Advertisement

ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು : ಕಂಗನಾ

07:57 PM Nov 11, 2021 | Team Udayavani |
ಪಿಎಂ ಭೇಟಿ ಬಳಿಕ ಸಿಎಂ ಪ್ರತಿಕ್ರಿಯೆ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಧಾನಿ ಅವರು ಬಿಟ್ ಕಾಯಿನ್ ಬಗ್ಗೆ ಪ್ರಸ್ತಾವವನ್ನೇ ಮಾಡಲಿಲ್ಲ ಎಂದರು. ನಾನೇ ಏನಾದರೂ ಹೇಳಲು ಹೋದಾಗ, ಆ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ ಎಂಬ ಸಲಹೆ ನೀಡಿದರು ಎಂದು ಸಿಎಂ ತಿಳಿಸಿದರು. ವಿರೋಧಕ್ಕೆ ನಿರ್ಲಕ್ಷ್ಯ ; ಎನ್‌ಇಪಿ ಖಚಿತ ಬೆಂಗಳೂರಿನಲ್ಲಿ ನಡೆದ “ರಾಷ್ಟ್ರೀಯ ಶಿಕ್ಷಣ ನೀತಿ-2020′ ಕುರಿತ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾತನಾಡಿದರು. ವಿರೋಧಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ರಾಜ್ಯದಲ್ಲಿ ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿಯೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುವುದು ಎಂದರು. ಟಿಪ್ಪು ಸುಲ್ತಾನ್‌ ಜಾತ್ಯತೀತ ರಾಜ: ಸಿದ್ದರಾಮಯ್ಯ ಮಾಜಿ ಸಚಿವ ಜಮೀರ್‌ ಅಹಮದ್‌ ನೇತೃತ್ವದಲ್ಲಿ ತಮ್ಮ ನಿವಾಸಕ್ಕೆ ಮುಸ್ಲಿಂ ಮುಖಂಡರು ಆಗಮಿಸಿದ್ದ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು. ಟಿಪ್ಪು ಸುಲ್ತಾನ್‌ ಜಾತ್ಯತೀತ ರಾಜ ಮತ್ತು ಜನನಾಯಕ. ಮತಾಂಧತೆ ಕಾರಣದಿಂದ ಆರೆಸ್ಸೆಸ್‌ ಟಿಪ್ಪುವನ್ನು ವಿರೋಧಿಸುತ್ತದೆ ಎಂದರು. ನೂತನ ಶಾಸಕರ ಪ್ರಮಾಣ ವಚನ ಇತ್ತೀಚೆಗೆ ನಡೆದ ಸಿಂದಗಿ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಶಾಸಕ ರಮೇಶ್ ಭೂಸನೂರ್ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಭಾರೀ ಮಳೆಗೆ ತತ್ತರಿಸಿದ ಚೆನ್ನೈ. ತಮಿಳುನಾಡಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ತಗ್ಗುಪ್ರದೇಶ, ರಸ್ತೆಗಳೆಲ್ಲಾ ನೀರಿನಿಂದ ಆವೃತ್ತವಾಗಿದೆ. ಮತ್ತೊಂದೆಡೆ ಮತ್ತೆ ಭಾರೀ ಗಾಳಿ, ಮಳೆ ಸುರಿಯಲಿದೆ ಎಂಬ ಹವಾಮಾನ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ 6ಗಂಟೆವರೆಗೆ ವಿಮಾನಗಳ ಆಗಮನಕ್ಕೆ ನಿರ್ಬಂಧ ಘೋಷಿಸಲಾಗಿದೆ. ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು : ಕಂಗನಾ ನಟಿ ಕಂಗನಾ ರಣಾವತ್ ಹೇಳಿಕೆ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿ ಕಾರಿದ್ದಾರೆ. ‘ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು, 1947 ರಲ್ಲಿ ಸಿಕ್ಕಿದ್ದು ಭಿಕ್ಷೆ’ ಎಂದ ಕಂಗನಾರ ಇಂತಹ ಆಲೋಚನೆ ಹುಚ್ಚುತನವೇ ಅಥವಾ ದೇಶದ್ರೋಹವೇ ಎಂದು ವರುಣ್ ಪ್ರಶ್ನಿಸಿದ್ದಾರೆ. ನೆಟ್ಟಿಗರಿಂದ ಟ್ರೋಲ್ ಆದ ರಚಿತಾ ರಾಮ್ ಲವ್​ ಯೂ ರಚ್ಚು’ಸಿನಿಮಾ ಮತ್ತೆ ಮತ್ತೆ ಸುದಿಯಾಗುತ್ತಿದೆ. ಪ್ರೆಸ್ ಮೀಟ್ ವೇಳೆ ಪ್ರಶ್ನೆಯೊಂದಕ್ಕೆ ರಚಿತಾ ರಾಮ್ ಪ್ರತಿಕ್ರಿಯಿಸಿದ ವಿಡಿಯೋ ಕ್ಲಿಕ್ ಬಳಸಿಕೊಂಡು ಟ್ರೋಲಿಗರು ಬಗೆ ಬಗೆ ಟ್ರೋಲ್ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ. ಲಸಿಕೆ ಪಡೆದವರಿಗೆ ಟಿ20 ಪಂದ್ಯಕ್ಕೆ ಪ್ರವೇಶ ಒಂದು ಡೋಸ್‌ ಲಸಿಕೆ ಪಡೆದ ವೀಕ್ಷಕರಿಗೆ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮೊದಲ ಟಿ20 ಪಂದ್ಯಕ್ಕೆ ಸ್ಟೇಡಿಯಂ ಪ್ರವೇಶಿಸಲು ಅನುಮತಿ ನೀಡಲಾಗಿದೆ. ರಾಜಸ್ಥಾನ್‌ ಕ್ರಿಕೆಟ್‌ ಅಸೋಸಿಯೇಶನ್‌ (ಆರ್‌ಸಿಎ) ಕಾರ್ಯದರ್ಶಿ ಮಹೇಂದ್ರ ಶರ್ಮ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next