Advertisement

ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿ ಸೌರವ್ ಗಂಗೂಲಿ ನೇಮಕ

06:58 PM Nov 17, 2021 | Team Udayavani |
ಗುಜರಾತ್ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟ: ಯತ್ನಾಳ್‌ ಬಿಟ್ ಕಾಯಿನ್ ಬಗ್ಗೆ ಮುಖ್ಯಮಂತ್ರಿ ಬದಲಾಗುವುದಿಲ್ಲ ಅನಿಸುತ್ತಿದೆ,‌ ಆದರೆ ಗುಜರಾತ್ ಮಾದರಿಯಲ್ಲಿ ರಾಜ್ಯ ಸಂಪುಟ ಪುನಾರಚನೆಯಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಸುಳಿವು ನೀಡಿದರು. ‌  ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ‘ನಮ್ಮ ಮೆಟ್ರೋ’ ನಗರದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ನವೆಂಬರ್ 18ರಿಂದ ಈ ಆದೇಶ ಜಾರಿಗೆ ಬರಲಿದೆ. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 6 ರಿಂದ ರಾತ್ರಿ 11 ಗಂಟೆಯ ವರೆಗೆ ಮೆಟ್ರೋ ಸಂಚಾರ ಇರಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಹೌದು ಹುಲಿಯಾ ತಂಡ ತಯಾರು ಮಾಡಿ: ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್ ‘ಮಾನ್ಯ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ “ಡಿಕೆ ಡಿಕೆ” ಎಂಬ ಘೋಷಣೆ ಸದ್ದು ಮಾಡುತ್ತಿದೆ.”ಹೌದು ಹುಲಿಯಾ” ಎಂದು ಬೊಬ್ಬೆ ಹಾಕುವುದಕ್ಕೆ ನೀವೂ ಒಂದು ತಂಡ ತಯಾರು ಮಾಡಿ ಎಂದು ಬಿಜೆಪಿ ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ಟಾಂಗ್ ನೀಡಿದೆ. ಲಖಿಂಪುರ್ ಖೇರಿ ಪ್ರಕರಣ ಉತ್ತರಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಿದೆ. ನವೆಂಬರ್ 17ರಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರನ್ನು ತನಿಕೆಯ ಮೇಲ್ವಿಚಾರಣೆಗಾಗಿ ನೇಮಕ ಮಾಡಿದೆ. ದೇಗುಲ ಪೂಜೆ ವಿಚಾರದಲ್ಲಿ ಮಧ್ಯಪ್ರವೇಶವಿಲ್ಲ: ಸುಪ್ರೀಂಕೋರ್ಟ್ ದೇಗುಲಗಳಲ್ಲಿ ಪೂಜೆ ಹೇಗೆ ಮಾಡಬೇಕು, ತೆಂಗಿನಕಾಯಿ ಹೇಗೆ ಒಡೆಯಬೇಕು, ಹೇಗೆ ಆರತಿ ಮಾಡಬೇಕು ಎಂಬ ವಿಚಾರದಲ್ಲಿ ಕೋರ್ಟ್‌ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೈ ಕೋರ್ಟ್‌ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರನ್ನು ಒಳಗೊಂಡ ನ್ಯಾಯಪೀಠ ಮಂಗಳವಾರ ವಿಶೇಷ ತೀರ್ಪು ನೀಡಿದೆ. ಕಂಗನಾ ಟೀಕೆಗೆ ನೇತಾಜಿ ಪುತ್ರಿ ಹೇಳಿದ್ದೇನು? ನಟಿ ಕಂಗನಾ ರಣಾವತ್ ಹೇಳಿಕೆ ಕುರಿತು ನೇತಾಜಿ ಪತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಗಾಂಧಿ ಮತ್ತು ನೇತಾಜಿ ಅವರ ನಡುವೆ ಕ್ಲಿಷ್ಟಕರವಾದ ಸಂಬಂಧ ಇತ್ತು. ಆದರೆ, ಸುಭಾಶ್ಚಂದ್ರ ಬೋಸ್ ಮಹಾತ್ಮ ಗಾಂಧಿಯವರ ದೊಡ್ಡ ಅಭಿಮಾನಿಯಾಗಿದ್ದರು ಎಂದು ಅನಿತಾ ಬೋಸ್ ತಿಳಿಸಿದ್ದಾರೆ. ನನ್ನನ್ನು ಕಳಿಸಿಕೊಟ್ಟು ಅವನನ್ನು ವಾಪಸ್‌ ಕರೆಸಿಕೊಳ್ಳಿ : ರಾಘಣ್ಣ ಪುನೀತ್ ನಮನ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಕಣ್ಣೀರಾದರು. ಪುನೀತ್‌ ಅವರನ್ನ ಹೂತಿಲ್ಲ. ಅವನನ್ನು ಬಿತ್ತಿದ್ದೀವೆ ಎಂದರು. ನೀವೆಲ್ಲರೂ ಸೇರಿ ನನಗೊಂದು ಸಹಾಯ ಮಾಡಿ. ನನ್ನನ್ನು ಕಳಿಸಿಕೊಟ್ಟು ಅವನನ್ನು ವಾಪಸ್‌ ಕರೆಸಿಕೊಳ್ಳಿ ಭಾವುಕರಾಗಿ ನುಡಿದರು. ಅನಿಲ್ ಕುಂಬ್ಳೆ ಸ್ಥಾನಕ್ಕೆ ಸೌರವ್ ಗಂಗೂಲಿ ನೇಮಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಮಾಹಿತಿಯನ್ನು ಐಸಿಸಿ ಆಡಳಿತ ಮಂಡಳಿ ಬುಧವಾರ ತಿಳಿಸಿದೆ. ಭಾರತೀಯ ಅನಿಲ್ ಕುಂಬ್ಳೆ ಅವರ ಸ್ಥಾನವನ್ನು ಸೌರವ್ ಗಂಗೂಲಿ ತುಂಬಲಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next