SAARC ಸಭೆಯಲ್ಲಿ ತಾಲಿಬಾನ್ ಭಾಗವಹಿಸುವಂತೆ ಪಾಕ್ ಮನವಿ : ಸಭೆಯೇ ರದ್ದು
ಇದೇ ಶನಿವಾರ ನಿಗದಿಯಾಗಿದ್ದ ಸಾರ್ಕ್ ವಿದೇಶಾಂಗ ಮಂತ್ರಿಗಳ ಸಭೆ ರದ್ದುಗೊಂಡಿದೆ. ಅಫ್ಘಾನಿಸ್ತಾನ ಸಾರ್ಕ್ ನಲ್ಲಿ ಪ್ರತಿನಿಧಿಸಲು ತಾಲಿಬಾನ್ಗೆ ಅನುಮತಿ ನೀಡುವಂತೆ ಪಾಕಿಸ್ತಾನ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸಭೆಯನ್ನೇ ರದ್ದುಗೊಳಿಸಲಾಗಿದೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26,964 ಕೋವಿಡ್ ಪ್ರಕರಣ ಪತ್ತೆ
ಭಾರತದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 26,964 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 383 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿದುಬಂದಿದೆ.
ಉಗ್ರ ಎಂದು ತಪ್ಪು ತಿಳಿದು ಕಾಶ್ಮೀರ ದೇವಾಲಯದಲ್ಲಿ ಕಾನ್ಸ್ ಟೇಬಲ್ ಗೆ ಗುಂಡಿಟ್ಟು ಹತ್ಯೆ
ದೇವಸ್ಥಾನದ ಒಳಗೆ ಪ್ರವೇಶಿಸಲು ಯತ್ನಿಸಿದ್ದ ಪೊಲೀಸ್ ಕಾನ್ಸ್ ಟೇಬಲ್ ಅನ್ನು ದೇಶ ವಿರೋಧಿ ಆಗಂತುಕ ಎಂದು ತಪ್ಪಾಗಿ ಭಾವಿಸಿ ಭದ್ರತಾ ಸಿಬಂದಿ ನಡೆಸಿದ ಗುಂಡಿನ ದಾಳಿಗೆ ಕಾನ್ಸ್ ಟೇಬಲ್ ಸಾವನ್ನಪ್ಪಿರುವ ಘಟನೆ ಕಾಶ್ಮೀರದ ದೇವಸ್ಥಾನದಲ್ಲಿ ನಡೆದಿದೆ.
ವರದಿಗಳು ಏಕಪಕ್ಷೀಯವಾಗಿ ಇರಬಾರದು
ಮಾಧ್ಯಮ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರಕಟವಾಗುವ ವರದಿಗಳು ಏಕಪಕ್ಷೀಯವಾಗಿ ಇರಬಾರದು. ದೇಶದ ಘನತೆಯೊಂದಿಗೆ ರಾಜಿ ಮಾಡಿಕೊಂಡು ಟೀಕೆ ಮಾಡಬಾರದು ಎಂದು ಅದಾನಿ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದಾರೆ.
ಭವಾನಿಪುರ ಉಪ ಚುನಾವಣೆ : ದೀದಿ ಗೆಲ್ಲೋದು ಖಚಿತ ಎಂದ ಕುಮಾರಸ್ವಾಮಿ
ಇಡೀ ಭಾರತದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರೀ ಅಂತರದ ಗೆಲವು ಸಾಧಿಸುವುದು ಖಚಿತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಮಂಗನ ಸೇಡು : 22 ಕಿ.ಮೀ ಬಿಟ್ಟು ಬಂದ್ರು ಲಾರಿಯಲ್ಲಿ ಮತ್ತೆ ಹುಡುಕಿಕೊಂಡು ಬಂದ ಕೋತಿ
ಇತ್ತೀಚೆಗೆ ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಆಟೋ ಚಾಲಕ ತನ್ನನ್ನು ರೇಗಿಸಿದ ಎಂಬ ಕಾರಣಕ್ಕೆ ಆತನ ಮೇಲೆ ಕೋತಿಯೊಂದು ದಾಳಿ ಮಾಡಿತ್ತು. ಇದರಿಂದ ಗಾಬರಿಗೊಂದ ಅರಣ್ಯ ಸಿಬ್ಬಂದಿ ಆ ಕೋತಿಯನ್ನು 22 ಕಿ. ಮೀ ದೂರದಲ್ಲಿನ ಚಾರ್ಮಾಡಿ ಘಾಟಿಯ ದಟ್ಟ ಅರಣ್ಯದಲ್ಲಿ ಬಿಟ್ಟುಬಂದಿದ್ದರು. ಆದರೆ ಇದೀಗ ಮತ್ತೆ ಅದೇ ಕೋತಿ ನಾಲ್ಕೇ ದಿನಕ್ಕೆ ಗೊಬ್ಬರದ ಲಾರಿ ಏರಿ ಪೇಟೆ ಸೇರಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಕನ್ನಡ ಸಿನಿಮಾ ಮಾಡಲು ರಶ್ಮಿಕಾಗೆ ಟೈಮ್ ಇಲ್ವಂತೆ!
ಇತ್ತೀಚೆಗಷ್ಟೇ “ಮಿಷನ್ ಮಜ್ನು’ ಸಿನಿಮಾದ ಶೂಟಿಂಗ್ ಮುಗಿಸಿದ ಖುಷಿಯಲ್ಲಿದ್ದ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ದೂರ ಸರಿದಿರುವ ಕಾರಣದ ಬಗ್ಗೆ ಮಾತನಾಡಿದ್ದಾರೆ. “ಈಗಾಗಲೇ ತೆಲುಗು ಮತ್ತು ಹಿಂದಿಯಲ್ಲಿ ಸಿನಿಮಾಗಳನ್ನು ಮಾಡುತ್ತಿರುವುದರಿಂದ, ಟ್ರಾವೆಲ್ ಮಾಡೋದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಇದೆಲ್ಲರ ಜೊತೆಗೆ ಕನ್ನಡ ಸಿನಿಮಾ ಮಾಡಬೇಕೆಂದ್ರೆ, ಇನ್ನಷ್ಟು ಎನರ್ಜಿ ಬೇಕಾಗುತ್ತದೆ. 365 ದಿನಗಳು ಕೂಡ ನನಗೆ ಸಾಕಾಗುವುದಿಲ್ಲ’ ಎಂದಿದ್ದಾರೆ.
IPL : ಹೈದ್ರಾಬಾದ್ ಆಟಗಾರನಿಗೆ ಕೋವಿಡ್ ದೃಢ : 6 ಮಂದಿ ಐಸೋಲೇಶನ್
SRH ತಂಡದ ಬೌಲರ್ ನಟರಾಜನ್ ಅವರಿಗೆ ಕೋವಿಡ್ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಅವರನ್ನು ಮತ್ತು ಅವರ ಸಂಪರ್ಕದಲ್ಲಿದ್ದ ಆರು ಮಂದಿಯನ್ನು ಐಸೋಲೇಟ್ ಮಾಡಲಾಗಿದೆ.