Advertisement

ಶೀಘ್ರವೇ ನಡೆಯಲಿದೆಯಂತೆ ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹ!

05:22 PM Feb 21, 2022 | Team Udayavani |
1. ಶಿವಮೊಗ್ಗ ಹತ್ಯೆ ಕೇಸ್:ಈಶ್ವರಪ್ಪ ಹೇಳಿಕೆ ಸಮರ್ಥಿಸಿಕೊಳ್ಳದ ಸಿಎಂ ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ‘ಮುಸ್ಲಿಂ ಗೂಂಡಾಗಳೇ ಕಾರಣಕರ್ತರು’ ಎಂಬ ಈಶ್ವರಪ್ಪ ಹೇಳಿಕೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಮರ್ಥಿಸಿಕೊಳ್ಳಲು ನಿರಾಕರಿಸಿದರು.,’ಅವರು ಹೇಳಿದ ಮಾತ್ರಕ್ಕೆ ನಾನು ಹೇಳಬೇಕು ಅಂತಿಲ್ಲ, ತನಿಖೆ ನಡೆದ ಬಳಿಕ ಎಲ್ಲವೂ ಹೊರಗೆ ಬರಲಿದೆ’ಎಂದು ಹೇಳಿದ್ದಾರೆ. 2. ದಾಳಿಗೆ ಮುಂದಾದ ಕಾಡಾನೆಗೆ ಅಳುಕದೆ ಹೀರೋ ಆದ ಅರಣ್ಯ ರಕ್ಷಕ ನೆ ನಡೆದದ್ದೇ ದಾರಿ ಎಂಬಂತೆ ರೈತರ ಅಪಾರ ಪ್ರಮಾಣದ ಬೆಳೆಗಳನ್ನು ಹಾಳುಮಾಡಲು ಪ್ರಾರಂಭಿಸಿದ ಕಾಡಾನೆಯನ್ನು ಅಳುಕದೆ, ಅಂಜದೆ ಹಿಮ್ಮೆಟ್ಟಿಸಿದ ಅರಣ್ಯ ರಕ್ಷಕರೊಬ್ಬರು ಸಾಮಾಜಿಕ ತಾಣಗಳಲ್ಲಿ ಹೀರೋ ಆಗಿ ಹೊರ ಹೊಮ್ಮಿದ್ದಾರೆ. ಈ ಘಟನೆ ಸಂಬಲ್ಪುರ ಜಿಲ್ಲೆಯ ರೆಧಾಖೋಲ್ ಅರಣ್ಯ ವಿಭಾಗದ ಚಡ್ಚಡಿ ಮತ್ತು ಅಂಗಬೀರಾ ಗ್ರಾಮದಲ್ಲಿ ನಡೆದಿದೆ. 3. ಬಿಡೆನ್-ಪುತಿನ್ ಶೃಂಗಸಭೆಗೆ ತಾತ್ವಿಕ ಒಪ್ಪಿಗೆ ರಷ್ಯಾ ಭಾರಿ ಸಂಖ್ಯೆಯ ಸೈನಿಕರೊಂದಿಗೆ ಉಕ್ರೇನ್ ಅನ್ನು ಸುತ್ತುವರೆದಿರುವ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಅಧ್ಯಕ್ಷ ಜೋ ಬಿಡೆನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಶೃಂಗಸಭೆಗೆ ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ರಷ್ಯಾದ ಮೇಲೆ ಒತ್ತಡ ಹೇರುವ ಉದ್ದೇಶ ಈ ಶೃಂಗಸಭೆ ನಡೆಸಬಹುದು ಎಂದು ಹೇಳಲಾಗಿದೆ. 4. ಈ ಬಾರಿ ನಗರಪಾಲಿಕೆ ಚುನಾವಣೆ ವೇಳೆ ಹಿಂಸಾಚಾರ ನಡೆಸಿದರೆ ಪ್ರತಿ ಬೂತ್ ಧ್ವಂಸ ಪಶ್ಚಿಮಬಂಗಾಳದಲ್ಲಿ ಫೆಬ್ರವರಿ 27ರಂದು ನಡೆಯಲಿರುವ ನಗರಪಾಲಿಕೆಯ ಚುನಾವಣೆ ಸಂದರ್ಭದಲ್ಲಿ ಒಂದು ವೇಳೆ ಹಿಂಸಾಚಾರ ನಡೆಸಿದರೆ, ಪ್ರತಿಯೊಂದು ಮತಗಟ್ಟೆಯನ್ನೂ ಧ್ವಂಸಗೊಳಿಸುವುದಾಗಿ ಪಶ್ಚಿಮಬಂಗಾಳದ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ಅರ್ಜುನ್ ಸಿಂಗ್ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ. 5. ಲಾಲುಪ್ರಸಾದ್ ಗೆ 5 ವರ್ಷ ಜೈಲು, 60 ಲಕ್ಷ ರೂ. ದಂಡ ಬಹುಕೋಟಿ ರೂಪಾಯಿಯ ಅಂತಿಮ ಹಾಗೂ 5ನೇ ಮೇವು ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿಯ ವಿಶೇಷ ಸಿಬಿಐ ಕೋರ್ಟ್ ಸೋಮವಾರ ತೀರ್ಪು ನೀಡಿದೆ. ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಗೆ 5 ವರ್ಷ ಜೈಲುಶಿಕ್ಷೆ ಹಾಗೂ 60 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 6. ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ಪಡೆದ “ಪುಷ್ಪ”, ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಭರ್ಜರಿ ಗಳಿಕೆ ಕಂಡಿದ್ದಲ್ಲದೇ, ಹಿಂದಿಗೂ ಡಬ್ ಆಗಿತ್ತು. ಇದೀಗ ಪುಪ್ಪ ಸಿನಿಮಾ 2022ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿಗೆ ಭಾಜನವಾಗಿದೆ. 7. ಶೀಘ್ರವೇ ನಡೆಯಲಿದೆಯಂತೆ ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹ! ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಶೀಘ್ರದಲ್ಲಿಯೇ ವಿವಾಹವಾಗಲಿದ್ದಾರೆ ಎಂದು ಹೀಗೊಂದು ಸುದ್ದಿ ಹರಿದಾಡುತ್ತಿದೆ. ಈ ವರ್ಷದ ಕೊನೆಯಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ಊಹಾಪೋಹಗಳಿವೆ. ಆದರೆ, ರಶ್ಮಿಕಾ ಆಗಲಿ, ವಿಜಯ್ ಆಗಲಿ ತಮ್ಮ ಸಂಬಂಧದ ಬಗ್ಗೆ ಇನ್ನೂ ಬಾಯಿಬಿಟ್ಟಿಲ್ಲ. 8. ಆರು ವರ್ಷಗಳ ಬಳಿಕ ಟಿ20 ರಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ವೈಟ್ ವಾಶ್ ಮಾಡಿದ ಭಾರತ ತಂಡ ಟಿ20 ರಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದೆ. ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೂರೂ ಪಂದ್ಯಗಳನ್ನು ರೋಹಿತ್ ಪಡೆ ಗೆದ್ದು ಬೀಗಿದೆ. 2016ರ ಫೆಬ್ರವರಿ ಬಳಿಕ ಇದೇ ಮೊದಲ ಬಾರಿಗೆ ಭಾರತ ತಂಡ ಟಿ20 ಕ್ರಿಕೆಟ್ ನಲ್ಲಿ ಅಗ್ರಸ್ಥಾನಕ್ಕೇರಿದೆ.
Advertisement

Udayavani is now on Telegram. Click here to join our channel and stay updated with the latest news.

Next