Advertisement

ಎಂಇಎಸ್ ದಬ್ಬಾಳಿಕೆ ವಿರೋಧಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್ ?

07:00 PM Dec 22, 2021 | Team Udayavani |
1. ಡಿಸೆಂಬರ್ 31ರಂದು ಕರ್ನಾಟಕ ಬಂದ್ ? ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ದಬ್ಬಾಳಿಕೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. 2. ಸುವರ್ಣಸೌಧ: ಮತ್ತೆ ಸದ್ದು ಮಾಡಿದ ಮಾಧ್ಯಮ‌ ನಿರ್ಬಂಧ ಮತಾಂತರ ನಿಷೇಧ ವಿಧೇಯಕದ ಚರ್ಚೆಯ ದಿನ ಕಲಾಪಕ್ಕೆ ಮಾಧ್ಯಮ ಪ್ರವೇಶ ತಡೆ ಹಾಕಿದ ವಿಚಾರ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ವಿಚಾರ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮಾಧ್ಯಮಗಳಿಗೆ ಎಂದಿನಂತೆ ಅವಕಾಶ ನೀಡಲಾಗಿದೆ. 3. ಭಾರತೀಯ ಪೌರತ್ವಕ್ಕಾಗಿ ಪಾಕಿಸ್ತಾನಿಯರಿಂದ ಅರ್ಜಿ ಭಾರತದ ಪೌರತ್ವಕ್ಕಾಗಿ ಸುಮಾರು 7,306 ಮಂದಿ ಪಾಕಿಸ್ತಾನಿಯರು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲು ಬಾಕಿ ಇರುವುದಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿರುವ ಅಂಕಿ ಅಂಶದಲ್ಲಿ ತಿಳಿಸಿದೆ. 4. ರುದ್ರಪ್ರಯಾಗದಲ್ಲಿ ಜಗತ್ತಿನ ಅತೀದೊಡ್ಡ ರೋಪ್‌ ವೇ ನಿರ್ಮಾಣ ಉತ್ತರಾಖಂಡ ಸರಕಾರ ರುದ್ರಪ್ರಯಾಗದಲ್ಲಿ ಜಗತ್ತಿನ ಅತೀ ದೊಡ್ಡ ರೋಪ್‌ ವೇ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಗೌರಿಕುಂಡದಿಂದ ಕೇದಾರನಾಥಕ್ಕೆ ಭಕ್ತರು 16 ಕಿಮೀ ದೂರ ನಡೆದುಕೊಂಡು ಪ್ರಯಾಣಿಸಬೇಕಾ¬ಗಿದೆ. ಈ ಉದ್ದೇಶಿತ ಯೋಜನೆ ಶೀಘ್ರ ಜಾರಿಗೊಂಡು ಮುಕ್ತಾಯವಾದರೆ ಅನುಕೂಲವಾಗಲಿದೆ ಎಂಬುದು ಯಾತ್ರಿಕರ ಅಭಿಪ್ರಾಯ. 5. ಮದುವೆ ವಯಸ್ಸು ಏರಿಕೆ ಸ್ಥಾಯೀ ಸಮಿತಿ ಅಂಗಳಕ್ಕೆ ಬಾಲ್ಯ ವಿವಾಹ ನಿಷೇಧ ಮಸೂದೆ, 2021ರ ಮಂಡನೆಗೆ ವಿಪಕ್ಷಗಳ ಹಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳ ಒತ್ತಾಯದ ಹಿನ್ನಲೆಯಲ್ಲಿ ಮಸೂದೆ ಮಂಡನೆಯಾದ ಬೆನ್ನಲ್ಲೇ ಸಚಿವೆ ಸ್ಮತಿ ಇರಾನಿ ಅದನ್ನು ಸಂಸತ್‌ನ ಸ್ಥಾಯೀ ಸಮಿತಿಯ ಪರಿಶೀಲನೆಗೆ ಒಪ್ಪಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ. 6. ಅಗತ್ಯವಿದ್ದರೆ ನೈಟ್‌ ಕರ್ಫ್ಯೂ ಜಾರಿ ಮಾಡಿ : ಕೇಂದ್ರ ಸೂಚನೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಲವು ಕೋವಿಡ್‌ ಮುಂಜಾಗೃತ ಸೂಚನೆಗಳನ್ನು ನೀಡಿದೆ. ಅಗತ್ಯ ಬಿದ್ದರೆ ರಾತ್ರಿ ಕರ್ಫ್ಯೂ ಜಾರಿ ಮಾಡಿ, ಕೊರೊನಾ ವಾರ್‌ ರೂಮ್‌ಗಳನ್ನು ಚುರುಕುಗೊಳಿಸಿ, ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳನ್ನು ಸಿದ್ಧಗೊಳಿಸಿ ಎಂದು ತಿಳಿಸಿದ್ದಾರೆ. 7. ಗಂಡುಲಿ: ಟ್ರೇಲರ್‌ನಿಂದಲೇ ಗರ್ಜಿಸಲು ಸಿದ್ದ ಗಂಡುಲಿ’ ಎಂಬ ಟೈಟಲ್‌ನ ಚಿತ್ರವೊಂದು ಸದ್ದಿಲ್ಲದೇ ತಯಾರಾಗಿದ್ದು, ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರವನ್ನು ವಿನಯ್‌ ರತ್ನಸಿದ್ದಿ ನಿರ್ದೇಶಿಸಿದ್ದಾರೆ. 8. ಲಂಕಾ ಕ್ರಿಕೆಟಿಗರು ಫಿಟ್‌ನೆಸ್‌ ಕಳೆದುಕೊಂಡರೆ ವೇತನ ಕಡಿತ ! ರಾಷ್ಟ್ರೀಯ ತಂಡದ ಆಟಗಾರರ ಫಿಟ್‌ನೆಸ್‌ ವಿಚಾರದಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದರಂತೆ ಮುಂದಿನ ವರ್ಷದಿಂದ ಆಟಗಾರರು ಕಟ್ಟುನಿಟ್ಟಿನ ಫಿಟ್‌ನೆಸ್‌ ಪರೀಕ್ಷೆಗೆ ಒಳಪಡಲಿದ್ದು, ಇಲ್ಲಿ ಅನುತ್ತೀರ್ಣರಾದ ಆಟಗಾರ ವೇತನ ಕಡಿತ ಮಾಡಲು ನಿರ್ಧರಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next