Advertisement

ಶಾಲೆಯಲ್ಲಿ ಮೊಟ್ಟೆ ಕೊಟ್ಟರೆಂದು ಪುತ್ರನನ್ನು ಶಾಲೆ ಬಿಡಿಸಿದ ಪೋಷಕರು

06:00 PM Dec 19, 2021 | Team Udayavani |
1. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಜಾತಿಗೆ ಸೀಮಿತ ಮಾಡಬೇಡಿ : ಸಿಎಂ ದೇಶ ಭಕ್ತರಾದ ಶಿವಾಜಿ ಮಹರಾಜರು, ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರ ಚನ್ನಮ್ಮ ಅವರು ಸಮುದಾಯ ಮೀರಿ ನಿಂತು ದೇಶಕ್ಕಾಗಿ ತ್ಯಾಗ ಮಾಡಿ, ದೇಶವನ್ನು ಒಗ್ಗೂಡಿಸಿದವರು, ಅವರ ಹೆಸರಲ್ಲಿ ನಾವೆಲ್ಲರು ಒಗ್ಗಟ್ಟಾಗಿ ಇರಬೇಕು, ಅವರನ್ನು ಜಾತಿಗೆ ಸೀಮಿತ ಮಾಡಬಾರದು ಎಂದು ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. 2. ಬ್ಯಾನ್ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ : ಸಚಿವ ಪ್ರಭು ಚೌಹಾಣ್ ಬೆಳಗಾವಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದು, ಎಂಇಎಸ್ ಬ್ಯಾನ್ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಭಾನುವಾರ ಹೇಳಿಕೆ ನೀಡಿದ್ದಾರೆ. 3. ಶಾಲೆಯಲ್ಲಿ ಮೊಟ್ಟೆ ಕೊಟ್ಟಿದ್ದಕ್ಕೆ ಪುತ್ರನ ಟಿಸಿ ಪಡೆದ ಪಾಲಕ! ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವ ಯೋಜನೆ ಆರಂಭಿಸಿದ ಸರ್ಕಾರದ ನಡೆ ವಿರೋಧಿಸಿ ಕೊಪ್ಪಳದ ಪಾಲಕರೊಬ್ಬರು ತನ್ನ ಪುತ್ರನ ವರ್ಗಾವಣೆ ಪತ್ರ (ಟಿಸಿ) ಪಡೆದು ಬೇರೆ ಶಾಲೆಗೆ ದಾಖಲಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲಿಂಗಾಯತ ಧರ್ಮ ಮಹಾಸಭಾ ರಾಜ್ಯಾಧ್ಯಕ್ಷ ವೀರಣ್ಣ ಕೊರ್ಲಹಳ್ಳಿ ತಮ್ಮ ಪುತ್ರನ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ದಾಖಲಿಸಿದ್ದಾರೆ. 4. ಸಚಿವ ಕಾರಜೋಳ 5 ಸಾವಿರ ಮತ ಯಾರಿಗೆ ಹಾಕಿಸಿದರು:ಸುನಿಲ್ ಗೌಡ ಪ್ರಶ್ನೆ ಸ್ಥಳೀಯ ಸಂಸ್ಥೆಗಳ ಮೇಲ್ಮನೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ ಅವರನ್ನು 5 ಸಾವಿರ ಮತಗಳಿಂದ ಗೆಲ್ಲಿಸುವುದಾಗಿ ಹೇಳಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಅಷ್ಟು ಮತಗಳನ್ನು ಯಾರಿಗೆ ಹಾಕಿಸಿದರು ಎಂದು ಜನರಿಗೆ ಹೇಳಬೇಕು ಎಂದು ಮೇಲ್ಮನೆ ನೂತನ ಕಾಂಗ್ರೆಸ್ ಸದಸ್ಯ ಸುನಿಲ ಗೌಡ ಪಾಟೀಲ ವ್ಯಂಗ್ಯವಾಡಿದ್ದಾರೆ. 5. ಶ್ರೀನಗರ: ಗಡಿ ನುಸುಳಿದ 5 ವರ್ಷಗಳ ಬಳಿಕ ಪಾಕ್ ಉಗ್ರನ ಹತ್ಯೆ ಭಾನುವಾರ ಮುಂಜಾನೆ ನಗರದ ಹರ್ವಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಪಾಕಿಸ್ಥಾನದ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 6. ಕೋಲ್ಕತಾ: ಕೆಎಂಸಿ ಚುನಾವಣೆ ವೇಳೆ ಬಾಂಬ್ ಸ್ಫೋಟ; ಮೂವರಿಗೆ ಗಾಯ ಭಾನುವಾರ ನಡೆಯುತ್ತಿರುವ ಕೆಎಂಸಿ ಚುನಾವಣೆಯ ವೇಳೆ ಕೋಲ್ಕತಾದ ಸೀಲ್ದಾಹ್ ಪ್ರದೇಶದಲ್ಲಿ ಬಾಂಬ್ ಸ್ಫೋಟಗೊಂಡು ಮೂವರು ಮತದಾರರು ಗಾಯಗೊಂಡಿದ್ದು, ಆ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 7. ಲೆಟ್ಸ್ ಬ್ರೇಕಪ್ ಎಂದ ರಚನಾ ಇಂದರ್ ಶ್ರೀ ಹಾಗೂ ಲವ್‌ ಮಾಕ್ಟೇಲ್ ಮೂಲಕ ಜನಪ್ರಿಯರಾಗಿರುವ ರಚನಾ ಇಂದರ್‌ ನಾಯಕ- ನಾಯಕಿಯಾಗಿ ಅಭಿನಯಿಸುತ್ತಿರುವ ಲೆಟ್ಸ್‌ ಬ್ರೇಕಪ್‌ ಚಿತ್ರದ ಮುಹೂರ್ತ ಇತ್ತೀಚೆಗೆ ಶ್ರೀ ಅಂಗಾಳ ಪರಮೇಶ್ವರಿ ಸನ್ನಿಧಿಯಲ್ಲಿ ನೆರವೇರಿತು. ಜನವರಿ ಒಂದರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸ್ವರೂಪ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಸ್ವರೂಪ್‌ ಅವರದ್ದೇ ಆಗಿದೆ. 8. BWFವರ್ಲ್ಡ್ ಚಾಂಪಿಯನ್‌ ಶಿಪ್‌: ಲಕ್ಷ್ಯ ಸೇನ್ ವಿರುದ್ಧ ಗೆದ್ದ ಕಿಡಂಬಿ ಶ್ರೀಕಾಂತ್ ಫೈನಲ್ ಗೆ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರು ಭಾರತೀಯರಾದ ಕಿಡಂಬಿ ಶ್ರೀಕಾಂತ್‌ ಮತ್ತು ಲಕ್ಷ್ಯ ಸೇನ್ ನಡುವೆ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ವಿಜಯ ಸಾಧಿಸಿ ಫೈನಲ್ ಪ್ರವೇಶಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next