ಷವಾದರೆ ಮುಸ್ಲಿಮರು ಬಿಜೆಪಿ ಜೊತೆ ಕೂಡ ಇರುತ್ತಾರೆ ಎಂದು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ದೇಶದಲ್ಲಿ 22 ಕೋಟಿ ಮುಸ್ಲಿಂ ಜನಸಂಖ್ಯೆಯಿದೆ ಎಂದು ತಿಳಿಸಿದರು.
- ಗೋಲ್ಡನ್ ಸ್ಟಾರ್ ‘ಸಖತ್’ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್ ನ ‘ಸಖತ್’ ಚಿತ್ರದ ಬಿಡುಗಡೆಗೆ ದಿನಾಂಕ ಘೋಷಣೆಯಾಗಿದೆ.
ನವೆಂಬರ್ 12ರಂದು ‘ಸಖತ್’ ಚಿತ್ರ ಬಿಡುಗಡೆಯಾಗಲಿದೆ. ಚಿತ್ರ ನಿರ್ಮಾಣದ ಹೊಣೆ ಹೊತ್ತಿರುವ ಕೆವಿಎನ್ ಪ್ರೊಡಕ್ಷನ್ ಅಕ್ಟೋಬರ್ 24 ರಂದು ಸಿನಿಮಾ ಬಿಡುಗಡೆ ಸಂಬಂಧ ಅಧಿಕೃತ ಮಾಹಿತಿ ನೀಡಲಿದೆ, ಅದೇ ದಿನ ‘ಸಖತ್ ಬಾಲು’ ಟೀಸರ್ ಕೂಡ ರಿಲೀಸ್ ಆಗಲಿದೆ ಎಂದು ತಿಳಿದುಬಂದಿದೆ.
ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!
ಬಿ ಗ್ರೂಪ್ ನಲ್ಲಿ ಸ್ಕಾಟ್ಲೆಂಡ್ ತಂಡವು ಭಾರತ, ಪಾಕಿಸ್ಥಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ಥಾನ ಮತ್ತು ನಮೀಬಿಯಾ ತಂಡಗಳನ್ನು ಎದುರಿಸಲಿದೆ.
ಸ್ಕಾಟ್ಲೆಂಡ್ ಬೌಲರ್ ಮಾರ್ಕ್ ವ್ಯಾಟ್ ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ್ದಾರೆ. ಮೂರು ಪಂದ್ಯಗಳಲ್ಲಿ 5.41 ಎಕಾನಮಿಯಲ್ಲಿ ಮೂರು ವಿಕೆಟ್ ಪಡೆದಿರುವ ಎಡಗೈ ಸ್ಪಿನ್ನರ್ ಮಾರ್ಕ್ ವ್ಯಾಟ್, “ನಾನು ವಿರಾಟ್ ವಿರುದ್ಧ ಕೆಲವು ಯೋಜನೆಗಳನ್ನು ಸಿದ್ದಪಡಿಸಿದ್ದೇನೆ. ಅವುಗಳನ್ನು ಪಂದ್ಯದಲ್ಲಿ ಬಳಸುತ್ತೇನೆ. ವಿರಾಟ್ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ” ಎಂದು ಹೇಳಿದ್ದಾರೆ.