Advertisement

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

05:52 PM Dec 07, 2021 | Team Udayavani |
1. ಹೆಚ್ ಡಿಕೆ ಮಾತಿಗೆ ನೋ ಕಮೆಂಟ್ ಎಂದ ಸಿಎಂ ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತಾನಾಡಿದ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅದು ಅವರ ಪಕ್ಷದ ವಿಚಾರ, ಅದರ ಬಗ್ಗೆ ಕಮೆಂಟ್ ಮಾಡಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. 2. ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಪ್ರಧಾನಿ ಮೋದಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂಬಂಧ ಭಾರತಕ್ಕೆ ಬೂಸ್ಟರ್‌ ಡೋಸ್‌’ ಎಂದೇ ಪರಿಗಣಿಸಲಾಗಿರುವ ಬಹು ನಿರೀಕ್ಷಿತ ಎಸ್‌-400 ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಪೂರೈಕೆಯನ್ನು ರಷ್ಯಾ ಆರಂಭಿಸಿದೆ. 3. ಡಿಜಿಟಲ್‌ ವಹಿವಾಟು ಶೇ. 53 ಏರಿಕೆ ಎರಡು ವರ್ಷಗಳಲ್ಲಿ ಭಾರತದಲ್ಲಿ ಪ್ರತಿದಿನ ಏನಿಲ್ಲವೆಂದರೂ 21.79 ಕೋಟಿ ಡಿಜಿಟಲ್ ವಹಿವಾಟುಗಳು ನಡೆದಿವೆ. ಇದು ಈ ಹಿಂದಿಗಿಂತ ಶೇಖಡಾ 53ರಷ್ಟು ಹೆಚ್ಚಳವಾಗಿದೆ. ಈ ಮಾಹಿತಿಯನ್ನು ಆರ್‌ಬಿಐ “ಪೇಮೆಂಟ್‌ ಮತ್ತು ಸೆಟಲ್‌ಮೆಂಟ್‌ ಸಿಸ್ಟಮ್ಸ್‌’ನ ಚೀಫ್ ಜನರಲ್‌ ಮ್ಯಾನೇಜರ್‌ ಪಿ. ವಾಸುದೇವನ್‌ ತಿಳಿಸಿದ್ದಾರೆ. 4. ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ..! ಕೋವಿಡ್ ನ ಹೊಸ ರೂಪಾಂತರ ತಳಿ ಒಮಿಕ್ರಾನ್ ನ ಹಲವು ಪ್ರಕರಣಗಳು ಪತ್ತೆಯಾಗುತ್ತಿದೆ. ಈ ನಡುವೆ ಭಾರತದಲ್ಲಿ ಫೆಬ್ರುವರಿ ಹೊತ್ತಿಗೆ ಮೂರನೇ ಅಲೆಯ ಮೂಲಕ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿಗಳು ಎಚ್ಚರಿಸಿದ್ದಾರೆ. 5. ಸಂಸತ್ ಕಲಾಪಕ್ಕೆ ಗೈರು: ಪ್ರಧಾನಿ ಎಚ್ಚರಿಕೆ ಲೋಕಸಭೆ ಕಲಾಪಕ್ಕೆ ಬಿಜೆಪಿ ಸಂಸದರು ಗೈರು ಹಾಜರಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ವೇಳೆ ನೀವು ನಿಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ, ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಬೇಕಾದೀತು ಎಂದು ಪ್ರಧಾನಿ ಸಂಸದರಿಗೆ ಎಚ್ಚರಿಕೆಯನ್ನು ನೀಡಿದರು. 6. ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ! ದಿನಂಪ್ರತಿ ಮನೆಗೆ ನುಗ್ಗುತ್ತಿದ್ದ ಸರ್ಪಗಳಿಂದ ಮುಕ್ತಿ ಪಡೆಯಲೆಂದು ಮನೆಯ ಮಾಲೀಕ ಮಾಡಿದ ಉಪಾಯ ಭಾರಿ ನಷ್ಟಕ್ಕೆ ಕಾರಣವಾಗಿದೆ. ಅಚಾನಕ್ಕ್‌ ಆಗಿ ಈತನಿಂದ ತಗುಲಿದ ಬೆಂಕಿ ಬರೋಬ್ಬರಿ 13.50 ಕೋಟಿ ರೂ. ಪಾವತಿಸಿ ಇತ್ತೀಚೆಗಷ್ಟೇ ಖರೀದಿಸಿದ್ದ ಮನೆ ಸುಟ್ಟು ಕರಕಲಾಗುವಂತೆ ಮಾಡಿದೆ. 7. ‘ವಿಕ್ರಾಂತ್ ರೋಣ’ ಬಿಡುಗಡೆ ದಿನಾಂಕ ಘೋಷಣೆ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ ’ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. 2022ರ ಫೆಬ್ರವರಿ 24 ರಂದು ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ತೆರೆ ಕಾಣಲಿದೆ. ಸುದೀಪ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ. 8. ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌ ಜಿಂಬಾಬ್ವೆಯಿಂದ ಇತ್ತೀಚೆಗಷ್ಟೇ ವಾಪಸಾದ ಬಾಂಗ್ಲಾದೇಶ ವನಿತಾ ಕ್ರಿಕೆಟ್‌ ತಂಡದ ಇಬ್ಬರಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಹೀಗಾಗಿ ತಂಡದ ಐಸೊಲೇಶನ್‌ ಅವಧಿಯನ್ನು ವಿಸ್ತರಿಸಲಾಗಿದೆ. ಈ ಮಾಹಿತಿಯನ್ನು ಬಾಂಗ್ಲಾದೇಶದ ಕ್ರಿಕೆಟ್‌ ಮಂಡಳಿ ತಿಳಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next