Advertisement

ಜಾಕ್ವೆಲಿನ್ ಗಾಗಿ 500 ಕೋಟಿ ಬಜೆಟ್ ನ ಸಿನಿಮಾ ಮಾಡಲು ಮುಂದಾಗಿದ್ದನಂತೆ ಸುಕೇಶ್

05:37 PM Dec 20, 2021 | Team Udayavani |
1. ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮರು: ಸಚಿವ ಸೋಮಣ್ಣ ಗುಡುಗು ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮರು. ಮಹಾರಾಷ್ಟದ ಮುಖ್ಯಮಂತ್ರಿ ಉದ್ವವ್ ಠಾಕ್ರೆ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ಬಿಡಬೇಕು. ರಾಷ್ಟ್ರೀಯತೆ ಭಾವ್ಯಕೈತೆಗೆ ಧಕ್ಕೆ ತರುವ ಪ್ರಯುತ್ನ ಮಾಡಬೇಡಿ ಎಂದು ಸಚಿವ ವಿ.ಸೋಮಣ್ಣ ಖಡಕ್ ಎಚ್ಚರಿಕೆ ನೀಡಿದರು. 2. ಲೈಂಗಿಕ ಕಿರುಕುಳ ಕೇಸ್: ತಲೆಮರೆಸಿಕೊಂಡಿದ್ದ ನ್ಯಾಯವಾದಿ ರಾಜೇಶ್ ಕೋರ್ಟ್ ಗೆ ಶರಣು ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಮಂಗಳೂರಿನ ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕರಾಗಿದ್ದ ಕೆ.ಎಸ್.ಎನ್ ರಾಜೇಶ್ ಸೋಮವಾರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. 3. ಬೆಳಗಾವಿ ಪ್ರಕರಣದ ಪ್ರೊಡ್ಯೂಸರ್, ಡೈರೆಕ್ಟರ್ ಡಿಕೆಶಿ: ಸಿ.ಟಿ.ರವಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಬೆಳಗಾವಿ ಎಂಇಎಸ್ ಪುಂಡಾಟಿಕೆ ಪ್ರಕರಣದ ಪ್ರೊಡ್ಯೂಸರ್, ಡೈರೆಕ್ಟರ್ ಅನ್ನೋದು ಬಹಳ ಸ್ಪಷ್ಟ ಎಂದು ಬಿಜೆಪಿ ಶಾಸಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ. 4. ಬೆಂಗಳೂರು: 100 ದಾಟಿದ ಕೊರೊನಾ ಕಂಟೈನ್‌ಮೆಂಟ್ ವಲಯಗಳು! ಬೆಂಗಳೂರಿನಲ್ಲಿ ಒಟ್ಟು 106 ಸಕ್ರಿಯ ಕೊರೊನಾ ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸಲಾಗಿದ್ದು, ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 39 ವಲಯಗಳಿವೆ. ಬಿಬಿಎಂಪಿ ಸೋಮವಾರ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಬೆಂಗಳೂರು ದಕ್ಷಿಣ ಮತ್ತು ಮಹದೇವಪುರದಲ್ಲಿ ಕ್ರಮವಾಗಿ 24 ಮತ್ತು 12 ವಲಯಗಳಿದ್ದು ಎರಡನೇ ಮತ್ತು ಮೂರನೇ ಅತಿ ಹೆಚ್ಚು ಕಂಟೈನ್‌ಮೆಂಟ್ ವಲಯಗಳನ್ನು ಹೊಂದಿವೆ. 5. ಜಾಕ್ವೆಲಿನ್ ಗಾಗಿ 500 ಕೋಟಿ ರೂ. ಬಜೆಟ್ ನ ಸಿನಿಮಾ ಮಾಡಲು ಮುಂದಾಗಿದ್ದ ಸುಕೇಶ್ ಚಂದ್ರಶೇಖರ್ ಹಲವು ಖ್ಯಾತನಾಮರಿಗೆ ಕೋಟ್ಯಾಂತರ ರೂ. ವಂಚಿಸಿ, ಹಲವು ಬಾಲಿವುಡ್ ನಟಿಯರೊಂದಿಗೆ ವಿಶೇಷ ಸಂಬಂಧ ಹೊಂದಿ ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಿರುವ ಸುಕೇಶ್ ಚಂದ್ರಶೇಖರ್ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಗೆ ದುಬಾರಿ ಗಿಫ್ಟ್ ಗಳನ್ನು ನೀಡಿದ್ದ ಕಾಮನ್ ಮ್ಯಾನ್ ಸುಕೇಶ್, ನಟಿಗಾಗಿ 500 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದ್ದ. 6. ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 6,563 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 6,563 ಹೊಸ ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, 132 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ. 7. ಬಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಗೆ ಮತ್ತೆ ಇಡಿ ಸಮನ್ಸ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸೋಮವಾರ ಐಶ್ವರ್ಯಾ ಅವರನ್ನು ಇಡಿ ವಿಚಾರಣೆಗೆ ಕರೆದಿದ್ದು, ಹೇಳಿಕೆಯನ್ನು ದಾಖಲಿಸಲು ಬಯಸುತ್ತದೆ ಎಂದು ಹೇಳಿದೆ. 8. ಆ್ಯಶಸ್ ಸರಣಿ: ಅಜೇಯ ದಾಖಲೆ ಮುಂದುವರಿಸಿದ ಆಸೀಸ್; ಮತ್ತೆ ಮುಗ್ಗರಿಸಿದ ಇಂಗ್ಲೆಂಡ್ ಅಡಿಲೇಡ್: ಆ್ಯಶಸ್ ಸರಣಿಯ ಎರಡನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಅಡಿಲೇಡ್ ಓವಲ್ ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆದ್ದ ಸ್ಟೀವ್ ಸ್ಮಿತ್ ಪಡೆ ಪಿಂಕ್ ಬಾಲ್ ಟೆಸ್ಟ್ ನಲ್ಲಿ ತನ್ನ ಅಜೇಯ ಗೆಲುವಿನ ದಾಖಲೆಯನ್ನು ಮುಂದುವರಿಸಿತು. ಗೆಲುವಿಗೆ 468 ರನ್ ಗಳ ದೊಡ್ಡ ಮೊತ್ತವನ್ನು ಬೆನ್ನತ್ತಿದ್ದರ ರೂಟ್ ಪಡೆ 192 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ 275 ರನ್ ಅಂತರದ ಸೋಲನುಭವಿಸಿತು.
Advertisement

Udayavani is now on Telegram. Click here to join our channel and stay updated with the latest news.

Next