Advertisement

ಸತ್ತ ವ್ಯಕ್ತಿ ಬದುಕಿದ ! ಶವಾಗಾರದ ಫ್ರೀಜರ್‌ನಲ್ಲಿ 7 ಗಂಟೆಗಳ ಕಾಲ ಇದ್ದ ವ್ಯಕ್ತಿ

07:23 PM Nov 21, 2021 | Team Udayavani |
  1. ಬೊಮ್ಮಾಯಿ ಅವರೇ, ನಿಮ್ಮ ಹನಿಮೂನ್ ಕಾಲ ಮುಗಿದಿದೆ : ಸಿದ್ದರಾಮಯ್ಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಹನಿಮೂನ್ ಕಾಲ ಮುಗಿದಿದೆ. ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
  1. ಅಸ್ಸಾಂ ನಲ್ಲಿ ಮೊಳಗಿದ ಕನ್ನಡದ ಎನ್ಇಪಿ ಗೀತೆ
ಅಸ್ಸಾಂನ ಗುವಾಹಟಿಯಲ್ಲಿ ಭಾನುವಾರ ‘ಈಶಾನ್ಯ ರಾಜ್ಯಗಳ ಶೈಕ್ಷಣಿಕ ಸಮಾವೇಶ ನಡೆಯಿತು. ಕರ್ನಾಟಕವು ದೇಶದಲ್ಲೇ ಮೊದಲ ರಾಜ್ಯವಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಅನುಷ್ಠಾನಗೊಳಿಸಿದೆ. ಈ ವೇಳೇ ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ ಜನಜಾಗೃತಿಗಾಗಿ ಕನ್ನಡದಲ್ಲಿ ರಚಿಸಿರುವ ಗೀತೆಯನ್ನು ಅಲ್ಲಿ ಪ್ರಸಾರ ಮಾಡಿದರು.
  1. ಮೋದಿ – ಯೋಗಿ ಫೋಟೋ ವೈರಲ್‌
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಮಾಡಿರುವ ಟ್ವೀಟ್‌ ಭಾರಿ ವೈರಲ್‌ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಪ್ತವಾಗಿ ನಡೆಯುತ್ತಿರುವ ಫೋಟೋಗಳನ್ನು ಕಾವ್ಯಾತ್ಮಕ ಬರಹದೊಂದಿಗೆ ಯೋಗಿ  ಟ್ವೀಟ್‌ ನಲ್ಲಿ ಹಂಚಿಕೊಂಡಿದ್ದಾರೆ.
  1. ಇಮ್ರಾನ್‌ ಖಾನ್‌ ನನ್ನ ಅಣ್ಣನಿದ್ದಂತೆ : ನವಜೋತ್‌ ಸಿಂಗ್‌ ಸಿಧು
ಪಂಜಾಬ್‌ನ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಧು ಪಾಕ್‌ಗೆ ತೆರಳಿದ್ದರು. ಅಲ್ಲಿನ ಅಧಿಕಾರಿಗಳು ವಿಶೇಷವಾಗಿ ಅವರನ್ನು ಬರಮಾಡಿಕೊಂಡಿದ್ದಾರೆ. ಆ ವೇಳೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ನನ್ನ ಅಣ್ಣನಿದ್ದಂತೆ ಎಂದು ನವಜೋತ್‌ ಸಿಂಗ್‌ ಸಿಧು ಹೇಳಿದ್ದಾರೆ. ಈ ಹೇಳಿಕೆ ಭಾರತದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.
  1. ಸತ್ತ ವ್ಯಕ್ತಿ ಜೀವಂತ!! ; ಶವಾಗಾರದ ಫ್ರೀಜರ್‌ನಲ್ಲಿ 7 ಗಂಟೆಗಳ ಕಾಲ ಇರಿಸಿದರು
ಮೊರಾದಾಬಾದ್ : ಉತ್ತರಪ್ರದೇಶದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ, 40 ವರ್ಷದ ವ್ಯಕ್ತಿ ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿ, ಶವಾಗಾರದ ಫ್ರೀಜರ್‌ನಲ್ಲಿ 7 ಗಂಟೆಗಳ ಕಾಲ ಇರಿಸಿ ಇನ್ನೇನು ಮರಣೋತ್ತರ ಪರೀಕ್ಷೆ ಆರಂಭಿಸಬೇಕೆನ್ನುವಷ್ಟರಲ್ಲಿ ಆತ ಜೀವಂತವಾಗಿ ಕಂಡು ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
  1. ಇಂದೋರ್‌ಗೆ ಸತತ 5ನೇ ಬಾರಿಗೆ ಸ್ವಚ್ಛತೆಯ ಗರಿ!
ಸತತ 5ನೇ ಬಾರಿಯೂ ಮಧ್ಯಪ್ರದೇಶದ ಇಂದೋರ್‌ ನಗರವು ದೇಶದಲ್ಲೇ “ಅತ್ಯಂತ ಸ್ವಚ್ಛ ನಗರಿ’ ಎಂಬ ಖ್ಯಾತಿಗೆ ಪಾತ್ರವಾಗಿದೆ. ದಿಲ್ಲಿಯ ವಿಜ್ಞಾನ ಭವನ­ದಲ್ಲಿ ಶನಿವಾರ “ಸ್ವಚ್ಛ ಅಮೃತ ಮಹೋತ್ಸವ’ ನಡೆಯಿತು. ಈ ಕಾರ್ಯ­ಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಇಂದೋರ್‌ ಅನ್ನು “ಸ್ವಚ್ಛತಾ ಕಾ ತಾಜ್‌’ ಎಂದು ಬಣ್ಣಿಸಿದ್ದಾರೆ.
  1. ಅಂತಾರಾಷ್ಟ್ರೀಯ ಚಿತ್ರೋತ್ಸವ
ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪ್ರಮುಖ ವಿಭಾಗವಾದ ಭಾರತೀಯ ಪನೋರಮಾದ ಉದ್ಘಾಟನೆ ರವಿವಾರ ನೆರವೇರಿತು. ಸಿನಿಮಾ ಮಂದಿರದ ಎದುರು ಒಂದಿಷ್ಟು ಸಿನಿಮಾ ಪ್ರೇಮಿಗಳು ಕಂಡು ಬಂದರು.
  1. ನಿಮ್ಮ ಶಾಲೆಗೂ ಭೇಟಿ ನೀಡಬಹುದು ಟೋಕಿಯೊ ಒಲಿಂಪಿಕ್ಸ್‌ ಸಾಧಕರು!
ಭಾರತೀಯ ಒಲಿಂಪಿಕ್ಸ್‌ ತಂಡದ ಎಲ್ಲ ಕ್ರೀಡಾಪಟುಗಳು 2023ರ ಆಗಸ್ಟ್‌ 15ರೊಳಗೆ 75 ಶಾಲೆಗಳಿಗೆ ಭೇಟಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಮನವಿ ಮಾಡಿದ್ದರು. ಅದರಂತೆ ಒಟ್ಟು 75 ಶಾಲೆಗಳಿಗೆ 75 ಕ್ರೀಡಾಪಟುಗಳು ಮುಂದಿನ ಎರಡು ವರ್ಷಗಳಲ್ಲಿ ಬೇಟಿ ನೀಡಲಿದ್ದಾರೆ. ಫಿಟ್‌ ಇಂಡಿಯಾ ಮಿಷನ್‌’ ಅಭಿಯಾನದ ವ್ಯಾಪ್ತಿಯಲ್ಲಿ ಈ ಭೇಟಿಯಾಗಲಿದೆ.
Advertisement

Udayavani is now on Telegram. Click here to join our channel and stay updated with the latest news.

Next