Advertisement

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

06:04 PM Jan 23, 2022 | Team Udayavani |
1. ಸ್ವಯಂ ಘೋಷಿತ ಸಂವಿಧಾನ ಪಂಡಿತ: ಮುಂದುವರಿದ ಸಿದ್ದು-ಹೆಚ್ ಡಿಕೆ ಟ್ವೀಟ್ ಸಮರ ಮಾಜಿ ಮುಖ್ಯಮಂತ್ರಿಗಳ ಟ್ವೀಟ್ ಸಮರ ಭಾನುವಾರವೂ ರಜೆ ಇಲ್ಲದೆ ಮುಂದುವರೆದಿದ್ದು, ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ಅವರು ಸ್ವಯಂ ಘೋಷಿತ ಸಂವಿಧಾನ ಪಂಡಿತ ಎಂದು ಕರೆದಿದ್ದಾರೆ. ಸಿದ್ದರಾಮಯ್ಯ ನಮ್ಮ ಪಕ್ಷ & ನಮ್ಮ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಮಾತು ಆಡಿದ ಮೇಲೆ ಅದನ್ನು ದಕ್ಕಿಸಿಕೊಳ್ಳುವ ಯೋಗ್ಯತೆಯೂ ಇರಬೇಕಲ್ಲವೇ? ಆ ಯೋಗ್ಯತೆ ಅವರಿಗಿಲ್ಲ ಎಂದು ಬರೆದಿದ್ದಾರೆ. 2. ವಿಷಮ ಸಮರಾಂಗಣ ಸೃಷ್ಟಿಕರ್ತರು ವಿತಂಡವಾದ ನಿಲ್ಲಿಸಲಿ: ಸಿದ್ದರಾಮಯ್ಯಗೆ ಸುನೀಲ್ ಕುಮಾರ್ ಟಾಂಗ್ ಲೇಡಿ ಹಿಲ್ ವೃತ್ತಕ್ಕೆ ಮಹರ್ಷಿ ನಾರಾಯಣ ಗುರು ಹೆಸರಿಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಣಯ ತೆಗೆದುಕೊಂಡಾಗ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮರೆತು ಬಿಟ್ಟಿದ್ದು, ನಾರಾಯಣ ಗುರುಗಳ ಹೆಸರನ್ನು ಸಮಾಜ ವಿಭಜಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕನ್ನಡ- ಸಂಸ್ಕೃತಿ ಮತ್ತು ಇಂಧನ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ. 3. ಉ.ಪ್ರದೇಶದಲ್ಲಿ ನಾವು ಅಧಿಕಾರಕ್ಕೆ ಬಂದರೆ ಇಬ್ಬರು ಸಿಎಂ,ಮೂವರು ಡಿಸಿಎಂ: ಅಸಾದುದ್ದೀನ್ ಓವೈಸಿ ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಬಾಬು ಸಿಂಗ್ ಕುಶ್ವಾಹಾ ಮತ್ತು ಭಾರತ್ ಮುಕ್ತಿ ಮೋರ್ಚಾದೊಂದಿಗೆ ಉತ್ತರ ಪ್ರದೇಶದಲ್ಲಿ ತಮ್ಮ ಮೈತ್ರಿಯನ್ನು ಶನಿವಾರ ಘೋಷಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ತಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಇಬ್ಬರು ಮುಖ್ಯಮಂತ್ರಿಗಳಾಗುತ್ತಾರೆ. ಒಬ್ಬರು ಒಬಿಸಿ ಸಮುದಾಯದವರು ಮತ್ತು ಇನ್ನೊಬ್ಬರು ದಲಿತ ಸಮುದಾಯದವರು ಸಿಎಂ ಆಗುತ್ತಾರೆ. ಮುಸ್ಲಿಂ ಸಮುದಾಯದವರು ಸೇರಿದಂತೆ 3 ಉಪಮುಖ್ಯಮಂತ್ರಿಗಳು ಇರುತ್ತಾರೆ ಎಂದು ಓವೈಸಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 4. ಕೋಲ್ಕತಾ: ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ ಬಾರಕ್‌ಪುರ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಭಾತ್ಪಾರಾದಲ್ಲಿ ಭಾನುವಾರ ಬಿಜೆಪಿ ಮತ್ತು ಟಿಎಂಸಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದೆ. 5. ದೆಹಲಿ ಸಚಿವರನ್ನು ಬಂಧಿಸಲು ಇಡಿ ಸಿದ್ಧತೆ : ಕೇಜ್ರಿವಾಲ್ ಆಕ್ರೋಶ ಪಂಜಾಬ್ ಚುನಾವಣೆಗೂ ಮುನ್ನ ದೆಹಲಿ ಆರೋಗ್ಯ ಮತ್ತು ಗೃಹ ಸಚಿವ ಸತ್ಯೇಂದ್ರ ಜೈನ ಅವರನ್ನು ಬಂಧಿಸಲು ಇಡಿ ಮುಂದಾಗಿದೆ ಎಂದು ಭಾನುವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 6. ಪಾರ್ಸೇಕರ್, ಪರ್ರಿಕರ್ ನಿರ್ಣಯದಿಂದ ಗೋವಾ ಬಿಜೆಪಿಗೆ ಪರಿಣಾಮವಿಲ್ಲ: ತಾನಾವಡೆ ಲಕ್ಷ್ಮೀಕಾಂತ ಪಾರ್ಸೇಕರ್ ಮತ್ತು ಉತ್ಪಲ್ ಪರ್ರಿಕರ್ ಅವರು ತೆಗೆದುಕೊಂಡ ನಿರ್ಣಯ ದುಃಖಕರ ಸಂಗತಿಯಾಗಿದೆ. ಅವರ ನಿರ್ಣಯದಿಂದ ಪಕ್ಷದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಹೇಳಿದ್ದಾರೆ. 7. ಪ್ರಣಯ ರಾಜನ ಕನಸಿನ ಕೂಸು ‘ಆರ್ಟ್‌ ಎನ್‌ ಯು’ ಹಿರಿಯ ನಟ ಶ್ರೀನಾಥ್‌ ಯುವಕಲಾವಿದರ ಕಲೆಗೆ ಮತ್ತಷ್ಟು ಹೊಳಪು ನೀಡುವ ನೂತನ ಕಲ್ಪನೆಯೊಂದಿಗೆ “ಆರ್ಟ್‌ ಎನ್‌ ಯು’ ಎಂಬ ಕಲಾ ಸಂಸ್ಥೆ ತೆರೆದಿದ್ದು, ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಶಿಕ್ಷಣವನ್ನು ನುರಿತ ಕಲಾವಿದರು, ತಜ್ಞರಿಂದ ತರಬೇತಿ ನೀಡಲಾಗುತ್ತಿದ್ದು, ಫೆಬ್ರವರಿಯಿಂದ ತರಗತಿಗಳನ್ನು ಆರಂಭಿಸಲಿದೆ. 8. ಟೀಂ ಇಂಡಿಯಾ ಹಾರಾಟಕ್ಕೆ ಉಡುಗಿಹೋದ ಉಗಾಂಡ: ಅಂಡರ್ 19 ಹುಡುಗರಿಗೆ 326 ರನ್ ಅಂತರದ ಜಯ ಅಂಡರ್ 19 ವಿಶ್ವಕಪ್ ಕೂಟದಲ್ಲಿ ಭಾರತದ ವಿಜಯಯಾತ್ರೆ ಮುಂದುವರಿದಿದೆ. ಉಗಾಂಡ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 326 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಐದು ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದರೆ, ಉಗಾಂಡ ತಂಡ ಕೇವಲ 79 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರೀ ಮುಖಭಂಗ ಅನುಭವಿಸಿತು.  
Advertisement

Udayavani is now on Telegram. Click here to join our channel and stay updated with the latest news.

Next