ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಎಸ್.ಸಿ. ಮೋರ್ಚಾ ಪ್ರತಿಭಟನೆ
ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ‘ದಲಿತರು ಬಿಜೆಪಿಗೆ ಹೊಟ್ಟೆ ಪಾಡಿಗಾಗಿ ಹೋಗಿದ್ದಾರೆ’ ಎಂಬ ಹೇಳಿಕೆ ವಿರೋಧಿಸಿ ಬಿಜೆಪಿ ಎಸ್.ಸಿ. ಮೋರ್ಚಾ ಪ್ರತಿಭಟನೆ ನಡೆಸಿದೆ.
ಇದೀಗ ಹಸುರು ಪಟಾಕಿಯದ್ದೇ ಸದ್ದು
ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಸರಕಾರ ಈ ಬಾರಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಜನರಲ್ಲಿ ಗೊಂದಲವಿತ್ತು. ಆದರೆ ಸುಪ್ರೀಂ ಕೋರ್ಟ್ ಮಾಲಿನ್ಯ ಮತ್ತು ಶಬ್ಧದ ಪ್ರಮಾಣ ಕಡಿಮೆಯಿರುವ ಹಸುರು ಪಟಾಕಿಗಳನ್ನು ಸಿಡಿಸಲು ತನ್ನ ಆಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ ಅಪ್ಪು ಅಭಿಮಾನಿ
ತುಮಕೂರಿನ ಕೋಡಿಪಾಳ್ಯ ಗ್ರಾಮದ ಅಪ್ಪು ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ನೇಣು ಹಾಕಿಕೊಂಡಿರುವುದಾಗಿ 30 ವರ್ಷ ಪ್ರಾಯದ ಭರತ್ ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕೋವಿಡ್ ಇಳಿಕೆ ಬೆನ್ನಲ್ಲೇ ಡೆಂಗ್ಯೂ ಅಟ್ಟಹಾಸ
ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣ ಇಳಿಮುಖವಾಗುತ್ತಿರುವ ಬೆನ್ನಲ್ಲೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಒಂಬತ್ತು ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಡೆಂಗ್ಯೂ ಪ್ರಕರಣ ವರದಿಯಾಗತೊಡಗಿದೆ. ಈ ಹಿನ್ನೆಲೆಯಲ್ಲಿ ರೋಗದ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ ತಜ್ಞರ ತಂಡಗಳನ್ನು ಕಳುಹಿಸಿರುವುದಾಗಿ ತಿಳಿಸಿದೆ.
ಸಿಂಗ್ ಪತ್ರ ರಹಸ್ಯ
ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದಿರುವ ಏಳು ಪುಟಗಳ ಭಾವನಾತ್ಮಕ ಪತ್ರ ಬಹಿರಂಗಗೊಂಡಿದೆ. ನನ್ನನ್ನು ಪದಚ್ಯುತಗೊಳಿಸಲು ರಾತ್ರೋರಾತ್ರಿ ಪಿತೂರಿ ನಡೆಸಿದ್ದೀರಿ ಎಂದು ಸಿಂಗ್ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ಸೇನೆಗೆ ಶಸ್ತ್ರಾಸ್ತ್ರ: ಕೇಂದ್ರದ ಒಪ್ಪಿಗೆ
ಭಾರತೀಯ ಸೇನೆಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.ನಿಂದ 7,965 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಗೆ ರಕ್ಷಣ ಸಚಿವಾಲಯವು ಅನುಮೋದನೆ ನೀಡಿದೆ. ಇದರಲ್ಲಿ ಎಚ್‌ಎಎಲ್‌ನಿಂದ 12 ಕಡಿಮೆ ತೂಕದ ಹೆಲಿಕಾಪ್ಟರ್‌ಗಳ ಖರೀದಿಯು ಒಳಗೊಂಡಿದೆ.
ರಾಮ್ ಚರಣ್ ಭಾವುಕ ನುಡಿ
ಅಪ್ಪು ನಿಧನ ಸುದ್ದಿ ತಿಳಿದು ತೆಲುಗು ಸ್ಟಾರ್ ರಾಮ್ ಚರಣ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅಪ್ಪು ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಇದೇ ವೇಳೆ ನನ್ನ ಸಹೋದರನ್ನೇ ಕಳೆದುಕೊಂಡಷ್ಟು ನೋವಾಗುತ್ತಿದೆ ಎಂದು ಭಾವುಕರಾಗಿ ನುಡಿದರು.
ಶಾನ್ ಕಿಶನ್ ಓಪನರ್ ವಿವಾದ
ಟಿ 20 ವಿಶ್ವಕಪ್‌ನ ನ್ಯೂಜಿಲ್ಯಾಂಡ್ ಎದುರಿನ ಪಂದ್ಯದಲ್ಲಿ ಇಶಾನ್ ಕಿಶನ್ ಅವರನ್ನು ಆರಂಭಿಕನಾಗಿ ಕಳುಹಿಸಿದ ಘಟನೆ ವಿವಾದಕ್ಕೆ ತಿರುಗಿತ್ತು. ‘ಮೂರನೇ ಕ್ರಮಾಂಕದಲ್ಲಿ ಕಳುಹಿಸುವಲ್ಲಿ ರೋಹಿತ್ ಶರ್ಮಾ ಅವರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಭಾರತ ತಂಡದ ಬ್ಯಾಟಿಂಗ್ ಕೋಚ್ ರಾಥೋರ್ ಹೇಳಿದ್ದಾರೆ.