Advertisement

ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಈಗ ಅಸ್ಸಾಂನ DSP

05:41 PM Jan 13, 2022 | Team Udayavani |
1. ಐದನೇ ದಿನಕ್ಕೆ ಮೇಕೆದಾಟು ಪಾದಯಾತ್ರೆ ಸ್ಥಗಿತ: ಕೈ ನಾಯಕರ ಮಹತ್ವದ ನಿರ್ಧಾರ ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ನಾಯಕರು ನಡೆಸುತ್ತಿರುವ “ನಮ್ಮ ನೀರು ನಮ್ಮ ಹಕ್ಕು” ಪಾದಯಾತ್ರೆಯನ್ನು ತಕ್ಷಣ ನಿಲ್ಲಿಸಿ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಭೆ ಸೇರಿದ ಕೈ ನಾಯಕರು ಪಾದಯಾತ್ರೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ 11 ದಿನಗಳ ಕಾಲ ನಡೆಯಬೇಕಿದ್ದ ಮೇಕೆದಾಟು ಪಾದಯಾತ್ರೆ ಐದೇ ದಿನಕ್ಕೆ ಮೊಟಕುಗೊಂಡಿದೆ. 2. 3ನೇ ಅಲೆ ಎರಡೇ ದಿನಕ್ಕೆ ಡಬಲ್ ಆಗುತ್ತಿದೆ : ಡಾ. ಸುಧಾಕರ್ ಎಚ್ಚರಿಕೆ ಕೋವಿಡ್ ಮೊದಲನೆ ಅಲೆಯಲ್ಲಿ ಡಬ್ಲಿಂಗ್ ರೇಟ್ 10-12 ದಿನಕ್ಕೆ ಆಗುತ್ತಿತ್ತು, ಎರಡನೇ ಅಲೆಯಲ್ಲಿ 8 ದಿನಕ್ಕೆ ಆದರೆ 3 ನೇ ಅಲೆಯಲ್ಲಿ ಎರಡು ದಿನದಲ್ಲಿ ಡಬಲ್ ಆಗುತ್ತಿದೆ. ಡಿಸೆಂಬರ್ 28 ರಿಂದ ಜನವರಿ 11 ರ ವರೆಗೆ ವೇಗವಾಗಿ ಹೆಚ್ಚಳವಾಗಿದೆ. ಸಕ್ರೀಯ ಪ್ರಕರಣಗಳು ಶೇ 75% ರಷ್ಟು ಬೆಂಗಳೂರಿನಲ್ಲಿದೆ. ಬಹಳ ವೇಗವಾಗಿ ಹರಡುವ ರೋಗ ಎಂದು ಡಬ್ಲೂ ಎಚ್ ಒ ಹೇಳಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಗುರುವಾರ ಹೇಳಿದ್ದಾರೆ. 3. ಕಾಂಗ್ರೆಸ್ ನವರು ತಮ್ಮ ತಪ್ಪಿನ ಅರಿವಾಗಿ ಪಾದಯಾತ್ರೆ ಕೈಬಿಟ್ಟಿದ್ದಾರೆ: ಸಚಿವ ಅಶ್ವತ್ಥನಾರಯಣ್ ತಮ್ಮ ತಪ್ಪಿನ ಅರಿವಾಗಿ ಕಾಂಗ್ರೆಸ್ ನಾಯಕರು ಇಂದು ಮೇಕೆದಾಟು ಪಾದಯಾತ್ರೆ ಕೈಬಿಟ್ಟಿದ್ದಾರೆ. ಅವರು ಸೂಕ್ತವಾದ ನಿರ್ಣಯ ತೆಗೆದುಕೊಂಡಿದ್ದಾರೆ. ಸರಕಾರದ ಕ್ರಮದ ಬಗ್ಗೆ ಕೋರ್ಟ್ ಸ್ಪಷ್ಟನೆ ಕೇಳಿದೆ. ನಾವು ಪಾದಯಾತ್ರೆಗೆ ಯಾವುದೇ ಅನುಮತಿ ನೀಡಿರಲಿಲ್ಲ ಎಂದು ಸಚಿವ ಅಶ್ವಥ ನಾರಾಯಣ ಹೇಳಿದರು. 4. ಉತ್ತರಪ್ರದೇಶ;ಮುಂದುವರಿದ ಬಿಜೆಪಿ ಶಾಸಕರ ರಾಜೀನಾಮೆ ಪರ್ವ; 3 ದಿನದಲ್ಲಿ 7 ಶಾಸಕರ ರಾಜೀನಾಮೆ ಉತ್ತರಪ್ರದೇಶದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡುವವರ ಸಂಖ್ಯೆ ಮುಂದುವರಿದಿದ್ದು, ಗುರುವಾರ ಶಾಸಕ ಮುಖೇಶ್ ವರ್ಮಾ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಬಿಜೆಪಿಗೆ ಏಳು ಶಾಸಕರು ರಾಜೀನಾಮೆ ನೀಡಿದಂತಾಗಿದೆ. 5. ಭಾರತ;24ಗಂಟೆಯಲ್ಲಿ 2,47,417 ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 5,488ಕ್ಕೆ ಏರಿಕೆ ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2,47,417 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 380 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 4,85,035ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ. 6. ವೇಸ್ಟ್ ಮಿನಿಸ್ಟರನ್ನು ಕಾಂಗ್ರೆಸ್ ಯಾಕೆ ಸೇರಿಸಿಕೊಂಡಿತು: ಆಪ್ ನಾಯಕ ವಾಲ್ಮೀಕಿ ಪ್ರಶ್ನೆ ಕಲಂಗುಟ್ ಮಾಜಿ ಶಾಸಕ ಮೈಕಲ್ ಲೋಬೊ ಅವರನ್ನು ಅಸಮರ್ಥ ಎಂದು ಪರಿಗಣಿಸಿದ್ದ ಕಾಂಗ್ರೆಸ್ ಈಗ ಸಮರ್ಥ ಎಂದು ಭಾವಿಸಿದೆ. ವೇಸ್ಟ್ ಮಿನಿಸ್ಟರ್ ಎಂದು ಕಾಂಗ್ರೆಸ್ ಪಕ್ಷವು ಈ ಹಿಂದೆ ಮೈಕಲ್ ಲೋಬೊ ರವರನ್ನು ಟೀಕಿಸಿತ್ತು. ಆದರೆ ಇಂದು ಯಾವ ಮಾನದಂಡದ ಮೇಲೆ ವೇಸ್ಟ್ ಮಿನಿಸ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ವಾಲ್ಮಿಕಿ ನಾಯ್ಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. 7. ಪುಷ್ಪ 2 ಇನ್ನಷ್ಟು ಉತ್ತಮ ಮತ್ತು ದೊಡ್ಡದಾಗಿದೆ: ರಶ್ಮಿಕಾ ಮಂದಣ್ಣ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ತೆಲುಗು ಚಿತ್ರ “ಪುಷ್ಪ” ಚಿತ್ರದ ಎರಡನೇ ಅಧ್ಯಾಯವು ಅದರ ಮೊದಲ ಭಾಗಕ್ಕಿಂತ “ಉತ್ತಮ ಮತ್ತು ದೊಡ್ಡದಾಗಿದೆ” ಎಂದು ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. 8. ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಈಗ ಅಸ್ಸಾಂನ DSP ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್‌ ಲವ್ಲಿನಾ ಬೋರ್ಗ ಹೈನ್‌ ಅಸ್ಸಾಂ ಡಿಎಸ್‌ ಪಿ ಆಗಿ ನೇಮಕಗೊಂಡಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ನೇಮಕ ಪತ್ರವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಲವ್ಲಿನಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ದೇಶದ ಜತೆಗೆ ಅಸ್ಸಾಂ ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next