Advertisement

ಲತಾ ಮಂಗೇಶ್ಕರ್ ಸ್ಥಿತಿ ಮತ್ತೆ ಗಂಭೀರ, ಐಸಿಯುನಲ್ಲಿ ನಿಗಾ

05:43 PM Feb 05, 2022 | Team Udayavani |
1. ತ್ರಿವಳಿ ತಲಾಖ್ ರದ್ದು ಮಾಡಿ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ಕೊಟ್ಟಿದ್ದು ಯಾರು? ನಾಡಿನ ಎಲ್ಲಾ ಮುಸಲ್ಮಾನ ಮಹಿಳೆಯರಿಗೆ ವಿನಂತಿ ಮಾಡುತ್ತೇನೆ, ನಿಮಗೆ ತ್ರಿವಳಿ ತಲಾಕ್ ರದ್ದತಿ ಮಾಡಿ ಭದ್ರತೆ ಯನ್ನು ಕೊಟ್ಟಿದ್ದು ಮೋದಿ ಸರಕಾರ. ಅದನ್ನು ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನ ಮಾಡಬೇಕು ಎಂದು ಸಚಿವ ಸುನೀಲ್ ಕುಮಾರ್ ಶನಿವಾರ ಹೇಳಿಕೆ ನೀಡಿದ್ದಾರೆ. 2. ಭಾರತ ಹೆಣ್ಣುಮಕ್ಕಳ ಭವಿಷ್ಯ ಕಸಿದುಕೊಳ್ಳುತ್ತಿದೆ; ರಾಹುಲ್ ಟ್ವೀಟ್ ಉಡುಪಿ ಜಿಲ್ಲೆಯ ಕೆಲವು ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 3. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೊಂಡಿ, ಕನ್ನಡದ ಕಬೀರ ಇಬ್ರಾಹಿಂ ಸುತಾರ ಸ್ಥಳೀಯ ಪ್ರವಚನಕಾರ, ಕನ್ನಡದ ಕಬೀರ, ಹಿಂದೂ- ಮುಸ್ಲಿಂ ಭಾವೈಕ್ಯತಾ ಕೊಂಡಿ, ದೇಶದ ಅತ್ಯುನ್ನತ ಪ್ರಶಸ್ತಿಯಾದ 2018ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಶರಣಶ್ರೀ ಇಬ್ರಾಹಿಂ ಸುತಾರ ಶನಿವಾರ ಮುಂಜಾನೆ ಹೃದಯಾಘಾತದಿಂದ ಮಹಾಲಿಂಗಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 4. ಲತಾ ಮಂಗೇಶ್ಕರ್ ಸ್ಥಿತಿ ಮತ್ತೆ ಗಂಭೀರ, ಐಸಿಯುನಲ್ಲಿ ನಿಗಾ ಭಾರತದ ಖ್ಯಾತ ಗಾಯಕಿ, ನೈಟಿಂಗೇಲ್ ಆಫ್ ಇಂಡಿಯಾ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದ್ದು, ವೆಂಟಿಲೇಟರ್‌ನಲ್ಲಿದ್ದಾರೆ . ಇನ್ನೂ ಐಸಿಯುನಲ್ಲಿದ್ದು, ವೈದ್ಯರ ನಿಗಾದಲ್ಲಿ ಇದ್ದಾರೆ ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 5. ಭಾರತದ ರಾಜಕೀಯ ಇಸ್ರೇಲ್‌ನಂತಾಗಬಹುದೇ ಎಂಬ ಭಯ: ಓವೈಸಿ ಭಾರತದ ರಾಜಕೀಯ ಇಸ್ರೇಲ್‌ನಂತಾಗಬಹುದೇ ಎಂಬ ಭಯ ನನ್ನನ್ನು ಕಾಡುತ್ತಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿಕೆ ನೀಡಿದ್ದಾರೆ. 6. ಭಾರತದ ಯಶಸ್ವಿ ಕಾರ್ಯಾಚರಣೆ: ಮುಂಬಯಿ ಸರಣಿ ಸ್ಫೋಟದ ಮೋಸ್ಟ್ ವಾಂಟೆಡ್ ಉಗ್ರ UAEನಲ್ಲಿ ಬಂಧನ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಭಾರತದ ಗುಪ್ತಚರ ಇಲಾಖೆಯ ಮಹತ್ವದ ಕಾರ್ಯಾಚರಣೆಯಲ್ಲಿ 1993ರ ಮುಂಬಯಿ ಸರಣಿ ಬಾಂಬ್ ಸ್ಪೋಟದಲ್ಲಿ ಶಾಮೀಲಾಗಿದ್ದ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಅಬುಬಕರ್ ನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ತಿಳಿಸಿದೆ. 7. ಫೆ.25ಕ್ಕೆ ಪ್ರೇಮ್ ನಿರ್ದೇಶನದ ‘ಏಕ್‌ ಲವ್‌ ಯಾ’ ರಿಲೀಸ್‌ ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರ “ಏಕ್‌ ಲವ್‌ ಯಾ’ಚಿತ್ರ ಇದೇ ಫೆ.25ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಪ್ರೇಮ್‌ ನಿರ್ದೇಶನದ ಸಿನಿಮಾವೊಂದು ದೊಡ್ಡ ಗ್ಯಾಪ್‌ನ ನಂತರ ಬಿಡುಗಡೆಯಾದಂತಾಗುತ್ತದೆ. ಇನ್ನು, ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಫೆ.11ರಂದು ಸಂಜೆ 5 ಗಂಟೆಗೆ ಮೈಸೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. 8. ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಇಶಾನ್ ಕಿಶನ್ ಅವರು ಆರಂಭಿಕರಾಗಿ ಆಡುತ್ತಾರೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದರು. ಮಯಾಂಕ್ ಅಗರ್ವಾಲ್ ಅವರ ಕ್ವಾರಂಟೈನ್ ಇನ್ನೂ ಮುಗಿಯದ ಕಾರಣ ಇಶಾನ್ ಕಿಶನ್ ನನ್ನೊಂದಿಗೆ ಆರಂಭಿಕರಾಗಿ ಆಡಲಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next