- ಬಿಟ್ ಕಾಯಿನ್ ವಿಚಾರದಲ್ಲಿ ಸೂಕ್ತ ಕ್ರಮ : ಈಶ್ವರಪ್ಪ
ಬಿಟ್ ಕಾಯಿನ್ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಕೊಪ್ಪಳದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಬಿಟ್ ಕಾಯಿನ್ ವಿಚಾರದಲ್ಲಿ ರಾಜ್ಯದಲ್ಲಿ ನಮ್ಮ ನಾಯಕರು, ಎಂಎಲ್‌ಎ, ಮಂತ್ರಿ ಸೇರಿ ಯಾರ ಮೇಲೆ ಆಪಾದನೆಯಿದ್ರೂ ಕೂಡ ಅವರ ದಾಖಲೆ ಕೊಡಿ, ತುರ್ತು ಕ್ರಮ ಕೈಗೊಳ್ಳುತ್ತೇವೆ ಎಂದರು..
- ಮರಿಯಾನೆಗೆ ‘ಪುನೀತ್’ ಎಂದು ಹೆಸರಿಟ್ಟ ಅರಣ್ಯ ಇಲಾಖೆ
ಸಕ್ರೆಬೈಲು ಆನೆ ಬಿಡಾರದಲ್ಲಿರುವ ಮರಿಯಾನೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಈ ಮೂಲಕ ಅರಣ್ಯ ಇಲಾಖೆ ನಟನಿಗೆ ವಿಶೇಷ ಗೌರವ ಸಲ್ಲಿಸಿದೆ.
- ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಜಿಟಿಡಿ
ಮೈಸೂರಿನ ಕೇರ್ಗಳ್ಳಿಯಲ್ಲಿ ಮಂಗಳವಾರ ನಡೆದ ಸಭಾಭವನದ ಉದ್ಘಾಟನಾ ಸಮಾರಂಭದಲ್ಲಿ ಜಿ.ಟಿ ದೇವೇಗೌಡ ಮಾತನಾಡಿದರು. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲಿ, ಗೆಲ್ಲಲಿ ಈ ಕ್ಷೇತ್ರದ ಮತದಾರರು ಅವರನ್ನು ಪ್ರೀತಿಸುತ್ತಾರೆ ಎಂದು ಜಿ.ಟಿ ದೇವೇಗೌಡ ಸಿದ್ದರಾಮಯ್ಯನವರನ್ನು ಹೊಗಳಿದರು.
- ಶ್ರೀನಗರಕ್ಕೆ ಸೃಜನಶೀಲ ನಗರ ಹೆಗ್ಗಳಿಕೆ
ವಿಶ್ವಸಂಸ್ಥೆಯ ಸೃಜನಶೀಲ ನಗರಗಳ ಪಟ್ಟಿಗೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರವನ್ನು ಆಯ್ಕೆ ಮಾಡಲಾಗಿದೆ. ಯುನೆಸ್ಕೋದ ಕ್ರಿಯೇಟಿವ್ ಸಿಟೀಸ್ ನೆಟ್‌ವರ್ಕ್ ವಿಭಾಗದಿಂದ ಘೋಷಣೆ ಮಾಡಲಾಗಿರುವುದು ಹೆಮ್ಮೆಯ ವಿಷಯವಾಗಿದೆ.
- ಹೊತ್ತಿ ಉರಿದ ಬಸ್, ಹನ್ನೆರಡು ಮಂದಿ ಸಜೀವ ದಹನ
ರಾಜಸ್ಥಾನದ ಬಾರ್ಮರ್, ಜೋಧ್ ಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಟ್ಯಾಂಕರೊಂದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ. ಬಸ್ಸಿನಲ್ಲಿದ್ದ ಹನ್ನೆರಡು ಮಂದಿ ಸಜೀವ ದಹನಗೊಂಡಿದ್ದು ಹಲವರು ಗಾಯಗೊಂಡಿದ್ದಾರೆ.
- ಭಾರತದ ಲಸಿಕೆಗೆ 96 ರಾಷ್ಟ್ರಗಳ ಮಾನ್ಯತೆ
ಭಾರತದ ಕೊರೊನಾ ಲಸಿಕೆಗಳಾದ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಈವರೆಗೆ ಒಟ್ಟು 96 ರಾಷ್ಟ್ರಗಳು ಮಾನ್ಯತೆ ನೀಡಿವೆ. ಈ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ತಿಳಿಸಿದ್ದಾರೆ.
- ಅಪ್ಪು: ಕಂಬನಿ ಮಿಡಿದ ನಟಿ ರಾಧಿಕಾ ಪಂಡಿತ್
ಪುನೀತ್ ಜೊತರೆಗಿರುವ ಫೋಟೋವನ್ನು ಹಂಚಿಕೊಂಡಿರುವ ನಟಿ ರಾಧಿಕಾ ಪಂಡಿತ್, ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಪ್ಪು ಸರ್ ನೀವಿಲ್ಲ ಎನ್ನುವುದನ್ನು ಹೃದಯ ಒಪ್ಪಿಕೊಳ್ಳುತ್ತಿಲ್ಲ. ನಿಮ್ಮ ಸಾವು ನಮ್ಮ ಚಿತ್ರರಂಗಕ್ಕೆ ತುಂಬಲಾಗದ ನಷ್ಟ, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದಿದ್ದಾರೆ.
- ನಿರೀಕ್ಷೆಯಂತೆ ಕೊಹ್ಲಿಗೆ ರೆಸ್ಟ್
ಎಲ್ಲರ ನಿರೀಕ್ಷೆಯಂತೆ ರೋಹಿತ್ ಶರ್ಮ ಭಾರತೀಯ ಟಿ20 ಕ್ರಿಕೆಟ್ ತಂಡದ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ 3 ಪಂದ್ಯಗಳ ಟಿ20 ಸರಣಿಗೆ ಮಂಗಳವಾರ ತಂಡವನ್ನು ಪ್ರಕಟಿಸಲಾಗಿದೆ. ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.