Advertisement

18 ವರ್ಷದ ಹೆಣ್ಣು ಪ್ರಧಾನಿಯನ್ನು ಆಯ್ಕೆ ಮಾಡಬಹುದು ಎಂದಾದರೆ ಬಾಳಸಂಗಾತಿ ಆಯ್ಕೆ ಯಾಕಿಲ್ಲ?

05:29 PM Dec 18, 2021 | Team Udayavani |
1. ಪುಂಡರನ್ನು ಮಟ್ಟಹಾಕಲು ಕಠಿಣ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಶುಕ್ರವಾರ ತಡರಾತ್ರಿ ನಡೆದ ಪುಂಡಾಟಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಪುಂಡರನ್ನು ಮಟ್ಟಹಾಕಲು ಕಠಿಣ ಕ್ರಮಕ್ಜೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 2. ಶಿವಸೇನೆ ಒಂದು ಭಾಷೆಗೆ ಸೀಮಿತ ಆಗಿರುವುದು ದುರ್ದೈವ :ಯತ್ನಾಳ್ ಕಿಡಿ ಹಿಂದುತ್ವ ಹಾಗೂ ರಾಷ್ಟ್ರೀಯ ಕಲ್ಪನೆಯ ಶಿವಸೇನೆ ಇದೀಗ ಒಂದು ಭಾಷೆಗೆ ಸೀಮಿತ ಆಗಿರುವುದು ದುರ್ದೈವ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದವರಿಗೆ ಕ್ಷಮೆ ಇಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶನಿವಾರ ಕಿಡಿ ಕಾರಿದ್ದಾರೆ. 3. ಪಂಜಾಬ್ ಗಡಿಯಲ್ಲಿ ಚೀನಾ ನಿರ್ಮಿತ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್ ಪಂಜಾಬ್‌ನ ಭಾರತ-ಪಾಕಿಸ್ಥಾನ ಗಡಿಯಲ್ಲಿ ಬಿಎಸ್‌ಎಫ್ ಡ್ರೋನ್ ಒಂದನ್ನು ಹೊಡೆದುರುಳಿಸಿದೆ ಎಂದು ಸೇನಾ ಮೂಲಗಳು ಶನಿವಾರ ತಿಳಿಸಿವೆ. ಚೀನಾ ನಿರ್ಮಿತ ಡ್ರೋನ್ ಅನ್ನು ಶುಕ್ರವಾರ ರಾತ್ರಿ 11:10 ರ ಸುಮಾರಿಗೆ ಫಿರೋಜ್‌ಪುರ ಸೆಕ್ಟರ್‌ನ ವಾನ್ ಗಡಿ ಪೋಸ್ಟ್ ಬಳಿ ಹೊಡೆದುರುಳಿಸಲಾಯಿತು. 4. ವಿದೇಶದಲ್ಲಿ ನೆಗೆಟಿವ್‌,ರಾಜ್ಯದಲ್ಲಿ ಪಾಸಿಟಿವ್‌ ಕೊರೊನಾ ರೂಪಾಂತರಿ ಒಮಿಕ್ರಾನ್‌ ಪ್ರಕರಣಗಳು ಒಂದೊಂದಾಗಿ ಪತ್ತೆಯಾಗುತ್ತಿವೆ. ಆದರೆ ಅದರ ಮೂಲ ಮಾತ್ರ ಇನ್ನೂ ನಿಗೂಢವಾಗಿದೆ! ಅಂತಾರಾಷ್ಟ್ರೀಯ ಪ್ರಯಾಣಿಕರು ಆಯಾ ನಿಲ್ದಾಣಗಳಿಂದ ವಿಮಾನ ಏರುವಾಗ ನೆಗೆಟಿವ್‌ ಆಗಿರುತ್ತಾರೆ. ರಾಜ್ಯಕ್ಕೆ ಬಂದಿಳಿದಾಗ ಪಾಸಿಟಿವ್‌ಆಗಿ ಮಾರ್ಪಾಡುತ್ತಿದ್ದಾರೆ. ಹಾಗಿದ್ದರೆ ಈಸೋಂಕಿನ ಮೂಲ ಯಾವುದು ಎಂಬ ಜಿಜ್ಞಾಸೆ ಎಲ್ಲರನ್ನೂ ಕಾಡತೊಡಗಿದೆ. ರಾಜ್ಯದಲ್ಲಿ ಪತ್ತೆಯಾದ 8 ಒಮಿಕ್ರಾನ್‌ ಪ್ರಕರಣದಲ್ಲಿ 5 ವಿದೇಶಿ ಪ್ರಯಾಣದ ಹಿನ್ನೆಲೆ ಇರುವವರಿಗೆ ಸೋಂಕು ದೃಢಪಟ್ಟಿದೆ. 5. ಚುನಾವಣೆ ಬಂದಾಗ ಮಾತ್ರ ಇ.ಡಿ, ಆದಾಯ ತೆರಿಗೆ ಇಲಾಖೆಯಿಂದ ದಾಳಿ, ನಾವೂ ಹೆದರಲ್ಲ: ಅಖಿಲೇಶ್ ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಸವಾಲೊಡ್ಡಲು ಸಮಾಜವಾದಿ ಪಕ್ಷ ಸಿದ್ಧತೆ ನಡೆಸುತ್ತಿರುವ ನಡುವೆಯೇ ಶನಿವಾರ ಬೆಳಗ್ಗೆ ಅಖಿಲೇಶ್ ಯಾದವ್ ನಿಕಟವರ್ತಿಗಳು ಹಾಗೂ ಸಮಾಜವಾದಿ ಪಕ್ಷದ ಮುಖಂಡ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ದಾಳಿ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 6. 18 ವರ್ಷದ ಹೆಣ್ಣು ಪ್ರಧಾನಿಯನ್ನು ಆಯ್ಕೆ ಮಾಡಬಹುದು, ಬಾಳಸಂಗಾತಿ ಆಯ್ಕೆ ಯಾಕಿಲ್ಲ? ಒವೈಸಿ ಒಂದು ವೇಳೆ 18 ವರ್ಷದ ಯುವತಿ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಹಕ್ಕು ಇದೆ ಎಂದಾದ ಮೇಲೆ, ಆಕೆ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ತಕರಾರು ಯಾಕೆ…ಇದು ಆಲ್ ಇಂಡಿಯಾ ಮಜ್ಲೀಸ್ ಎ ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಎಂ) ಸಂಸದ ಅಸಾದುದ್ದೀನ್ ಒವೈಸಿ ಕೇಂದ್ರ ಸರ್ಕಾರಕ್ಕೆ ಈ ರೀತಿ ತಿರುಗೇಟು ನೀಡಿದ್ದಾರೆ. 7. ಸಂಗೊಳ್ಳಿ ರಾಯಣ್ಣಗೆ ಅಪಮಾನ: ಕಠಿಣ ಶಿಕ್ಷೆಗೆ ನಟ ದರ್ಶನ್ ಆಗ್ರಹ ಬೆಳಗಾವಿಯಲ್ಲಿ ಸ್ವಾತಂತ್ರ್ಯ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಗೌರವ ತೋರಿಸಿರುವುದನ್ನು ನಟ ದರ್ಶನ್ ಖಂಡಿಸಿದ್ದು, ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. 8. ಭಾರತ ಕ್ರಿಕೆಟ್‌ ನಲ್ಲಿ ತೆಂಡುಲ್ಕರ್‌ ಗೆ ಮುಖ್ಯ ಸ್ಥಾನ?: ಗಂಗೂಲಿ ಸುಳಿವು ಕ್ರಿಕೆಟ್‌ ಜಗತ್ತಿನಲ್ಲಿ ದೇವರು ಎಂದೇ ಕರೆಸಿಕೊಂಡಿರುವ ಸಚಿನ್‌ ತೆಂಡುಲ್ಕರ್‌ ತಮ್ಮ ನಿವೃತ್ತಿಯ ನಂತರ ಬಿಸಿಸಿಐ ವ್ಯಾಪ್ತಿಯಲ್ಲಿ ಯಾವುದೇ ಜವಾಬ್ದಾರಿ ಹೊಂದಿಲ್ಲ. ಅರ್ಥಾತ್‌ ಅವರು ಭಾರತ ಕ್ರಿಕೆಟ್‌ ಬೆಳವಣಿಗೆಯಲ್ಲಿ ಸದ್ಯದ ಮಟ್ಟಿಗೆ ಯಾವುದೇ ಸಕ್ರಿಯ ಪಾತ್ರ ಹೊಂದಿಲ್ಲ. ಇದೀಗ ಅವರು ಮಹತ್ವದ ಸ್ಥಾನವೊಂದನ್ನು ಪಡೆಯುವ ಸಾಧ್ಯತೆಯಿದೆ. ಇದನ್ನು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಯೇ ಖಚಿತಪಡಿಸಿದ್ದಾರೆ.  
Advertisement

Udayavani is now on Telegram. Click here to join our channel and stay updated with the latest news.

Next