Advertisement

ಮಣಿಪುರ: ಉಗ್ರರ ಹೊಂಚುದಾಳಿಗೆ ಸೇನೆಯ ಕರ್ನಲ್, ಪತ್ನಿ, ಮಗ ಸೇರಿ ಏಳು ಮಂದಿ ಹುತಾತ್ಮ

05:59 PM Nov 13, 2021 | Team Udayavani |
ಮಣಿಪುರ : ಉಗ್ರರ ಹೊಂಚುದಾಳಿಗೆ ಏಳು ಮಂದಿ ಹುತಾತ್ಮ ಗುವಾಹಟಿ: ಮಣಿಪುರದ ಮ್ಯಾನ್ಮಾರ್ ಗಡಿಯಲ್ಲಿ ಭಯೋತ್ಪಾದಕರು ನಡೆಸಿದ ಹೊಂಚುದಾಳಿಯಲ್ಲಿ ಭಾರತೀಯ ಸೇನೆಯ ಕರ್ನಲ್, ಅವರ ಪತ್ನಿ, ಪುತ್ರ ಹಾಗೂ ನಾಲ್ವರು ಯೋಧರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಮತಾಂತರ ನಿಷೇಧ ಕಾಯಿದೆ ಜಾರಿಗೆ ಮುತಾಲಿಕ್‌ ಆಗ್ರಹ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ವಿವಿಧ ಮಠಗಳ ಸ್ವಾಮೀಜಿಗಳು ಆಗ್ರಹಿಸಿದ್ದಾರೆ. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌  ಮುತಾಲಿಕ್‌ ಮತ್ತು ಸ್ವಾಮೀಜಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ ರಾಜ್ಯದ ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳ ಚುನಾವಣೆಗೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಒಟ್ಟು 98,846 ಮತದಾರರನ್ನು ಗುರುತಿಸಲಾಗಿದೆ. ಇದಕ್ಕಾಗಿ 6,073 ಮತಗಟ್ಟೆಗಳನ್ನು ಸ್ಥಾಪಿಸಲು‌ ಉದ್ದೇಶಿಸಲಾಗಿದೆ. ಸಿದ್ದರಾಮಯ್ಯ ಮಾತಿಗೆ ಡಿಕೆಶಿ ಉತ್ತರಿಸಬೇಕು : ಹೆಬ್ಬಾರ್ ಬಿಟ್ ಕಾಯಿನ್ ಕುರಿತು ಅನಗತ್ಯವಾಗಿ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಏನೇನು‌ ಮಾತನಾಡುತ್ತಾರೆ ಎಂಬುದನ್ನು ಅವರ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಉತ್ತರಿಸಬೇಕು ಎಂದು ಕಾರ್ಮಿಕ  ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ನಾನು ಪದ್ಮಶ್ರೀ ವಾಪಾಸ್ ನೀಡುತ್ತೇನೆ !: ಕಂಗನಾ ಸವಾಲು ಸ್ವಾತಂತ್ರ್ಯದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಂಗನಾ ಇನ್ನೊಂದು ಸವಾಲು ಮುಂದಿಟ್ಟಿದ್ದಾರೆ. ”1947 ರಲ್ಲಿ ಯಾವ ಯುದ್ಧ ನಡೆಯಿತು ಎನ್ನುವುದನ್ನು ನನಗೆ ವಿವರಿಸಿ ನನಗೆ ಅರಿವು ಮೂಡಿಸಿದಲ್ಲಿ, ನಾನು ಪದ್ಮಶ್ರೀ  ವಾಪಾಸ್ ನೀಡುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ. ಎರಡು ದಿನಗಳ ಕಾಲ ದೆಹಲಿ ಲಾಕ್ ಡೌನ್? ವಾಯುಮಾಲಿನ್ಯಕ್ಕೆ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಶನಿವಾರ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ವಾಯುಗುಣ ತೀರಾ ಹದಗೆಟ್ಟ ಪರಿಣಾಮ ಎರಡು ದಿನಗಳ ಕಾಲ ರಾಷ್ಟ್ರಧಾನಿ ದೆಹಲಿಯನ್ನು ಲಾಕ್ ಡೌನ್ ಮಾಡುವಂತೆ ಸಲಹೆ ನೀಡಿದೆ. ಕಾಂಡೋಮ್ಹಿಡಿದು ಬಂದ ಛತ್ರಿವಾಲಿ ನಟಿ ರಾಕುಲ್ ಪ್ರೀತ್ ಸಿಂಗ್ ಬಾಲಿವುಡ್ ನ ಬಹುಬೇಡಿಕೆಯ ನಟಿ ರಾಕುಲ್ ಪ್ರೀತ್ ಸಿಂಗ್ ಈಗಾಗಲೇ ಹಲವಾರು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಹೌದು ತಮ್ಮ ಮುಂಬರುವ ಸಿನಿಮಾದ ಫಸ್ಟ್ ಲುಕ್ ನಲ್ಲಿ “ಕಾಂಡೋಮ್” ಹಿಡಿದುಕೊಂಡು ಬರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ರೋಹಿತ್ ವಿಶ್ವದಾಖಲೆಯ ಆಟಕ್ಕೆ ಇಂದಿಗೆ 7ವರ್ಷ ನವೆಂಬರ್ 13, 2014. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯಲಾಗದ ದಿನ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ ಮೈದಾನ ಅಂದು ಐತಿಹಾಸಿಕ ಏಕದಿನ ಇನ್ನಿಂಗ್ಸ್ ಒಂದಕ್ಕೆ ಸಾಕ್ಷಿಯಾಗಿತ್ತು. ಯಾಕೆಂದರೆ ಅಂದು ರೋಹಿತ್ ಶರ್ಮಾ ಒಬ್ಬರೇ ಬಾರಿಸಿದ್ದು ಬರೋಬ್ಬರಿ 264 ರನ್ ಗಳು! ಈ ಪಂದ್ಯ ನಡೆದು ಇಂದಿಗೆ ಏಳು ವರ್ಷಗಳಾಗಿವೆ.
Advertisement

Udayavani is now on Telegram. Click here to join our channel and stay updated with the latest news.

Next