Advertisement

ಹಾವನ್ನು ತಪ್ಪಿಸಲು ಹೋಗಿ ನಾಲೆಗೆ ಉರುಳಿದ ಕಾರು, ಪತ್ನಿ ಸಾವು, ಪತಿ ಪಾರು

05:50 PM Feb 03, 2022 | Team Udayavani |
1. ರಾಹುಲ್ ನಿಮ್ಮ ಸ್ಕ್ರಿಫ್ಟ್ ರೈಟರ್ ಚೀನಾದವರೋ ಅಥವಾ ಪಾಕಿಸ್ತಾನದವರೋ: ಬಿಜೆಪಿ ಸಂಸದ ರಾಥೋಡ್ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್ ಡಿಎ ಸರ್ಕಾರದ ತಪ್ಪು ವಿದೇಶಾಂಗ ನೀತಿಗಳಿಂದಾಗಿ ಭಾರತ ಇಂದು ಏಕಾಂಗಿ ರಾಷ್ಟ್ರವಾಗಿದೆ ಎಂಬ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜ್ಯವರ್ಧನ್ ರಾಥೋಡ್ ಗುರುವಾರ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ರಾಹುಲ್ ಗಾಂಧಿಯ ಸ್ಕ್ರಿಫ್ಟ್ ರೈಟರ್ ಚೀನಾ ಅಥವಾ ಪಾಕಿಸ್ತಾನದವರಿರಬೇಕು ಎಂದಿದ್ದಾರೆ. 2. ಮುಂಬಯಿ ಪ್ರಯಾಣಿಕರ ಗಮನಕ್ಕೆ ರೈಲು ಸಂಚಾರ ರದ್ದು, ವಿಳಂಬ ರೈಲ್ವೇ ಇಲಾಖೆಯ ನಿರ್ಧಾರದಂತೆ ಮುಂಬಯಿ ವಿಭಾಗದ ಥಾಣೆ-ದಿವಾ ಜಂಕ್ಷನ್‌ನ 5 ಮತ್ತು 6ನೇ ಪಥದ ಉನ್ನತೀಕರಣ ಕಾಮಗಾರಿ ನಡೆಯುತ್ತಿರುವುದರಿಂದ, ಫೆ. 5ರಿಂದ 7ರ ಅವಧಿಯಲ್ಲಿ, ಕೆಲವು ರೈಲು ಸಂಚಾರ ರದ್ದು ಮಾಡಿ, ಇನ್ನು ಕೆಲವು ರೈಲುಗಳು ವಿಳಂಬವಾಗಿ ಸಂಚರಿಸುವಂತೆ ವೇಳಾಪಟ್ಟಿ ರೂಪಿಸಲಾಗಿದೆ. 3. ಇಮ್ರಾನ್ ಖಾನ್ ಚೀನಾ ಭೇಟಿಗೂ ಮುನ್ನ ಪಾಕ್ ನ ಎರಡು ಸೇನಾ ನೆಲೆ ಮೇಲೆ ಉಗ್ರರ ದಾಳಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಚೀನಾಕ್ಕೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಪ್ರತ್ಯೇಕತಾವಾದಿ ಉಗ್ರರು ಎರಡು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ. 4. ಶಿವಮೊಗ್ಗ: ಹಾವನ್ನು ತಪ್ಪಿಸಲು ಹೋಗಿ ನಾಲೆಗೆ ಉರುಳಿದ ಕಾರು ಗಾಜನೂರು ಬಳಿ ದಾರಿಗೆ ಅಡ್ಡಬಂದ ಹಾವನ್ನು ತಪ್ಪಿಸಲು ಹೋಗಿ ಕಾರೊಂದು ತುಂಗಾ ಎಡದಂಡೆ ನಾಲೆಗೆ ಉರುಳಿದೆ. ಈ ಘಟನೆಯಲ್ಲಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಪತಿ ಬದುಕುಳಿದಿದ್ದಾರೆ. ಗುರುವಾರ ಬೆಳಗ್ಗಿನ ಜಾವ 3 ಗಂಟೆಗೆ ಘಟನೆ ನಡೆದಿದೆ. 5.ಕೆಟ್ಟ ವಿದೇಶಾಂಗ ನೀತಿಯಿಂದ ಚೀನ, ಪಾಕ್‌ ಹತ್ತಿರ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರಕಾರದ ತಪ್ಪು ವಿದೇಶಾಂಗ ನೀತಿಗಳಿಂದಾಗಿ, ಭಾರತ ಇಂದು ಏಕಾಂಗಿ ರಾಷ್ಟ್ರವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಬುಧವಾರ ನಡೆದ ರಾಷ್ಟ್ರ ಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 6. ಅಂಡರ್‌-19 ಏಕದಿನ ವಿಶ್ವಕಪ್‌ಗಾಗಿ ಭಾರತ -ಇಂಗ್ಲೆಂಡ್ ಹಣಾಹಣಿ ಆಂಟಿಗುವಾದ ಕೂಲಿಡ್ಜ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ ಅಂಡರ್-19 ಏಕದಿನ ವಿಶ್ವಕಪ್ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 96 ರನ್ ಗಳ ಭರ್ಜರಿ ಜಯಗಳಿಸಿ ಫೈನಲ್ ಪ್ರವೇಶಿಸಿದೆ. ಫೈನಲ್ ನಲ್ಲಿ ಇಂಗ್ಲೆಂಡ್ ತಂಡ ದೊಂದಿಗೆ ಹಣಾಹಣಿ ನಡೆಸಲಿದೆ. 7. ಅಪ್ಪು ಸಮಾಧಿಗೆ 'ಪುಷ್ಪ' ನಮನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಹ ಲೋಕ ತ್ಯಜಿಸಿ ಮೂರು ತಿಂಗಳು ಕಳೆದರೂ ಅವರ ಮೇಲಿನ ಅಭಿಮಾನದ ಪ್ರವಾಹ ಇನ್ನೂ ಹರಿಯುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ‘ಪುಷ್ಪ’ ಮೂಲಕ ಭಾರಿ ಖ್ಯಾತಿ ಗಳಿಸಿದ ಟಾಲಿವುಡ್ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಗುರುವಾರ ರಾಜ್ ಕುಟುಂಬಕ್ಕೆ ಸಾಂತ್ವನ ಹೇಳಿ, ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ. 8. ಲಾರಿಯಸ್‌ ಪ್ರಶಸ್ತಿ ರೇಸ್‌ನಲ್ಲಿ ಒಲಿಂಪಿಯನ್‌ ನೀರಜ್‌ ಚೋಪ್ರಾ ಒಲಿಂಪಿಕ್ಸ್‌ ಚಾಂಪಿಯನ್‌ ನೀರಜ್‌ ಚೋಪ್ರಾ ಹೆಸರನ್ನು ಪ್ರತಿಷ್ಠಿತ ಲಾರಿಯಸ್‌ “ವರ್ಲ್ಡ್ ಬ್ರೇಕಿಂಗ್‌ ಥ್ರೂ ಆಫ್ ದ ಇಯರ್‌’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಎಪ್ರಿಲ್‌ನಲ್ಲಿ ಪ್ರಶಸ್ತಿ ವಿಜೇತರ ಹೆಸರು ಘೋಷಣೆಯಾಗಲಿದೆ.
Advertisement

Udayavani is now on Telegram. Click here to join our channel and stay updated with the latest news.

Next