Advertisement

ಬಡಾಯಿ ಸಹೋದರರ ಆಟದ ಅಂತ್ಯ ಕ್ಷಣ ಹತ್ತಿರವಾಗಿದೆ: ಡಿಕೆ ಬ್ರದರ್ಸ್ ವಿರುದ್ಧ

07:43 PM Jan 04, 2022 | Team Udayavani |
1. ಮೋದಿ- ಶಾ ಯಾತ್ರೆ ಮಾಡಿಲ್ವಾ..: ಸಿದ್ದರಾಮಯ್ಯ ಪ್ರಶ್ನೆ ಮೇಕೆದಾಟು ಪಾದಯಾತ್ರೆ ಮುಂದೂಡಬೇಕು ಎಂಬ ಸಚಿವ ಸುಧಾಕರ್ ಮನವಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. “ಕೋವಿಡ್ ನೆಪವೊಡ್ಡಿ ಪಾದಯಾತ್ರೆ ತಡೆಯುವ ಯತ್ನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಉತ್ತರ ಪ್ರದೇಶದಲ್ಲಿ ಪಾದಯಾತ್ರೆ ಮಾಡಿಲ್ಲವೆ? ಎಂದು ಪ್ರಶ್ನೆ ಮಾಡಿದರು. 2. ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ 19 ಸೋಂಕು ಹರಡುವಿಕೆ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿರುವುದಾಗಿ ಮಂಗಳವಾರ ತಿಳಿಸಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ. 3. ಪ್ರವಾಸಕ್ಕೆ ತೆರಳಿದ್ದ 30 ಮಹಿಳೆಯರಿಗೆ ಕೋವಿಡ್ ಸೋಂಕು ದೃಢ! ತಮಿಳುನಾಡಿನಿಂದ ಮಂಡ್ಯಕ್ಕೆ ಬಂದ 30 ಮಹಿಳೆಯರಿಗೆ ಕೋವಿಡ್ ಸೋಂಕು ದೃಢವಾಗಿದೆ. ಈ ಮಹಿಳಾ ಭಕ್ತರು ಕಳೆದ ವಾರ ಶ್ರೀರಂಗಪಟ್ಟಣದ ವಿವಿಧ ಗ್ರಾಮಗಳಿಂದ ಹೊರಟಿದ್ದು, ಒಟ್ಟು ಆರು ಬಸ್ ಗಳಲ್ಲಿ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದರು. 4. ಬಡಾಯಿ ಸಹೋದರರ ಆಟದ ಅಂತ್ಯ ಕ್ಷಣ ಹತ್ತಿರವಾಗಿದೆ: ಎಚ್ ಡಿಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಮಾತಿನ ಸಮರ ಮುಂದುವರಿದಿದೆ. ಇಂದು ಮಾಜಿ ಸಿಎಂ ಎಚ್ ಡಿಕೆ ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ವಿರುದ್ಧ ಸರಣಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಟ್ವೀಟ್ ನಲ್ಲಿ ಸಹೋದರರ ಆಟದ ಅಂತ್ಯ ಹತ್ತಿರ ಬಂದಿದೆ ಕಿಡಿಕಾರಿದ್ದಾರೆ. 5. ಅರವಿಂದ ಕೇಜ್ರಿವಾಲ್ ಗೆ ಕೋವಿಡ್ ಸೋಂಕು ದೃಢ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಕೋವಿಡ್ 19 ಸೋಂಕು ದೃಢವಾಗಿದೆ. “ನನಗೆ ಕೋವಿಡ್‌ 19 ಪಾಸಿಟಿವ್ ಪತ್ತೆಯಾಗಿದೆ. ಸೌಮ್ಯ ರೋಗಲಕ್ಷಣಗಳಿವೆ. ಮನೆಯಲ್ಲಿ ನನ್ನನ್ನು ನಾನು ಪ್ರತ್ಯೇಕಿಸಿಕೊಂಡಿದ್ದೇನೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. 6. ಬುಲ್ಲಿ ಬಾಯ್ ಆ್ಯಪ್ ಪ್ರಕರಣಕ್ಕೆ ಬೆಂಗಳೂರಿನ ನಂಟು! ಬುಲ್ಲಿ ಬಾಯ್ ಆ್ಯಪ್ ಪ್ರಕರಣಕ್ಕೆ ಬೆಂಗಳೂರಿನ ನಂಟಿರುವುದು ಈಗ ಸಾಭೀತಾಗಿದೆ. ಮುಸ್ಲಿಂ ಸಮುದಾಯದ ಸಾವಿರಾರು ಮಹಿಳೆಯರ ಫೋಟೋಗಳನ್ನು ಆನ್‌ ಲೈನ್‌ನಲ್ಲಿ ಮಾರಾಟ ಮಾಡಿದ “ಬುಲ್ಲಿ ಭಾಯ್‌’ ಆ್ಯಪ್ ಪ್ರಕರಣಕ್ಕೆ ತಿರುವು ದೊರಕಿದೆ. ಈ ಸಂಬಂಧ ಬೆಂಗಳೂರಿನ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 7. ಟಾಲಿವುಡ್‌ ಕಡೆಗೆ ಸಲಗ ಸಂಚಾರ “ಸಲಗ’ ಚಿತ್ರದ ಸೂಪರ್ ಹಿಟ್ ದಾಖಲೆಯ ಬಳಿಕ ದುನಿಯಾ ವಿಜಯ್ ನ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಈ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಸದ್ಯದ ಮಾಹಿತಿ ಪ್ರಕಾರ ದುನಿಯಾ ವಿಜಯ್‌ ಶೀಘ್ರದಲ್ಲಿಯೇ ತೆಲುಗು ಸಿನಿಮಾವೊಂದರಲ್ಲಿ ಬಣ್ಣ ಹಚ್ಚುವ ಮೂಲಕ ಟಾಲಿವುಡ್‌ ಅಂಗಳಕ್ಕೆ ಎಂಟ್ರಿಯಾಗುತ್ತಿದ್ದಾರೆ. 8. ರಬಾಡಾ, ಅಂಪೈರ್ ಗೆ ಕ್ಷಮೆ ಕೇಳಿದ ಕೆ.ಎಲ್.ರಾಹುಲ್! ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 202 ರನ್ ಗಳಿಗೆ ಆಟ ಮುಗಿಸಿದೆ. ಐದನೇ ಓವರ್ ನ ಮೂರನೇ ಎಸೆತ ಎಸೆಯಲು ಓಡಿ ಬಂದ ಆಫ್ರಿಕಾ ಬೌಲರ್ ರಬಾಡನನ್ನು ರಾಹುಲ್ ಕೊನೇಯ ಕ್ಷಣದಲ್ಲಿ ತಡೆದರು. ಮತ್ತೆ ಅರಿತು ಎದುರು ಬಂದ ರಾಹುಲ್, ಬೌಲರ್ ರಬಡಾ, ಸ್ಲಿಪ್ ಫೀಲ್ಡರ್ಸ್ ಮತ್ತು ಅಂಪೈರ್ ಗೆ ಕ್ಷಮೆ ಕೇಳಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next