1. ಜನರ ಜೀವನ ಮುಖ್ಯ, ರಾಜಕೀಯ ಮುಖ್ಯ ಅಲ್ಲ: ಪಾದಯಾತ್ರೆ ಕುರಿತು ಕಾರಜೋಳ
ಕಾಂಗ್ರೆಸ್ ನ ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಮೀರಿ ಜನ ಸೇರುತ್ತಿದ್ದಾರೆ. ಕೋವಿಡ್ ಉಲ್ಬಣಸುವ ಸಂಭವವಿದೆ. ನಿಯಮದಂತೆ ಪ್ರತಿಭಟನೆ ಮಾಡಿ. ಪಾದಯಾತ್ರೆಗೆ ನಮ್ಮ ಸರ್ಕಾರದ ಅಭ್ಯಂತರ ಇಲ್ಲ. ಆದರೆ ನೀವು ಸಾವಿರ ಸಾವಿರ ಜನ ಸೇರಿಸುವುದರಿಂದ ಕೋವಿಡ್ ಹೆಚ್ಚಾಗುತ್ತದೆ. ಜನರ ಜೀವನ ಮುಖ್ಯ, ರಾಜಕೀಯ ಮುಖ್ಯ ಅಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು.
2. ಮೇಕೆದಾಟು ಪಾದಯಾತ್ರೆ ಆರಂಭ: ಪಾಂಚಜನ್ಯ ಮೊಳಗಿದೆ ಎಂದ ಡಿ.ಕೆ.ಶಿವಕುಮಾರ್”
ಐತಿಹಾಸಿಕ ಹೋರಾಟಕ್ಕೆ ಪಾಂಚಜನ್ಯ ಮೊಳಗಿದೆ ಇದು ಕನ್ನಡಿಗರ ಹಕ್ಕು ಮತ್ತು ಸ್ವಾಭಿಮಾನದ ʼಸಂಗಮ’. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಪಾದಯಾತ್ರೆಗೆ ಚಾಲನೆ ನೀಡಿ ಟ್ವೀಟ್ ಮಾಡಿದ್ದಾರೆ.
3. ಸಚಿವ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್: ಖ್ಯಾತ ಜ್ಯೋತಿಷಿ ಪುತ್ರ ಸೇರಿ ಇಬ್ಬರ ಬಂಧನ
ಸಚಿವ ಎಸ್. ಟಿ. ಸೋಮಶೇಖರ್ ಅವರ ಪುತ್ರ ನಿಶಾಂತ್ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ಖ್ಯಾತ ಜ್ಯೋತಿಷಿಯೊಬ್ಬರ ಪುತ್ರ ರಾಹುಲ್ ಭಟ್ ಸೇರಿ ಇಬ್ಬರನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.
4. ಒಂದೇ ದಿನ 1.59 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ; 3623ಕ್ಕೇರಿದ ಒಮಿಕ್ರಾನ್ ಸಂಖ್ಯೆ
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,59,623 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಶನಿವಾರ ಪತ್ತೆಯಾದ ಪ್ರಕರಣಗಳಿಗಿಂತ ಶೇಕಡಾ 12.4 ಹೆಚ್ಚಿನ ಪ್ರಕರಣಗಳು ರವಿವಾರ ದೃಢವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
5. ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬುಲ್ಲಿಬಾಯಿ ಆ್ಯಪ್ ಆರೋಪಿ ನೀರಜ್
ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕಲು ಬಳಸುತ್ತಿದ್ದ ಬುಲ್ಲಿಬಾಯಿ ಆ್ಯಪ್ ನ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ದೆಹಲಿ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಐಎಫ್‌ಎಸ್‌ಒ ವಿಶೇಷ ಘಟಕದ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.
6. “ಸರ್” “ಮೇಡಂ” ಅನ್ನುವ ಹಾಗಿಲ್ಲ! ಕೇರಳದ ಶಾಲೆಯಲ್ಲಿ ಹೊಸ ಕ್ರಮ
ಕೇರಳದ ಶಾಲೆಯೊಂದು ಶೈಕ್ಷಣಿಕ ಸ್ಥಳಗಳಲ್ಲಿ ಲಿಂಗ ತಟಸ್ಥತ ದೋರಣೆನ್ನು ಅನುಸರಿಸುವ ಸಲುವಾಗಿ ದೊಡ್ಡ ಹೆಜ್ಜೆಯೊಂದನ್ನು ಇಟ್ಟಿದೆ. ಶಾಲೆಯ ಆಡಳಿತವು ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಸರಳವಾಗಿ “ಟೀಚರ್” ಎಂದು ಸಂಬೋಧಿಸುವುದನ್ನು ಕಡ್ಡಾಯಗೊಳಿಸಿದೆ ಮತ್ತು “ಸರ್” ಅಥವಾ “ಮೇಡಂ” ಎಂಬ ಲಿಂಗ-ವ್ಯಾಖ್ಯಾನದ ಪದಗಳನ್ನು ಬಳಸಬಾರದು ಎಂದು ಸೂಚಿಸಿದೆ.
7. ರಶ್ಮಿಕಾ ಮಂದಣ್ಣ ಅಲ್ಲ, ರಶ್ಮಿಕಾ ಮಡೋನಾ.. ಇದು ಪುಷ್ಪ ತಂಡದ ಎಡವಟ್ಟು!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪ ಚಿತ್ರ ಸೂಪರ್ ಹಿಟ್ ಆಗಿದೆ. ಆದರೆ ಚಿತ್ರದ ಕೊನೆಯಲ್ಲಿ ರಶ್ಮಿಕಾ ಹೆಸರನ್ನು ತಪ್ಪಾಗಿ ಮುದ್ರಿಸಿ, ಚಿತ್ರ ತಂಡ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ. ಮಂದಣ್ಣ ಹೆಸರಿನ ಬದಲಿಗೆ ಮಡೋಣ ಎಂದು ತಪ್ಪಾಗಿ ಮುದ್ರಿಸಲಾಗಿದ್ದು, ಈ ಬಗ್ಗೆ ಹಲವು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
8. ಕ್ರೀಸ್ ಕಚ್ಚಿ ನಿಂತ ಆ್ಯಂಡರ್ಸನ್..: ಕೊನೆಗೂ ಸೋಲು ತಪ್ಪಿಸಿಕೊಂಡ ರೂಟ್ ಪಡೆ
ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಸಿಡ್ನಿ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಸೋಲು ತಪ್ಪಿಸುವ ಇಂಗ್ಲೆಂಡ್ ನ ಪ್ರಯತ್ನ ಮತ್ತು ಗೆಲುವು ಕಾಣುವ ಆಸ್ಟ್ರೇಲಿಯಾದ ಪ್ರಯತ್ನದಲ್ಲಿ ಕೊನೆಗೆ ಇಂಗ್ಲೆಂಡ್ ನ ಪ್ರಯತ್ನಕ್ಕೆ ಗೆಲುವಾಗಿದೆ. 9 ವಿಕೆಟ್ ಕಳೆದುಕೊಂಡ ವೇಳೆ ಕ್ರೀಸ್ ನಲ್ಲಿದ್ದಿದ್ದು, ಆ್ಯಂಡರ್ಸನ್ ಮತ್ತು ಬ್ರಾಡ್. ಸ್ಟೀವ್ ಸ್ಮಿತ್ ಎಸೆದ ಕೊನೆಯ ಓವರ್ ನ್ನು ಆ್ಯಂಡರ್ಸನ್ ಎದುರಿಸಿ, ಪೂರ್ತಿ ಓವರ್ ನ್ನು ರಕ್ಷಣಾತ್ಮಕವಾಗಿ ಆಡಿ, ಪಂದ್ಯಕ್ಕೆ ಡ್ರಾ ಮುದ್ರೆ ಒತ್ತಿದರು.