Advertisement

ಲಖೀಂಪುರ್ ಹಿಂಸಾಚಾರ ಪ್ರಕರಣ : ಸಚಿವರ ಪುತ್ರನೇ ಪ್ರಮುಖ ಆರೋಪಿ

06:49 PM Jan 03, 2022 | Team Udayavani |
ಡಿಕೆ ಸುರೇಶ್, ಅಶ್ವತ್ಧ ನಾರಾಯಣ ಜಟಾಪಟಿ..! ರಾಮನಗರದ ಸರಕಾರಿ ಕಾರ್ಯಕ್ರಮದಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ಮಧ್ಯೆ ವಾಗ್ವಾದ ನಡೆದಿದೆ. ಇದು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಮೇಕೆದಾಟು ವಿಚಾರವಾಗಿ ಬಿಜೆಪಿ – ಕಾಂಗ್ರೆಸ್ ಮಧ್ಯೆ ನಡೆಯುತ್ತಿದ್ದ ಆರೋಪ ಈಗ ವೇದಿಕೆಯಲ್ಲೇ ಹೊಡೆದಾಟದ ಸ್ಥಿತಿ ನಿರ್ಮಿಸಿದೆ. 2. ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ 15 ರಿಂದ 18ನೇ ವಯೋಮಾನದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು. ಗೋವಿಂದರಾಜನಗರದ ಮೂಡಲ ಪಾಳ್ಯದ ಬಿಬಿಎಂಪಿ ಪ್ರೌಢಶಾಲೆಯಲ್ಲಿ ಲಸಿಕೆ ಅಭಿಯಾನ ನಡೆಯಿತು. 3. ಕೋಮು ಘರ್ಷಣೆ,ಇಬ್ಬರಿಗೆ ಚೂರಿ ಇರಿತ ಕೋವು ಸಂಘರ್ಷವೊಂದರಲ್ಲಿ ಇಬ್ಬರಿಗೆ ಚೂರಿ ಇರಿತವಾಗಿ ಹತ್ತು ಜನರು ಗಾಯಗೊಂಡಿದ್ದಾರೆ. ಈ ಘಟನೆ ಚಿಕ್ಕಜಂತಕಲ್ ಗ್ರಾಮದ ನಾಗೇನಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ರಾಮ ಇಲ್ಲ, ಹನುಮಂತ ಇಲ್ಲ ಎಂದು ಅನ್ಯಕೋಮಿನ ಯುವಕ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿದ್ದರಿಂದ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗಿದೆ. 4. ರಾಜ್ಯದ ಆರೋಗ್ಯ ಅಧಿಕಾರಿಗಳೊಂದಿಗೆ ಕೇಂದ್ರ ಅರೋಗ್ಯ ಸಚಿವರ ಸಭೆ ದೇಶಾದ್ಯಂತ ಕೋವಿಡ್ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲು ಕೇಂದ್ರ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಕೇಂದ್ರ ಆರೋಗ್ಯ ಮಂತ್ರಿ ಡಾ. ಮನ್ಸುಖ್ ಮಾಂಡವಿಯಾ, ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಯ ಪ್ರಮುಖರೊಂದಿಗೆ ವರ್ಚುವಲ್ ಸಭೆ ನಡೆಸಿದರು. 5. ಲಖೀಂಪುರ್ ಹಿಂಸಾಚಾರ ಸಚಿವರ ಪುತ್ರ ಪ್ರಮುಖ ಆರೋಪಿ ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ತಿರುವು ದೊರಕಿದೆ. ಈ ಸಂಬಂಧ ಉತ್ತರಪ್ರದೇಶ ಪೊಲೀಸರು ಸೋಮವಾರ 5,000 ಪುಟಗಳ ಆರೋಪ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ಗೃಹಖಾತೆ ಸಚಿವ ಅಜಯ್ ಮಿಶ್ರಾರ ಪುತ್ರ ಅಶೀಶ್ ಮಿಶ್ರಾನನ್ನು ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿದೆ. 6. ಬಿಜೆಪಿಗೆ ಸೇರ್ಪಡೆಗೊಂಡ ಕಾಂಗ್ರೆಸ್ ಶಾಸಕ ವಾಪಾಸ್..! ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನವೇ ಪಕ್ಷಾಂತರ ಪರ್ವ ಮುಂದುವರಿದಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದ ಕಾಂಗ್ರೆಸ್ ಶಾಸಕರೊಬ್ಬರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹರ್ ಗೋವಿಂದ್ ಪುರದ ಕಾಂಗ್ರೆಸ್ ಶಾಸಕರ ಬಲ್ವಿಂದರ್ ಸಿಂಗ್ ಲಡ್ಡಿ ಆರು ದಿನಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 7. ಜ.4 ‘ಏಕ್‌ ಲವ್‌ ಯಾ’ ಟ್ರೇಲರ್‌ ರಿಲೀಸ್ ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರ ಜನವರಿ 21ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲು ಮುಂದಾಗಿದೆ. ಚಿತ್ರದ ಟ್ರೇಲರ್‌ ಜನವರಿ 4ರಂದು ಬಿಡುಗಡೆಯಾಗಲಿದ್ದು, ಈ ಚಿತ್ರದ ಟ್ರೇಲರ್ ಎ2 ಯುಟ್ಯೂಬ್‌ ಚಾನೆಲ್‌ನಲ್ಲಿ ಸಿಗಲಿದೆ. 8. ಟೆಸ್ಟ್ ನಾಯಕನಾಗಿ ಹಲವು ದಾಖಲೆ ಬರೆದ ಕೆ.ಎಲ್.ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಇಂದು ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಮೈದಾನದಲ್ಲಿ ಆರಂಭವಾಗಿದೆ. ನಾಯಕ ವಿರಾಟ್ ಕೊಹ್ಲಿಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಗೆ ನಾಯಕತ್ವ ವಹಿಸಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next