Advertisement

ನನಗೀಗ ಮೂವರು ಹೆಣ್ಣುಮಕ್ಕಳು : ರಾಘವೇಂದ್ರ ರಾಜ್‌ಕುಮಾರ್ ಭಾವುಕ ನುಡಿ

06:01 PM Dec 12, 2021 | Team Udayavani |
1. ರಾಜ್ಯದಲ್ಲಿ ಒಮಿಕ್ರಾನ್ ಮೂರನೇ ಪ್ರಕರಣ ಪತ್ತೆ ಕರ್ನಾಟಕದಲ್ಲಿ ಮೂರನೇ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ 34 ವರ್ಷದ ವ್ಯಕ್ತಿಯ ಪರೀಕ್ಷಾ ವರದಿ ಪಾಸಿಟಿವ್ ಆಗಿದೆ. ಈ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಸುಧಾಕರ್ ಭಾನುವಾರ ಟ್ವೀಟ್ ಮಾಡಿ ತಿಳಿಸಿದ್ದಾರೆ. 2. ಮಠಾಧೀಶರಿಗೆ ಬಾಲಕಿಯ ಖಡಕ್ ವಾರ್ನಿಂಗ್..! ಮೊಟ್ಟೆ ವಿವಾದ ಈಗ ವಿಶೇಷ ತಿರುವು ಪಡೆದಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ರಾಜಕೀಯ ಮಾಡಬೇಡಿ. ಮೊಟ್ಟೆ ಕೊಡಬೇಡಿ ಎಂದು ಹೇಳಿದರೆ ನಾವು ನಿಮ್ಮ ಮಠಕ್ಕೆ ಬಂದು ಕುಳಿತು ಮೊಟ್ಟೆ ತಿಂತೀವಿ ಎಂದು ಗಂಗಾವತಿಯ ಶಾಲಾ ವಿದ್ಯಾರ್ಥಿನಿಯೊಬ್ಬಳು ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 3. ಮತಾಂತರ ತಡೆ ಕಾನೂನು ತರುವ ಪ್ರಯತ್ನ ಸರ್ಕಾರ ಮಾಡುತ್ತಿದೆ: ಸಿಎಂ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮತಾಂತರ ಕಾಯ್ದೆಯ ಬಗ್ಗೆ ಮಾಧ್ಯಮಗಳಿಗೆ ಸುಳಿವು ನೀಡಿದ್ದಾರೆ. ಆಸೆ ಆಮೀಷವೊಡ್ಡಿ ಮತಾಂತರ ಮಾಡೋದಕ್ಕೆಅವಕಾಶವಿಲ್ಲ. ಹಾಗಾಗಿ ಇದನ್ನು ತಡೆಯಲು ಕಾನೂನು ತರುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಸಿಎಂ ತಿಳಿಸಿದರು. 4. ಭಾರತ ಹಿಂದೂಗಳ ದೇಶ, ಹಿಂದುತ್ವವಾದಿಗಳದ್ದಲ್ಲ: ರಾಹುಲ್ ಗಾಂಧಿ ಏರುತ್ತಿರುವ ಹಣದುಬ್ಬರದ ವಿರುದ್ಧದ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಭಾರತವು ಹಿಂದೂಗಳ ದೇಶವೇ ಹೊರತು, ಯಾವುದೇ ಪರಿಸ್ಥಿತಿಯಲ್ಲೂ ಅಧಿಕಾರದಲ್ಲಿರಲು ಬಯಸುವ ಹಿಂದುತ್ವವಾದಿಗಳದ್ದಲ್ಲ ಎಂದು ಅವರು ತಿಳಿಸಿದರು. 5. ಮೋದಿ ಟ್ವಿಟರ್ ಹ್ಯಾಕ್ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಶನಿವಾರ ರಾತ್ರಿ ಹ್ಯಾಕ್ ಮಾಡಲಾಗಿದ್ದು, ಪ್ರಧಾನಿ ಖಾತೆಯಿಂದ ಹ್ಯಾಕರ್‌ಗಳು ಬಿಟ್ ಕಾಯಿನ್ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಕೂಡಲೇ ಟ್ವಿಟರ್ ಸಂಸ್ಥೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಪ್ರಧಾನಿ ಮೋದಿ ಟ್ವಿಟರ್ ನಿಂದ, ಮಾಡಲಾಗಿದ್ದ ನಕಲಿ ಪೋಸ್ಟ್ ಡಿಲೀಟ್ ಮಾಡಲಾಗಿದೆ. 6. ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾದ ತೇಜಸ್ವಿ ಯಾದವ್ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಅವರು ತರಾತುರಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ತೇಜಸ್ವಿ ಯಾದವ್ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿರುವುದನ್ನು ಹಲವು ಸಂಬಂಧಿಕರು ವಿರೋಧಿಸಿದ್ದಾರೆ. 7. ನನಗೀಗ ಮೂವರು ಹೆಣ್ಣುಮಕ್ಕಳು – ರಾಘವೇಂದ್ರ ರಾಜ್‌ಕುಮಾರ್ “ರಾಜಿ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಭಾವುಕರಾದರು. “ನನಗೀಗ ಮೂವರು ಹೆಣ್ಣು ಮಕ್ಕಳು. ಮೂವರು ಯಾರೆಂದರೆ, ನನ್ನ ತಮ್ಮನ ಹೆಂಡತಿ ಅಶ್ವಿ‌ನಿ, ಅವರ ಮಕ್ಕಳಾದ ಧೃತಿ ಹಾಗೂ ವಂದಿತಾ ಎಂದು ಗದ್ಗದಿತರಾದರು. 8. ಅರ್ಜುನ್‌ ಲಾಲ್‌-ರವಿ ಜೋಡಿಗೆ ಏಶ್ಯನ್‌ ರೋಯಿಂಗ್‌ ಬಂಗಾರ ಭಾರತದ ಅರ್ಜುನ್‌ ಲಾಲ್‌ ಜಾಟ್‌ ಮತ್ತು ರವಿ ಜೋಡಿ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಏಶ್ಯನ್‌ ರೋಯಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಬಂಗಾರದ ಪದಕ ಜಯಿಸಿದ್ದಾರೆ. ಪುರುಷರ ಸಿಂಗಲ್ಸ್‌ ಸ್ಕಲ್ಸ್‌ನಲ್ಲಿ ಪರ್ಮಿಂದರ್‌ ಸಿಂಗ್‌ ಬೆಳ್ಳಿ ಪದಕ ಗೆದ್ದಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next